ಕೋಟ, ಜ.7: ಫೆಬ್ರವರಿ 12 ರಿಂದ 15 ರವರೆಗೆ ಕೋಟದ ಹಾಡಿಕೆರೆ ಶಾಂತಮೂರ್ತಿ ಶ್ರೀ ಶನೀಶ್ವರ ಹಾಗೂ ಕನ್ನಿಕಾಪರಮೇಶ್ವರಿ ದೇವಸ್ದಾನದಲ್ಲಿ ವಾರ್ಷಿಕ ವರ್ಧಂತಿ ಹಾಗೂ ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಭಾಭವನದ ಲೋಕಾರ್ಪಣೆ ನಡೆಯಲಿದ್ದು ಈ ಹಿನ್ನಲ್ಲೆಯಲ್ಲಿ ಇದರ ಆಮಂತ್ರಣ ಪತ್ರಿಕೆಯನ್ನು ಕೋಟದ ಮಣೂರು ಗೀತಾನಂದ ಫೌಂಡೇಶ್‌ನ್ ಪ್ರವರ್ತಕ ಆನಂದ್ ಸಿ.ಕುಂದರ್ ತಮ್ಮ ಸ್ವಗೃಹದಲ್ಲಿ ಬಿಡುಗಡೆಗೊಳಿಸಿದರು. ಶ್ರೀ ಕ್ಷೇತ್ರದ ಪಾತ್ರಿ ಕೆ.ಭಾಸ್ಕರ್ ಸ್ವಾಮಿ, ಪಂಚವರ್ಣದ ಸ್ದಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ, ಉದ್ಯಮಿ ಸಿದ್ದಿ ಶ್ರೀನಿವಾಸ ಪೂಜಾರಿ, ರೈತಧ್ವನಿ ಸಂಘದ ತಿಮ್ಮ ಕಾಂಚನ್, ಅರ್ಚಕರಾದ ಜಯರಾಜ್ ಪಡುಕರೆ, ಸಂತೋಷ್ ಸಾಲಿಯಾನ್, ರವಿ ಹಾಡಿಕೆರೆ, ಪ್ರವೀಣ್, ಶ್ರೀಕಾಂತ್ ಉಪಸ್ದಿತರಿದ್ದರು.
ಶಾಂತಮೂರ್ತಿ ಶ್ರೀ ಶನೀಶ್ವರ ದೇಗುಲದ ಆಮಂತ್ರಣ ಪತ್ರಿಕೆ ಬಿಡುಗಡೆ

ಶಾಂತಮೂರ್ತಿ ಶ್ರೀ ಶನೀಶ್ವರ ದೇಗುಲದ ಆಮಂತ್ರಣ ಪತ್ರಿಕೆ ಬಿಡುಗಡೆ
Date: