Tuesday, January 14, 2025
Tuesday, January 14, 2025

ತೆಂಕನಿಡಿಯೂರು ಕಾಲೇಜು: ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ

ತೆಂಕನಿಡಿಯೂರು ಕಾಲೇಜು: ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ

Date:

ಮಲ್ಪೆ, ಜ.13: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ, ಐಕ್ಯೂಎಸಿ, ಎನ್.ಎಸ್.ಎಸ್., ಯೂತ್ ರೆಡ್‌ಕ್ರಾಸ್ ಘಟಕ ಮತ್ತು ಎಲ್ಲಾ ಸ್ನಾತಕೋತ್ತರ ವಿಭಾಗಗಳು, ಗ್ರಂಥಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರಶಾಂತ ಎನ್. ‘ವಿವೇಕಾನಂದರ ಕನಸಿನ ಭಾರತ’
ವಿಷಯದ ಬಗ್ಗೆ ಮಾತನಾಡಿ, 19ನೇ ಶತಮಾನದ ಸಮಾಜ ಸುಧಾರಕರಾಗಿ ಬಲು ವಿಶಿಷ್ಟವಾದ ವಿವೇಕಾನಂದರು, ಸುಧಾರಿತ ಭಾರತೀಯ ಸಮಾಜ ಮತ್ತು ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಬೇಕು. ವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಿ ಗೌರವ ಮತ್ತು ವ್ಯಕ್ತಿತ್ವ ಬೆಳವಣಿಗೆಗೆ ಮುಕ್ತವಾದ ಅವಕಾಶವಿರುವ ಮೌಢ್ಯಗಳಿಂದ ಮುಕ್ತ ವಿವೇಕಯುಕ್ತ ಸಮಾಜ ನಿರ್ಮಾಣಗೊಂಡಲ್ಲಿ ಮಾತ್ರ ವೈವಿಧ್ಯತೆಯ ಭಾರತ ಪ್ರಕಾಶಿಸಬಲ್ಲುದು. ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಿ ವೈಚಾರಿಕತೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ವೈವಿಧ್ಯಮಯ ಭಾರತ ಇನ್ನಷ್ಟು ಪ್ರಕಾಶಿಸಬಲ್ಲುದು. ಶಾಂತಿ ಮತ್ತು ಅಹಿಂಸೆಯಿಂದ ದೇಶದ ಉನ್ನತಿ ಹಾಗೂ ರಾಷ್ಟ್ರೀಯ ಐಕ್ಯತೆ ಸಾಧ್ಯ ಎಂದರು.

ಪ್ರಾಂಶುಪಾಲರಾದ ನಿತ್ಯಾನಂದ ವಿ. ಗಾಂವಕರ ಮಾತನಾಡುತ್ತಾ, ಇಂದಿನ ಯುವಕರು ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಉತ್ತಮ ಮತ್ತು ಸದೃಢ ಭಾರತ ನಿರ್ಮಾಣಕ್ಕೆ ಯುವ ಪೀಳಿಗೆಯ ಪಾತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಹೇಳಿದರು. ಡಾ. ರಘು ನಾಯ್ಕ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸ್ನಾತಕೋತ್ತರ ವಿಭಾಗ, ಡಾ. ಉದಯ ಶೆಟ್ಟಿ ಕೆ., ರೋವರ‍್ಸ್ ಮತ್ತು ರೇಂಜರ‍್ಸ್ ಘಟಕ ಸಂಯೋಜನಾಧಿಕಾರಿ, ಕೃಷ್ಣ ಆಯ್ಕೆ ಶ್ರೇಣಿ ಗ್ರಂಥಪಾಲಕರು, ರತ್ನಮಾಲಾ ಕನ್ನಡ ವಿಭಾಗ ಮುಖ್ಯಸ್ಥರು ಮತ್ತು ವಿವಿಧ ಸ್ನಾತಕೋತ್ತರ ವಿಭಾಗಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ಮಹೇಶ್ ಕುಮಾರ್ ಕೆ.ಇ. ಇತಿಹಾಸ ವಿಭಾಗ ಉಪನ್ಯಾಸಕರು ಸ್ವಾಗತಿಸಿ, ದ್ವಿತೀಯ ಎಂ.ಎ. ಇತಿಹಾಸದ ವಿದ್ಯಾರ್ಥಿ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರೀಕ್ಷೆ ಒಂದು ವ್ಯವಸ್ಥೆ, ಆತಂಕ ಬೇಡ: ಡಾ. ವಿರೂಪಾಕ್ಷ ದೇವರಮನೆ

ಉಪ್ಪೂರು, ಜ.14: ಯುವ ವಿಚಾರ ವೇದಿಕೆ ಕೊಳಲಗಿರಿ ಉಪ್ಪೂರು ಇದರ ರಜತ...

ಸಂಜೀವಿನಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟನೆ

ಉಡುಪಿ, ಜ.14: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂಜೀವಿನಿ, ಜಿಲ್ಲಾ...

ಕೋಟ ಮಹಿಳಾ ಮಂಡಲ 60 ನೇ ವರ್ಷದ ಸಂಭ್ರಮಾಚರಣೆ

ಕೋಟ, ಜ.14: ಇಂದಿನ ಕಾಲ ಮೊದಲಿನಂತ್ತಿಲ್ಲ, ಸಾಕಷ್ಟು ಬದಲಾವಣೆಯನ್ನು ಕಂಡಿದ್ದು ಹಲವಾರು...

ಪೋದಾರ್ ಅಂತರಾಷ್ಟ್ರೀಯ ಶಾಲೆ ಉಡುಪಿ: ರಸ್ತೆ ಸುರಕ್ಷತಾ ಜಾಗೃತಿ

ಉಡುಪಿ, ಜ.13: ಪೋದಾರ್ ಅಂತರಾಷ್ಟ್ರೀಯ ಶಾಲೆ ಉಡುಪಿ ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತಾ...
error: Content is protected !!