Tuesday, January 14, 2025
Tuesday, January 14, 2025

ಜ.26 ರಿಂದ 28: ಉಡುಪಿಯಲ್ಲಿ ಫಲಪುಷ್ಪ ಪ್ರದರ್ಶನ

ಜ.26 ರಿಂದ 28: ಉಡುಪಿಯಲ್ಲಿ ಫಲಪುಷ್ಪ ಪ್ರದರ್ಶನ

Date:

ಉಡುಪಿ, ಜ.13: ತೋಟಗಾರಿಕೆ ಇಲಾಖೆ, ಉಡುಪಿ ಇವರ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 26 ರಿಂದ 28 ರ ವರೆಗೆ ರೈತ ಸೇವಾ ಕೇಂದ್ರ, ಶಿವಳ್ಳಿ ತೋಟಗಾರಿಕೆ ಕ್ಷೇತ್ರ, ದೊಡ್ಡಣಗುಡ್ಡೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಸದರಿ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ನರ್ಸರಿದಾರರು, ಬೀಜ ಮಾರಾಟಗಾರರು, ವಿವಿಧ ಗೊಬ್ಬರಗಳ ಮಾರಾಟಗಾರರು, ತೋಟಗಾರಿಕೆಗೆ ಸಂಬಂಧಪಟ್ಟ ಉದ್ಯಮದಾರರು, ಯಂತ್ರೋಪಕರಣ ಮಾರಾಟಗಾರರು, ಬ್ಯಾಂಕ್ ಹಾಗೂ ಆಹಾರ ಮಳಿಗೆದಾರರಿಗೆ 100 ಚದರ ಅಡಿ ಗಾತ್ರದ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಸದರಿ ಮಳಿಗೆಗೆ ರೂ. 3500/- ರಂತೆ ದರವನ್ನು ನಿಗದಿಪಡಿಸಲಾಗಿದ್ದು, ಸದರಿ ಮಳಿಗೆಗಳಲ್ಲಿ ತೋಟಗಾರಿಕೆ ಚಟುವಟಿಕೆ ಹೊಂದಿರುವವರಿಗೆ ಹಾಗೂ ಸಾವಯವ ಉತ್ಪನ್ನಗಳ ಮಳಿಗೆದಾರರಿಗೆ ಆದ್ಯತೆ ನೀಡಲಾಗುವುದು.

ಮಳಿಗೆ ತೆರೆಯಲು ಆಸಕ್ತರು ಮಳಿಗೆಗಳ ಮೊತ್ತವನ್ನು ಆನ್‌ಲೈನ್ ಮೂಲಕವೇ ರೈತ ಸೇವಾ ಕೇಂದ್ರ ಖಾತೆಗೆ ಪಾವತಿಸಿ ತಮ್ಮ ಹೆಸರನ್ನು ಜನವರಿ 20 ರ ಒಳಗಾಗಿ ನೊಂದಾಯಿಸಿಕೊಳ್ಳಬಹುದಾಗಿದೆ. ಮಳಿಗೆ ಹೆಸರು ನೋಂದಾಯಿಸಲು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು, ರಾಜ್ಯವಲಯ, ಉಡುಪಿ ದೂರವಾಣಿ ಸಂಖ್ಯೆ: 7892326323 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪೋದಾರ್ ಅಂತರಾಷ್ಟ್ರೀಯ ಶಾಲೆ ಉಡುಪಿ: ರಸ್ತೆ ಸುರಕ್ಷತಾ ಜಾಗೃತಿ

ಉಡುಪಿ, ಜ.13: ಪೋದಾರ್ ಅಂತರಾಷ್ಟ್ರೀಯ ಶಾಲೆ ಉಡುಪಿ ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತಾ...

ಜ.19: ಉಚಿತ ನೇತ್ರ ತಪಾಸಣಾ ಶಿಬಿರ

ಉಡುಪಿ, ಜ.13: ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

ಕನ್ನಡ ವೈಚಾರಿಕ ಚಿಂತನೆಗೆ ಕಾರಂತರ ಕೊಡುಗೆ ಅಪೂರ್ವ: ಡಾ.ಸುಧಾಕರ ದೇವಾಡಿಗ

ಉಡುಪಿ, ಜ.13: 20 ನೇ ಶತಮಾನದ ಭಾರತೀಯ ಸಾಹಿತ್ಯದಲ್ಲಿ ಡಾ.ಶಿವರಾಮ ಕಾರಂತರು...

ವಾಯುಪಡೆಯಲ್ಲಿ ಏರ್‌ಮ್ಯಾನ್, ಅಗ್ನೀವೀರ್ ವಾಯು ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಜ.13: ಭಾರತೀಯ ವಾಯುಪಡೆಯಲ್ಲಿ ಏರ್‌ಮ್ಯಾನ್ ಮತ್ತು ಅಗ್ನಿವೀರ್ ವಾಯು ಹುದ್ದೆಗಳಿಗೆ...
error: Content is protected !!