ಉಡುಪಿ, ಜ.13: ಪೋದಾರ್ ಅಂತರಾಷ್ಟ್ರೀಯ ಶಾಲೆ ಉಡುಪಿ ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತಾ ಜಾಗೃತಿ ಹಾಗೂ ಸಾಮಾಜಿಕ ಜಾಲತಾಣಗಳ ಅಭಿಯಾನವನ್ನು ನಡೆಸಲಾಯಿತು. ಜಾಥಾದಲ್ಲಿ ಸುಮಾರು ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜಾಗೃತಿ ಜಾಥಾ ಹಳೆ ಡಯಾನ ಸರ್ಕಲ್‌ನಿಂದ ಆರಂಭಗೊಂಡು ರಸ್ತೆ ಸುರಕ್ಷತಾ ಜಾಗೃತಿಯ ಘೋಷಣೆಗಳೊಂದಿಗೆ ಸರ್ವಿಸ್ ಬಸ್ ನಿಲ್ದಾಣದವರೆಗೆ ನಡೆಯಿತು. ಸಾಮಾಜಿಕ ಜಾಲತಾಣಗಳ ಬಗ್ಗೆ ಅರಿವು ಮೂಡಿಸುವ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು. ನಂತರ ಜಾಥಾ ಮುಂದುವರೆದು ಸಿಟಿ ಬಸ್ ನಿಲ್ದಾಣದಲ್ಲಿ ರಸ್ತೆ ಸುರಕ್ಷತಾ ಜಾಗೃತಿಯ ಬೀದಿ ನಾಟಕ ಪ್ರದರ್ಶಿಸಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಆರನೇ ತರಗತಿ ವಿದ್ಯಾರ್ಥಿ ಸ್ಕಂದ.ಎನ್ ಯಮರಾಜನ ವೇಷಧಾರಣೆಯೊಂದಿಗೆ ಅಭಿನಯಿಸಿ ಎಚ್ಚರಿಕೆ ಮತ್ತು ಜಾಗೃತಿಯನ್ನು ಮೂಡಿಸಲಾಯಿತು.
ಪೋದಾರ್ ವಾಲೆಂಟಿಯರ್ ಕಾರ್ಯಕ್ರಮದ ಅಡಿಯಲ್ಲಿ ಉಡುಪಿ ಸಂಚಾರಿ ಪೋಲಿಸ್ ಇಲಾಖೆಯ ಸಹಭಾಗಿತ್ವದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ಉದಯ್ ಕುಮಾರ್ ಎ.ಎನ್., ಶಾಲಾ ಸಂಯೋಜಕರಾದ ಮನ್ಸೂರ್ ಅಲಿ, ರಿಜ್ವಾನ್, ನವ್ಯಾ ಹಾಗೂ ಶಿಕ್ಷಕರು ಮತ್ತು ಶಾಲಾ ಆಡಳಿತಾಧಿಕಾರಿ ಅನಿಲ್ ಕುಮಾರ್ ಉಪಸ್ಥಿತರಿದ್ದರು.