Monday, February 24, 2025
Monday, February 24, 2025

ಕೋಟ ಮಹಿಳಾ ಮಂಡಲ 60 ನೇ ವರ್ಷದ ಸಂಭ್ರಮಾಚರಣೆ

ಕೋಟ ಮಹಿಳಾ ಮಂಡಲ 60 ನೇ ವರ್ಷದ ಸಂಭ್ರಮಾಚರಣೆ

Date:

ಕೋಟ, ಜ.14: ಇಂದಿನ ಕಾಲ ಮೊದಲಿನಂತ್ತಿಲ್ಲ, ಸಾಕಷ್ಟು ಬದಲಾವಣೆಯನ್ನು ಕಂಡಿದ್ದು ಹಲವಾರು ಕ್ಷೇತ್ರಗಳಲ್ಲಿ ಮಹಿಳೆ ಗುರುತಿಸಿಕೊಂಡು ಸಾಧನೆಗೈಯುತ್ತಿದ್ದಾಳೆ. ಇದೊಂದು ಹೊಸ ಅಧ್ಯಾಯಕ್ಕೆ ಮುನ್ನುಡಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕೋಟ ಗಾಂಧಿ ಮೈದಾನದಲ್ಲಿ ಕೋಟದ ಮಹಿಳಾ ಮಂಡಲ ಹಮ್ಮಿಕೊಂಡ 60 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಿದರು. ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿಕ್ಷಕ ನರೇಂದ್ರ ಕುಮಾರ್ ಕೋಟ ಹಾಗೂ ಪೋಲಿಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಧಾ ಪ್ರಭು ಇವರುಗಳಿಗೆ ಸಾಧನಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಾಸ್ತಾನದ ಪಾಂಡೇಶ್ವರ ಮಹಿಳಾ ಮಂಡಲ, ಹಂಗಾರಕಟ್ಟೆ ಬಾಳ್ಕುದ್ರು ಮಹಿಳಾ ಮಂಡಲ ಇವರುಗಳಿಗೆ ವಿಶೇಷ ಪುರಸ್ಕಾರ ನೀಡಲಾಯಿತು. ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸಂಸದರ ಪರವಾಗಿ ಪತ್ನಿ ಶಾಂತಾ ಶ್ರೀನಿವಾಸ ಪೂಜಾರಿ, ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ ಯಶೋಧ ಹಂದೆ, ಮಾಜಿ ಕಾರ್ಯದರ್ಶಿ ಸದಾರಮೆ ಕಾರಂತ್ ಇವರುಗಳಿಗೆ ಗೌರವ ಸಮ್ಮಾನ ನೀಡಲಾಯಿತು.

ನೃತ್ಯ ನಿಕೇತನ ಕೊಡವೂರು ಮುಖ್ಯಸ್ಥರಾದ ವಿದೂಷಿ ಮಾನಸಿ ಸುಧೀರ್, ಸುಧೀರ್ ಕೊಡವೂರು, ಮಾಜಿ ಅಧ್ಯಕ್ಷರಾದ ಸುಶೀಲ ಹೊಳ್ಳ, ಭಾಗ್ಯ ವಾದಿರಾಜ್, ಸುಶೀಲ ಸೋಮಶೇಖರ್ ಇವರುಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಪದಾಧಿಕಾರಿಗಳಾದ ಭಾರತಿ ವಿ ಮಯ್ಯ, ಸುಧಾ ಮಣೂರು ಇವರನ್ನು ಗುರುತಿಸಿ ಗೌರವಿಸಲಾಯಿತು. ಸನ್ಮಾನ ಪತ್ರವನ್ನು ಸಂಘದ ಸದಸ್ಯರಾದ ಜ್ಞಾಹ್ನವಿ ಹೇರ್ಳೆ, ವಸಂತಿ ಹಂದಟ್ಟು ವಾಚಿಸಿದರು. ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ಎ ಕುಂದರ್ ವಹಿಸಿದ್ದರು. ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ಮಹಿಳಾ ಮಂಡಲದ ಉಪಾಧ್ಯಕ್ಷೆ ಚಂದ್ರಿಕಾ ಭಟ್ ಮುಂತಾದವರು ಉಪಸ್ಥಿತರಿದ್ದರು. ಮಹಿಳಾ ಮಂಡಲದ ಸದಸ್ಯೆ ಸುಜಾತ ಎಂ. ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷೆ ಸುಶೀಲ ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಾಜಿ ಅಧ್ಯಕ್ಷೆ ಭಾಗ್ಯ ವಾದಿರಾಜ್ ವಂದಿಸಿದರು. ಕೊಡವೂರಿನ ನೃತ್ಯ ನಿಕೇತನ ತಂಡದಿಂದ ನಾರಸಿಂಹ ನೃತ್ಯರೂಪಕ ಪ್ರದರ್ಶನಗೊಂಡಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...

ಒಳಕಾಡು ಮಜಲು ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಉಡುಪಿ, ಫೆ.24: ಉಡುಪಿ ನಗರಸಭೆಯ ಒಳಕಾಡು ವಾರ್ಡಿನ ರೂ. 30 ಲಕ್ಷ...

ಪಂಚವರ್ಣ ಸ್ವಚ್ಛತಾ ಕಾರ್ಯ

ಕೋಟ, ಫೆ.24: ಕೋಟದ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದ ವಾರ್ಷಿಕ...
error: Content is protected !!