ಮಣೂರು, ಜ.4: ಶಾಲೆಗಳಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸುವಲ್ಲಿ ಸಾಕ್ಷರತಾ ಇಲಾಖೆ ಶೈಕ್ಷಣಿಕ ಚಿಂತನೆಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಶೈಕ್ಷಣಿಕ ಸುಧಾರಣೆಯಲ್ಲಿ ಶಿಕ್ಷಕರಿಗೆ ತಾಜಾ ಮಾಹಿತಿ ಆಗಾಗ್ಗೆ ದೊರಕುವಲ್ಲಿ ಇಂತಹ ಮಾಹಿತಿ ಕಾರ್ಯಗಾರ ಅನುಕೂಲವಾಗುತ್ತದೆ ಎಂದು ಸಮೂಹ ಸಂಪನ್ಮೂಲ ಕೇಂದ್ರ ಬ್ರಹ್ಮಾವರ ಬಿ ಆರ್ ಪಿ ಉದಯ ಕೋಟ ಹೇಳಿದರು. ಸರಕಾರಿ ಪ್ರೌಢಶಾಲೆ ಮಣೂರು ಪಡುಕರೆಯಲ್ಲಿ ನಡೆದ ಪ್ರೌಢಶಾಲಾ ಸರಕಾರಿ ಶಾಲಾ ಶಿಕ್ಷಕರಿಗೆ ಒಂದು ದಿನದ ಇಂಗ್ಲಿಷ್ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಪ್ರವರ್ತಕ ಆನಂದ ಸಿ ಕುಂದರ್ ಪ್ರಾಯೋಜನೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬ್ರಹ್ಮಾವರ ವಲಯ ಸಹಭಾಗಿತ್ವದಲ್ಲಿ ಆಂಗ್ಲ ಭಾಷಾ ಕ್ಲಬ್ ಮಣೂರು ಪಡುಕರೆ ಆಯೋಜನೆಯಲ್ಲಿ ಈ ಕಾರ್ಯಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಶಶಿಧರ ಶೆಟ್ಟಿ ಸಹಶಿಕ್ಷಕರು ಆವರ್ಸೆ ಪ್ರೌಢಶಾಲೆ, ಗಣಪತಿ ಸಹಶಿಕ್ಷಕರು ಕೆ. ಪಿ. ಎಸ್ ಪ್ರೌಢಶಾಲೆ ಬ್ರಹ್ಮಾವರ, ರವಿ ನಾಯಕ್ ಸಹ ಶಿಕ್ಷಕರು ನುಕ್ಕೂರು ಪ್ರೌಢಶಾಲೆ, ಜಯ ಸಹಶಿಕ್ಷಕಿ ಪ್ರೌಢಶಾಲೆ ನಾಲ್ಕೂರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಆನಂದ ಶೆಟ್ಟಿ ಉಡುಪಿ ಜಿಲ್ಲಾ ಸಹ ಶಿಕ್ಷಕ್ಷ ಸಂಘದ ಉಪಾಧ್ಯಕ್ಷರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆ ವಹಿಸಿದ ರಾಮದಾಸ್ ನಾಯಕ್ ಹಿರಿಯ ಸಹಶಿಕ್ಷಕರು ಪ್ರೌಢಶಾಲೆ ಮಣೂರು ಸ್ವಾಗತಿಸಿದರು. ರೂಪಾ ಆಂಗ್ಲಭಾಷಾ ಶಿಕ್ಷಕರು ನಿರೂಪಿಸಿ, ಹೆರಿಯ ಸಹಶಿಕ್ಷಕರು ವಂದಿಸಿದರು. ನಾಲ್ಕು ಹಂತಗಳಲ್ಲಿ ತರಬೇತಿ ಕಾರ್ಯಗಾರ ಸಂಪನ್ನಗೊಂಡಿತು.