Wednesday, January 15, 2025
Wednesday, January 15, 2025

ಪರೀಕ್ಷೆ ಒಂದು ವ್ಯವಸ್ಥೆ, ಆತಂಕ ಬೇಡ: ಡಾ. ವಿರೂಪಾಕ್ಷ ದೇವರಮನೆ

ಪರೀಕ್ಷೆ ಒಂದು ವ್ಯವಸ್ಥೆ, ಆತಂಕ ಬೇಡ: ಡಾ. ವಿರೂಪಾಕ್ಷ ದೇವರಮನೆ

Date:

ಉಪ್ಪೂರು, ಜ.14: ಯುವ ವಿಚಾರ ವೇದಿಕೆ ಕೊಳಲಗಿರಿ ಉಪ್ಪೂರು ಇದರ ರಜತ ಸಂಭ್ರಮ ಪ್ರಯುಕ್ತ ಉಪ್ಪೂರು ಸರಕಾರಿ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ನಡೆದ ‘ಪರೀಕ್ಷಾ ಪೂರ್ವ ತಯಾರಿ ಕಾರ್ಯಗಾರ’ದಲ್ಲಿ ಉಡುಪಿಯ ಡಾ. ಎ.ವಿ. ಬಾಳಿಗ ಆಸ್ಪತ್ರೆಯ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಸಂಪನ್ಮೂಲ ಉಪನ್ಯಾಸ ನೀಡಿದರು. ಪರೀಕ್ಷೆ ಒಂದು ವ್ಯವಸ್ಥೆ, ಆತಂಕ ಬೇಡ, ಜೀವನ ಎನ್ನುವ ಪರೀಕ್ಷೆ ಅದಕ್ಕಿಂತ ದೊಡ್ಡದು. ಪರೀಕ್ಷೆ ಎನ್ನುವುದು ಒಂದು ಹಬ್ಬ. ಧೈರ್ಯದಿಂದ ಎದುರಿಸಿ ಜೀವನದ ಗುರಿ ಸಾಧಿಸಿ ಎಂದರು.

ಯುವ ವಿಚಾರ ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ, ಉಪ್ಪೂರು ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸಂಧ್ಯಾ ಸರಸ್ವತಿ ಭಟ್ ಉಪಸ್ಥಿತರಿದ್ದು ಶುಭ ಹಾರೈಸಿದರು. ವೇದಿಕೆಯ ಸದಸ್ಯರಾದ ರವಿಂದ್ರ ಕುಮಾರ್, ಶಕುಂತಲಾ, ಕೇಶವ್, ವಿದ್ಯಾರ್ಥಿಗಳ ಪೋಷಕರು, ಶಾಲಾ ಅಧ್ಯಾಪಕರುಗಳು ಉಪಸ್ಥಿತರಿದ್ದರು. ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಸ್ವಾಗತಿಸಿ, ಸುಬ್ರಹ್ಮಣ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಭರತನಾಟ್ಯ ಜ್ಯೂನಿಯರ್: ಅದಿತಿ ನಾವಡ ಸಾಧನೆ

ಉಡುಪಿ, ಜ.14: ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ...

ಈಶ್ವರ್ ಮಲ್ಪೆ ತಂಡಕ್ಕೆ ಸನ್ಮಾನ

ಕೋಟ, ಜ.14: ಕಲೆಯನ್ನು ಆರಾಧಿಸಿ ಅದನ್ನು ವೇದಿಕೆಯಾಗಿರಿಸಿಕೊಂಡು ಸಾಮಾಜಿಕ ಕೈಂಕರ್ಯ ನಿಜಕ್ಕೂ...

ಉಡುಪಿ: ಹಲವೆಡೆ ಗುಡುಗು ಸಹಿತ ಮಳೆ

ಉಡುಪಿ, ಜ.14: ಜಿಲ್ಲೆಯ ಹಲವೆಡೆ ಮಂಗಳವಾರ ಸೂರ್ಯಾಸ್ತದ ಬಳಿಕ ಗುಡುಗು ಸಹಿತ...

ರಾಷ್ಟ್ರಮಟ್ಟದ ಅಬಾಕಸ್: ವೃಷಭ ಶೆಣೈ ಪ್ರಥಮ

ಉಡುಪಿ, ಜ.14: ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್...
error: Content is protected !!