Monday, January 6, 2025
Monday, January 6, 2025

ಉಡುಪಿಯಲ್ಲಿ ‘ಚನ್ನಪಟ್ಟಣದ ಗೊಂಬೆ’ ತಯಾರಿಕೆಯ ಕಾರ್ಯಾಗಾರ

ಉಡುಪಿಯಲ್ಲಿ ‘ಚನ್ನಪಟ್ಟಣದ ಗೊಂಬೆ’ ತಯಾರಿಕೆಯ ಕಾರ್ಯಾಗಾರ

Date:

ಉಡುಪಿ, ಜ.4: ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಯೋಜಿಸುತ್ತಿರುವ ದೇಶೀಯ ಜನಪದ ಕಲೆಗಳ ಸರಣಿಯ ಹದಿನೈದನೆಯ ‘ಚನ್ನಪಟ್ಟಣದ ಗೊಂಬೆ’ ತಯಾರಿಕೆಯ ಕಾರ್ಯಾಗಾರದ ಉದ್ಘಾಟನೆಯನ್ನು ಮಣಿಪಾಲ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆಂಡ್ ಪ್ಲಾನಿಂಗ್‌ನ ಅಸೋಶಿಯೇಟ್ ಪ್ರೊಫೆಸರ್ ಆರ್ಕಿಟೆಕ್ಟ್ ತ್ರಿವಿಕ್ರಮ್ ಭಟ್‌ ನೆರವೇರಿಸಿದರು. ಭಾರತೀಯ ಕಲೆಗಳು ಬಹು ಶ್ರೇಷ್ಠವಾದುದು. ಅವುಗಳಲ್ಲೂ ಉಪಯೋಗೀ ಕಲೆಗಳು ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿ ನಮ್ಮ ಸೌಂದರ್ಯಪ್ರಜ್ಞೆಯನ್ನು ಬಿಂಬಿಸುವಂತವುಗಳು. ಈ ತೆರನಾದ ಚನ್ನಪಟ್ಟಣದಂತಹ ವಿಶೇಷ ಕಲೆ ಪ್ಲಾಸ್ಟಿಕ್ ಆಟಿಕೆಗಳಿಗೆ ಇಂದಿಗೆ ಸಡ್ಡು ಹೊಡೆದು ನಿಂತಿರುವುದು ಮತ್ತು ಈ ಕಾರ್ಯಾಗಾರವು ಉಡುಪಿಯಲ್ಲಿ ಆಯೋಜನೆಗೊಳ್ಳುತ್ತಿರುವುದು ಬಹು ಸಂತಸದ ಸಂಗತಿ ಎಂದರು.

ಗೊಂಬೆ ತಯಾರಿಕಾ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಸುಕನ್ಯಾ ನೀಲಸಂದ್ರ ಹಾಗೂ ಸುಂದ್ರಕಲಾರವರು ಈ ಕಾರ್ಯಾಗಾರದಲ್ಲಿ ಕಲಿಸಿಕೊಡುತ್ತಿರುವ ಆಟಿಕೆಗಳ ಉಪಯುಕ್ತತೆ ಹಾಗೂ ತಾಂತ್ರಿಕತೆಯನ್ನು ವಿವರಿಸಿದರು. ಟಿಪ್ಪು ಸುಲ್ತಾನನ ಕಾಲದಲ್ಲಿ ಪರ್ಶಿಯನ್ ಆಟಿಕೆಗಳ ಪ್ರಭಾವದಿಂದ ಚನ್ನಪಟ್ಟಣದಲ್ಲಿ ಬೆಳೆದಿರುವ ಈ ಕಲೆ ಇಂದಿಗೆ ವಿಶ್ವದಾದ್ಯಂತ ಬಹು ಮನ್ನಣೆ ಗಳಿಸುತ್ತಿದೆ. ಹಗುರವಾದ ಮರದಿಂದ ನೈಸರ್ಗಿಕ ವರ್ಣದಲ್ಲಿ ತಯಾರಿಸಲಾಗುವ ಈ ಕಲೆ ಮಕ್ಕಳ ಆಟಿಕೆಗಳಲ್ಲಿ ಬಹು ಉಪಯುಕ್ತವಾಗಿದೆ. ಗೃಹ ಉದ್ಯಮದಲ್ಲಿ ಸಣ್ಣ ಕರಕುಶಲ ವಸ್ತುಗಳು ಮಾರಾಟದಿಂದ ಹೇಗೆ ಇಂದಿಗೆ ಬೆಳೆದು ಸದೃಢವಾಗಿ ನಾವು ನಿಂತಿದ್ದೇವೆ ಎಂಬುದಾಗಿ ವಿವರಿಸಿದರು. ದೇಶೀಯ ಕಲೆಗಳ ಈ ಕಾರ್ಯಾಗಾರದ ಆಯೋಜನೆಯ ಸದುದ್ದೇಶವೇ ಕರಾವಳಿಯ ಕಲಾಸಕ್ತರು ದೇಶೀಯ ಕಲೆಗಳ ಬಗೆಗೆ ಅರಿವು ಹೊಂದಿ, ಅದರ ಹಿಂದಿನ ಇತಿಹಾಸ, ಶ್ರಮ, ತಾಂತ್ರಿಕತೆಯನ್ನು ತಿಳಿದುಕೊಳ್ಳ ಬೇಕೆಂಬುದಾಗಿದೆ. ಮಾತ್ರವಲ್ಲದೇ ಬಹು ಉಪಯುಕ್ತತೆಯಿಂದ ಕೂಡಿದ ನಮ್ಮ ನಾಡಿನ ಕಲೆಗಳು ಉಳಿದು – ಬೆಳೆಯಬೇಕಾದಲ್ಲಿ ಈ ಕಾರ್ಯಾಗಾರಗಳು ಹೇಗೆ ಸಹಕಾರವಾಗಬಲ್ಲುದು ಎಂಬುದಾಗಿ ಕಾರ್ಯಾಗಾರದ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ ವಿವರಿಸಿದರು.

ಪೌಂಡೇಶನ್‌ನ ಅಧ್ಯಕ್ಷರಾದ ಯಕ್ಷಗುರು ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು. ಹೊಸ ವರ್ಷವನ್ನು ಒಂದು ದೇಶೀಯ ಕಲೆಯ ಕಲಿಯುವಿಕೆಯ ಮೂಲಕ ಆರಂಭಿಸಬೇಕೆಂಬ ಚಿಂತನೆ ಹೊತ್ತ ಈ ಕಾರ್ಯಾಗಾರವನ್ನು ಮಣಿಪಾಲ ವಿಶ್ವವಿದ್ಯಾಲಯ ಹಾಗೂ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ರಿಸಿಡೆನ್ಸಿಯಲ್ ಸ್ಕೂಲ್ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಚನ್ನಪಟ್ಟಣದ ಗೊಂಬೆಗಳ ವಿವಿಧ ನಮೂನೆಗಳನ್ನು ಕಲಿಸಿಕೊಡಲಾಗುತ್ತಿರುವ ಈ ಕಾರ್ಯಾಗಾರವು ಸೋಮವಾರದ ತನಕ ಬಡಗುಪೇಟೆಯಲ್ಲಿ ಆಯೋಜನೆಗೊಳ್ಳುತ್ತಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ಎಚ್‌ಎಂಪಿವಿ’ ತಡೆಗಟ್ಟುವ ಕುರಿತು ಮಹತ್ವದ ಹೇಳಿಕೆ ನೀಡಿದ ಆರೋಗ್ಯ ಸಚಿವರು

ಬೆಂಗಳೂರು, ಜ.6: ಬೆಂಗಳೂರಿನಲ್ಲಿ 8 ತಿಂಗಳ ಗಂಡು ಮಗುವಿಗೆ ಹ್ಯೂಮನ್ ಮೆಟಾಪ್ನ್ಯೂಮೋವೈರಸ್...

ರಥಬೀದಿ ಕಾಲೇಜು: ಬೆಳಗಾವಿ ಅಧಿವೇಶನ ಶತಮಾನೋತ್ಸವ ಕಾರ್ಯಕ್ರಮಗಳ ಉದ್ಘಾಟನೆ

ಮಂಗಳೂರು, ಜ.6: ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ.ಸತೀಶ್ ಪೈ. ಸರ್ಕಾರಿ...

ರಾಜ್ಯದಲ್ಲಿ ಎಚ್ಎಂಪಿವಿ ಪ್ರಕರಣ ಪತ್ತೆ

ಬೆಂಗಳೂರು, ಜ.6: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಕರ್ನಾಟಕದಲ್ಲಿ ಎರಡು ಹ್ಯೂಮನ್...

ಬಾಲ ಸಂಸ್ಕಾರ ಮಕ್ಕಳಿಂದ ರಾಮಕೃಷ್ಣಾಶ್ರಮಕ್ಕೆ ಭೇಟಿ

ಬೈಲೂರು, ಜ.6: ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯುವ ಜ್ಞಾನಭಾರತ್...
error: Content is protected !!