Tuesday, January 14, 2025
Tuesday, January 14, 2025

ಕನ್ನಡ ವೈಚಾರಿಕ ಚಿಂತನೆಗೆ ಕಾರಂತರ ಕೊಡುಗೆ ಅಪೂರ್ವ: ಡಾ.ಸುಧಾಕರ ದೇವಾಡಿಗ

ಕನ್ನಡ ವೈಚಾರಿಕ ಚಿಂತನೆಗೆ ಕಾರಂತರ ಕೊಡುಗೆ ಅಪೂರ್ವ: ಡಾ.ಸುಧಾಕರ ದೇವಾಡಿಗ

Date:

ಉಡುಪಿ, ಜ.13: 20 ನೇ ಶತಮಾನದ ಭಾರತೀಯ ಸಾಹಿತ್ಯದಲ್ಲಿ ಡಾ.ಶಿವರಾಮ ಕಾರಂತರು ಸದಾಸ್ಮರಣೀಯರು. ಸಾಹಿತ್ಯ ಮತ್ತು ಸಂಸ್ಕೃತಿಯ ಎಲ್ಲಾ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದವರು. ಅವರು ತಮ್ಮ ಬರಹಗಳ ಮೂಲಕ ಕನ್ನಡ ವೈಚಾರಿಕ ಚಿಂತನೆಗೆ ನೀಡಿದ ಕೊಡುಗೆ ಅಪೂರ್ವವಾದದ್ದು ಎಂದು ಚಿಂತಕ ಡಾ.ಸುಧಾಕರ ದೇವಾಡಿಗ ಬಿ ಹೇಳಿದರು. ಅವರು ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಮತ್ತು ಸರಕಾರಿ ಪದವಿಪೂರ್ವ ಕಾಲೇಜು ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅರಿವಿನ ಬೆಳಕು: ಉಪನ್ಯಾಸ ಮಾಲೆ-1 ರ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ರಾಮಕೃಷ್ಣ ಬಿ.ಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಾರಂತರ ಬರಹಗಳು ಯುವ ಜನತೆಗೆ ಚೈತನ್ಯವನ್ನು ನೀಡುವ ಶಕ್ತಿ ಹೊಂದಿದೆ. ಕಾರಂತರು ಜೀವನದ ಎಲ್ಲಾ ಘಟ್ಟದಲ್ಲೂ ತಮ್ಮನ್ನು ತಾವು ಪ್ರಯೋಗ ಶೀಲತೆಗೆ ಒಳಪಡಿಸಿಕೊಂಡು ಸಾಧನೆ ಮಾಡಿದ ವ್ಯಕ್ತಿ, ಅವರ ಸಾಹಿತ್ಯ ಬದುಕು ಪ್ರತಿಯೊಬ್ಬರಿಗೂ ಆರ್ದಶವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಕಾರಂತರು ಸಾಹಿತ್ಯ, ಸಂಸ್ಕೃತಿ ಮತ್ತು ಸಾರ್ವಜನಿಕರ ಬದುಕಿನಲ್ಲಿ ಮಾಡಿದ ವೈಚಾರಿಕ ಕ್ರಾಂತಿಯನ್ನು ವಿವರಿಸಿದರು. ಸದಸ್ಯ ಸಂಚಾಲಕಿ ಡಾ. ಭಾರತಿ ಮರವಂತೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿನ ಸದಸ್ಯರಾದ ಡಾ.ಪ್ರಸಾದ್ ರಾವ್, ಸತೀಶ್ ಕೊಡವೂರು, ಜಿ.ಎಂ ಶರೀಫ್ ಹೂಡೆ ಉಪಸ್ಥಿತರಿದ್ದರು. ಟ್ರಸ್ಟಿನ ಕಾರ್ಯಕ್ರಮದ ಸದಸ್ಯ ಸಂಚಾಲಕ ಡಾ.ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಉದಯ್ ಕುಮಾರ್ ಶೆಟ್ಟಿ ಕಾಳವಾರ ನಿರೂಪಿಸಿ, ಕನ್ನಡ ಉಪನ್ಯಾಸಕ ಶಂಕರ ನಾಯ್ಕ್ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪೋದಾರ್ ಅಂತರಾಷ್ಟ್ರೀಯ ಶಾಲೆ ಉಡುಪಿ: ರಸ್ತೆ ಸುರಕ್ಷತಾ ಜಾಗೃತಿ

ಉಡುಪಿ, ಜ.13: ಪೋದಾರ್ ಅಂತರಾಷ್ಟ್ರೀಯ ಶಾಲೆ ಉಡುಪಿ ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತಾ...

ಜ.19: ಉಚಿತ ನೇತ್ರ ತಪಾಸಣಾ ಶಿಬಿರ

ಉಡುಪಿ, ಜ.13: ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

ವಾಯುಪಡೆಯಲ್ಲಿ ಏರ್‌ಮ್ಯಾನ್, ಅಗ್ನೀವೀರ್ ವಾಯು ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಜ.13: ಭಾರತೀಯ ವಾಯುಪಡೆಯಲ್ಲಿ ಏರ್‌ಮ್ಯಾನ್ ಮತ್ತು ಅಗ್ನಿವೀರ್ ವಾಯು ಹುದ್ದೆಗಳಿಗೆ...

ಜ.26 ರಿಂದ 28: ಉಡುಪಿಯಲ್ಲಿ ಫಲಪುಷ್ಪ ಪ್ರದರ್ಶನ

ಉಡುಪಿ, ಜ.13: ತೋಟಗಾರಿಕೆ ಇಲಾಖೆ, ಉಡುಪಿ ಇವರ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ...
error: Content is protected !!