Sunday, February 23, 2025
Sunday, February 23, 2025

ಬಾಲ ಸಂಸ್ಕಾರ ಮಕ್ಕಳಿಂದ ರಾಮಕೃಷ್ಣಾಶ್ರಮಕ್ಕೆ ಭೇಟಿ

ಬಾಲ ಸಂಸ್ಕಾರ ಮಕ್ಕಳಿಂದ ರಾಮಕೃಷ್ಣಾಶ್ರಮಕ್ಕೆ ಭೇಟಿ

Date:

ಬೈಲೂರು, ಜ.6: ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯುವ ಜ್ಞಾನಭಾರತ್ – ಬಾಲ ಸಂಸ್ಕಾರ ಸಾಪ್ತಾಹಿಕ ಸರಣಿಯಲ್ಲಿ ವಿಹಾರಾರ್ಥವಾಗಿ ಬೈಲೂರಿನ ಶ್ರೀ ರಾಮಕೃಷ್ಣಾಶ್ರಮಕ್ಕೆ ಮಕ್ಕಳು ಭೇಟಿ ನೀಡಿದರು. ಆಶ್ರಮದ ಯತಿ ಸ್ವಾಮಿ ವಿನಾಯಕಾನಂದ ಮಹಾರಾಜ್‌ರವರು ಆಶೀರ್ವಚನ ನೀಡಿ, ವ್ಯಕ್ತಿಯ ಸಮಗ್ರ ಬೇಳವಣಿಗೆಯಲ್ಲಿ ದೈಹಿಕ, ಮಾನಸಿಕ, ಭಾವನಾತ್ಮಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ಅಂಶಗಳು ಮುಖ್ಯ. ಈ ನಿಟ್ಟಿನಲ್ಲಿ ಜ್ಞಾನಭಾರತ್ ತಂಡವು ಮಕ್ಕಳ ಶ್ರೇಯೋಭಿವೃದ್ದಿಗಾಗಿ ಇಂತಹ ಕಾರ್ಯವನ್ನು ಕೈಗೊಂಡಿರುವುದು ಪ್ರಶಂಸನೀಯ ಎಂದರು. ಬಾಲ ಸಂಸ್ಕಾರ ವಿಹಾರದಲ್ಲಿ ಉಪಸ್ಥಿತರಿದ್ದ ಸಾಹಿತಿ ಗಣೇಶ್ ಜಾಲ್ಸೂರು ಮಾತನಾಡಿ, ಇಂತಹ ಆಶ್ರಮಗಳು ಬೇಕು, ವೃದ್ಧಾಶ್ರಮಗಳಲ್ಲ. ಯಾಕೆಂದರೆ ನಾವೇ ನಮ್ಮ ಪ್ರೀತಿಯಿಂದ ಮನೆಯ ಹಿರಿಯರನ್ನು ಗೌರವಿಸಬೇಕು. ಸಂಸಾರದಲ್ಲಿ ಸಂಸ್ಕಾರವಿದ್ದರೆ ಬಹಳ ಸುಂದರವಾದ ಜೀವನವನ್ನು ಸಾಗಿಸಬಹುದು. ಹಣದ ಹಿಂದಿರುವ ಮಾನವ ಇತಿಮಿತಿಯನ್ನರಿಯದೆ ಹೆಣವಾಗುತ್ತಿದ್ದಾನೆ. ಜ್ಞಾನಭಾರತ್- ಬಾಲಸಂಸ್ಕಾರ ವೃಂದದ ಮುಖೇನ ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಸುಧಾಕರ್ ಶೆಟ್ಟಿಯವರ ಕಾರ್ಯ ಶ್ಲಾಘನೀಯ ಎಂದರು.

ಮಕ್ಕಳು ಆಶ್ರಮದ ಪ್ರಶಾಂತ ವಾತವರಣದಲ್ಲಿ ವಿಹರಿಸಿ ಅಲ್ಲಿರುವ ಸ್ವರ್ಣಾನದಿ ತೀರ, ದೇಶದ ವಿವಿಧ ಮೂಲೆಗಳಿಂದ ತಂದು ಪೂಜಿಸಲ್ಪಡುತ್ತಿರುವ ದ್ವಾದಶ ಲಿಂಗಗಳನ್ನು, ದಿವ್ಯತ್ರಯರ ಪ್ರಾರ್ಥನಾಲಯವನ್ನು, ಶಾರದಾ ಮಂಟಪ ಹಾಗೂ ಸ್ವಾಮಿ ವಿವೇಕಾನಂದ ಮಂಟಪದ ದರ್ಶನ ಪಡೆದರು. ಆಶ್ರಮದ ಯತಿ ಸ್ವಾಮಿ ವಿನಾಯಕಾನಂದ ಮಹಾರಾಜ್‌ರವರನ್ನು ವೃಂದದ ವತಿಯಿಂದ ಗೌರವಿಸಲಾಯಿತು. ಹಿರಿಯ-ಕಿರಿಯ ಬ್ರಹ್ಮಚಾರಿಗಳು, ಸ್ವಯಂ ಸೇವಕರು ಸಹಕರಿಸಿದರು. ವೃಂದದ ಕಾರ್ಯದರ್ಶಿ ಸಂಗೀತಾ ಕುಲಾಲ್, ಸದಸ್ಯರಾದ ದೀಪಕ್ ಕೆ.ಎಸ್., ಗಾಯತ್ರಿ ನಾಗೇಶ್, ಚೇತನಾ ಸಂದೀಪ್, ರಶ್ಮಿ ಭಟ್, ಸಂತೋಷ್ ನೆಲ್ಲಿಕಾರು ಹಾಗೂ ಪ್ರಕಾಶ್ ಪೂಜಾರಿ ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಆಗಿ ಮಾಜಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇಮಕ

ನವದೆಹಲಿ, ಫೆ.22: ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಶಕ್ತಿಕಾಂತ ದಾಸ್...

ಕಾರ್ಕಳ ಜ್ಞಾನಸುಧಾ: ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಗಣಿತನಗರ, ಫೆ.22: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ...

ಸುರಂಗದ ಛಾವಣಿ ಕುಸಿತ; ಸಿಲುಕಿದ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ

ಯು.ಬಿ.ಎನ್.ಡಿ., ಫೆ.22: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ)...
error: Content is protected !!