ಉಡುಪಿ, ಜ.6: ರಾಷ್ಟ್ರೀಯ ಹೆದ್ದಾರಿ 66 ಸಂತೆಕಟ್ಟೆ ಮಾರ್ಗದಲ್ಲಿ ಕುಂದಾಪುರಕ್ಕೆ ತೆರಳುವ ಮಾರ್ಗದಲ್ಲಿ ಏಕಮುಖ ಸಂಚಾರ ಆರಂಭಗೊಂಡಿದೆ. ಬಸ್, ಆಟೋರಿಕ್ಷಾ, ಕಾರು, ದ್ವಿಚಕ್ರ ವಾಹನಗಳು ಏಕಮುಖವಾಗಿ ಚಲಿಸುತ್ತಿವೆ.
ಟ್ರಾಫಿಕ್ ಜಾಮ್; ಮುಗಿಯದ ಗೋಳು: ದಿನನಿತ್ಯ ಸಂತೆಕಟ್ಟೆ ಸರ್ವಿಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಇನ್ನೂ ಮುಕ್ತಿ ಸಿಗಲಿಲ್ಲ. ಬೆಳಗ್ಗೆ ಕಛೇರಿ ಸಮಯದಲ್ಲಿ ಶಾಲಾ ಮಕ್ಕಳ ಬಸ್ಸುಗಳು ಹಾಗೂ ಇನ್ನಿತರ ವಾಹನಗಳ ಸಾಲು ಸಾಲು. ಕಾರಣ, ಮನೆಯ ಅಂಗಳದಲ್ಲಿ ನಿಲ್ಲಿಸಿದ ಹಾಗೆ ಸರ್ವಿಸ್ ರಸ್ತೆಯಲ್ಲಿ ವಾಹನ ಪಾರ್ಕ್ ಮಾಡುವ ಅತಿಬುದ್ಧಿವಂತರ ಸಂಖ್ಯೆಯೂ ಹೆಚ್ಚಿಸುತ್ತಿದೆ.