Thursday, January 9, 2025
Thursday, January 9, 2025

ಶಿಕ್ಷಣ ಕ್ಷೇತ್ರಕ್ಕೆ ಎ.ಐ. ವರದಾನ: ಆಶಾ ಶೆಟ್ಟಿ

ಶಿಕ್ಷಣ ಕ್ಷೇತ್ರಕ್ಕೆ ಎ.ಐ. ವರದಾನ: ಆಶಾ ಶೆಟ್ಟಿ

Date:

ಶಂಕರನಾರಾಯಣ, ಜ.7: ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನವು ಮಾನವನ ಬದುಕು ಮತ್ತು ಅಭಿವೃದ್ದಿಗೆ ವರದಾನವಾಗಿದೆ. ಎಐ ಬಳಕೆ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸುತ್ತದೆ. ಅಧ್ಯಯನ, ಸಂಶೋಧನೆ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಶಿಕ್ಷಣ ಫೌಂಡೇಶನ್ ಬೆಂಗಳೂರು ಇದರ ತರಬೇತುದಾರರಾದ ಆಶಾ ಶೆಟ್ಟಿ ಹೇಳಿದರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಶಂಕರನಾರಾಯಣ ಇಲ್ಲಿ ಆಯೋಜಿಸಿದ್ದ ಎಐ ಕುರಿತ ಕೌಶಲ್ಯ ಅಭಿವೃದ್ಧಿ ಸರ್ಟಿಫಿಕೇಟ್ ಕೋರ್ಸ್ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಕಾರ್ಯಾಗಾರದ ಕುರಿತು ಎಂ.ಕಾಂ.ವಿದ್ಯಾರ್ಥಿಗಳಾದ ಶಶಾಂಕ್, ವಿಜಯಲಕ್ಷ್ಮಿ ಮತ್ತು ಪಲ್ಲವಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ಮಾತನಾಡುತ್ತಾ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಎಐ ಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಸ್ನಾತಕೋತ್ತರ ವಿಭಾಗ ಸಂಯೋಜಕರಾದ ಪ್ರಜ್ಞಾ ತರಬೇತಿ ಕಾರ್ಯಕ್ರಮ ಸಂಘಟಿಸಿ ಪ್ರಸ್ತಾವನೆಗೈದರು. ಉಪನ್ಯಾಸಕರಾದ ಸುಬ್ರಹ್ಮಣ್ಯ ಅಡಿಗ, ಶೈಲಜಾ ಮತ್ತು ರಾಜೇಂದ್ರ ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪ್ರತಿಭಾ ಕಾರಂಜಿಯಲ್ಲಿ ಸಾಯ್ಬ್ರಕಟ್ಟೆ ಶಾಲೆಯ ಪ್ರಣೀತಾ ಪ್ರಥಮ

ಕೋಟ, ಜ.9: ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬೈದೆಬೆಟ್ಟು...

ಜೇಸಿಐ ಶಂಕರನಾರಾಯಣ ಪದಾಧಿಕಾರಿಗಳ ಆಯ್ಕೆ

ಶಂಕರನಾರಾಯಣ, ಜ.9: ಜೇಸಿಐ ಶಂಕರನಾರಾಯಣ ಇದರ 2025ನೇ ಸಾಲಿನ ಅಧ್ಯಕ್ಷರಾಗಿ ಪ್ರವೀಣ್...

ಮೆಸ್ಕಾಂ ಎಟಿಪಿ ಬಿಲ್ ಪಾವತಿ ಸೇವೆ ಪುನರಾರಂಭಿಸಿ: ಶಾಸಕ ಯಶ್ಪಾಲ್ ಸುವರ್ಣ ಆಗ್ರಹ

ಉಡುಪಿ, ಜ.9: ಜನವರಿ 1 ರಿಂದ ವಿದ್ಯುತ್ ಬಿಲ್ ಪಾವತಿಸಲು ಎಟಿಪಿ...

ಮನಪಾ ಅಭಿಯಂತರ ಎನ್ ನಾಗೇಂದ್ರ ರವರಿಗೆ ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ

ಮಂಗಳೂರು, ಜ.9: ಸುರ್ವೆ ಕಲ್ಚರಲ್ ಅಕಾಡೆಮಿ ಬೆಂಗಳೂರು ಆಶ್ರಯದಲ್ಲಿ ಅಖಿಲ ಭಾರತ...
error: Content is protected !!