ಮೂಲ್ಕಿ, ಡಿ.30: ಮೂಲ್ಕಿ ಸೀಮೆ ಅರಸು ಕಂಬಳದ ಫೈನಲ್ ಹಂತದಲ್ಲಿ ಕೋಣಗಳನ್ನು ಬಿಡುವ ಸಮಯದಲ್ಲಿ ಸ್ವಿಚ್ ಬೋರ್ಡಿನಲ್ಲಿ ತಾಂತ್ರಿಕ ತೊಂದರೆಯಿಂದ ವಿದ್ಯುತ್ ತಂತಿ ನೆಲಕ್ಕೆ ಬಿದ್ದು ಅವಘಡ ಸಂಭವಿಸುವ ಅಪಾಯವನ್ನು ಅರಿತು ಅಕ್ಷಿತ್ ಏಳಿಂಜೆ ಅವರು ಇಬ್ಬರು ವ್ಯಕ್ತಿಗಳನ್ನು ತನ್ನ ಜೀವದ ಹಂಗು ತೊರೆದು ರಕ್ಷಿಸಿದರು. ರಕ್ಷಣಾ ಕಾರ್ಯವನ್ನು ಅರಸರಾದ ದುಗ್ಗಣ್ಣ ಸಾವಂತರು ಪ್ರಶಂಸಿಸಿ ಯುವಕರು ಇಂತಹ ಚಿಂತನೆ ಮಾಡುವಂತಹ ಮನೋಭಾವನೆ ಬೆಳೆಸಿಕೊಂಡಲ್ಲಿ ಸಮಾಜವು ಅವರನ್ನು ಗುರುತಿಸುವಂತಾಗುತ್ತದೆ ಎಂದರು. ಮೂಲ್ಕಿ ಅರಮನೆಯ ಪರವಾಗಿ ಅಕ್ಷಿತ್ ಏಳಿಂಜೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಗೌತಮ್ ಜೈನ್, ನ್ಯಾಯವಾದಿ ಚಂದ್ರಶೇಖರ್ ಜಿ., ಸತೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮೂಲ್ಕಿ ಅರಸು ಕಂಬಳದಲ್ಲಿ ಸಾಹಸ ಮೆರೆದ ಅಕ್ಷಿತ್ ಏಳಿಂಜೆಗೆ ವಿಶೇಷ ಗೌರವ

ಮೂಲ್ಕಿ ಅರಸು ಕಂಬಳದಲ್ಲಿ ಸಾಹಸ ಮೆರೆದ ಅಕ್ಷಿತ್ ಏಳಿಂಜೆಗೆ ವಿಶೇಷ ಗೌರವ
Date: