Sunday, February 23, 2025
Sunday, February 23, 2025

ದಮನಿತರ ವಿವೇಕದ ಕಾವಲುದೀಪವಾದ ಅರಿವಿನ ಮಹಾತಾಯಿ: ಪ್ರೊ. ಜಯಪ್ರಕಾಶ್ ಶೆಟ್ಟಿ

ದಮನಿತರ ವಿವೇಕದ ಕಾವಲುದೀಪವಾದ ಅರಿವಿನ ಮಹಾತಾಯಿ: ಪ್ರೊ. ಜಯಪ್ರಕಾಶ್ ಶೆಟ್ಟಿ

Date:

ಉಡುಪಿ, ಜ.6: ‘ಅಧಿಕಾರವಿಲ್ಲದ ಅಂಚಿನ ಸಮೂಹದ ಒಡಲಿಗೆ ಅಕ್ಷರ, ಆಸರೆ ಮತ್ತು ಅಕ್ಕರೆಯ ತಾಯ್ತನದ ಮೂಲಕ ಅರಿವನ್ನು ಬಿತ್ತಿದ ಮೊದಲ ಶಿಕ್ಷಕಿಯಾಗಿ, ‘ಸತ್ಯಶೋಧಕ ಸಮಾಜ’ದ ಆಧಾರ ಸ್ತಂಭಗಳಲ್ಲೊಬ್ಬರಾಗಿ, ಎಚ್ಚರವನ್ನು ಬಿತ್ತಿದ ಕವಯಿತ್ರಿಯಾಗಿ, ಮಹಾತ್ಮ ಜ್ಯೋತಿಬಾ ಪುಲೆಯವರ ಸಾರ್ಥಕ ಸಂಗಾತಿಯಾಗಿ, ಈ ನೆಲದ ಇನ್ನೊಬ್ಬ ಮೊದಲ ಶಿಕ್ಷಕಿ ಫಾತಿಮಾ ಶೇಖ್ ಅವರ ಒಡನಾಡಿಯಾಗಿ ಅಕ್ಷರದ ಅವ್ವನೆನಿಸಿದ ಸಾವಿತ್ರಿಬಾ ಪುಲೆಯವರ ಬಹುಮುಖೀ ಬದುಕು ಈ ನೆಲದ ದಮನಿತರ ಬಿಡುಗಡೆಗಾಗಿಯೇ ಮೀಸಲಾಗಿದೆ ಮಾತ್ರವಲ್ಲ ದಮನಿತರ ಪಾಲಿನ ಎಚ್ಚರದ ಚರಿತ್ರೆಯಾಗಿ ಅವರ ವಿವೇಕವನ್ನು ಕಾಯುವ ಕಾವಲುದೀಪವೂ ಆಗಿದೆ’ ಎಂದು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಪ್ರಕಾಶ್ ಶೆಟ್ಟಿಯವರು ಹೇಳಿದರು. ತೆಂಕನಿಡಿಯೂರು ಸ.ಪ್ರ.ದ ಕಾಲೇಜಿನ ಕನ್ನಡ ವಿಭಾಗವು ಐಕ್ಯೂಎಸಿಯೊಂದಿಗೆ ಆಯೋಜಿಸಿದ ಸಾವಿತ್ರಿಬಾ ಪುಲೆಯವರ ೧೯೪ನೇ ಜನ್ಮದಿನಾಚರಣೆಯ ಸಲುವಾಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ‘ಈಕೆ ಯಮನನ್ನು ಬೆನ್ನಟ್ಟಿ ಗಂಡನ ಆಯುಷ್ಯವನ್ನು ಬೇಡಿ ತಂದ ಪುರಾಣದ ಸಾವಿತ್ರಿಯಲ್ಲ, ಪತಿಯೊಂದಿಗೆ ಕೂಡಿ ದಮನಿತರ ಕರಾಳ ಬದುಕಿನ ಬಿಡುಗಡೆಗಾಗಿ ಗುದ್ದಾಡಿ ಗೆದ್ದ ಚರಿತ್ರೆಯ ಸಾವಿತ್ರಿ’ ಎಂಬುವುದಾಗಿ ಹೇಳಿದರು.

ಅರಿವಿನ ತಾಯಿ ಸಾವಿತ್ರಿಬಾ ಪುಲೆಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿ ಆರಂಭವಾದ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್ ಮಾತನಾಡುತ್ತಾ, ಸಾವಿತ್ರಬಾ ಪುಲೆ ಮಹಿಳಾ ಸಬಲೀಕರಣದ ಮೊದಲ ಚಿಂತಕಿಯಾಗಿದ್ದು, ಅವರು ಹುಟ್ಟಿದ ದಿನವನ್ನು ನಾವು ಅರ್ಥಪೂರ್ಣವಾಗಿಸುವ ಅಗತ್ಯವಿದೆ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥೆ ರತ್ನಮಾಲಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶೈಕ್ಷಣಿಕ ಸಲಹೆಗಾರ ಡಾ. ರಘು ನಾಯ್ಕ್, ಕನ್ನಡ ವಿಭಾಗದ ಸಂಧ್ಯಾರಾಣಿ, ಶರಿತಾ, ಅರ್ಚನಾ ಹಾಗೂ ಶಾಲಿನಿ ಯು.ಬಿ. ಉಪಸ್ಥಿತರಿದ್ದರು. ನೈನಾ ಶೆಟ್ಟಿ ಸ್ವಾಗತಿಸಿ, ಸುಶ್ಮಿತಾ ಶೆಟ್ಟಿ ವಂದಿಸಿದರು. ನೇತ್ರಾವತಿ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಆಗಿ ಮಾಜಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇಮಕ

ನವದೆಹಲಿ, ಫೆ.22: ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಶಕ್ತಿಕಾಂತ ದಾಸ್...

ಕಾರ್ಕಳ ಜ್ಞಾನಸುಧಾ: ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಗಣಿತನಗರ, ಫೆ.22: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ...

ಸುರಂಗದ ಛಾವಣಿ ಕುಸಿತ; ಸಿಲುಕಿದ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ

ಯು.ಬಿ.ಎನ್.ಡಿ., ಫೆ.22: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ)...
error: Content is protected !!