ಕಾರ್ಕಳ, ಡಿ.28: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ರಜತ ಸಂಭ್ರಮಾಚರಣೆ ಅಂಗವಾಗಿ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸಹಯೋಗದೊಂದಿಗೆ ಸಂಸ್ಥೆಯ ಸದಸ್ಯರ ಸಹಕಾರದೊಂದಿಗೆ ಕೌಡೂರು ರಂಗನಪಲ್ಕೆ ಹೊಸಬೆಳಕು ಆಶ್ರಮಕ್ಕೆ ಕಜೆ ಅಕ್ಕಿ, ಬೆಳ್ತಿಗೆ ಅಕ್ಕಿ, ಗೋಧಿಹಿಟ್ಟು, ಸಕ್ಕರೆ, ಬೆಲ್ಲ, ಶೇವಿಗೆ, ಸಜ್ಜಿಗೆ, ಅವಲಕ್ಕಿ, ತೆಂಗಿನಕಾಯಿ, ಸಾಬೂನು, ಅಕ್ಕಿ ಹಿಟ್ಟು, ರಸ್ಕ್, ವಿಸ್ಕಿಟ್, ರಾಗಿಹಿಟ್ಟು, ಅಡುಗೆ ಎಣ್ಣೆ, ಕಾಪಿ ಹುಡಿ, ಚಾಹುಡಿ, ಮೆಣಸು ಸೇರಿದಂತೆ ರೂ. ೧೫,೦೦೦/- ಮೌಲ್ಯದ ಆಹಾರ ಸಾಮಾಗ್ರಿ ಹಸ್ತಾಂತರಿಸಲಾಯಿತು. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಿತು. ಕಾರ್ಕಳ ತಾಲೂಕು ಭಜನಾ ಮಂಡಳಿಗಳ ಒಕ್ಕೂಟದ ಸ್ಥಾಪಕಾಧ್ಯಕ್ಷರಾದ ಶ್ರೀಕಾಂತ್ ಪ್ರಭು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ, ಉಪಾಧ್ಯಕ್ಷ ಸತೀಶ್ ಪೂಜಾರಿ, ಸದ್ಯರಾದ ಪುಷ್ಪ ಕುಲಾಲ್, ವೀಣಾ ಆಚಾರ್ಯ, ಪ್ರದೀಪ್ ಸುವರ್ಣ, ಅಬ್ಬನಡ್ಕ ಭಜನಾ ಮಂಡಳಿಯ ಗೌರವಾಧ್ಯಕ್ಷ ರಾಜೇಶ್ ಕೋಟ್ಯಾನ್, ಉಪಾಧ್ಯಕ್ಷ ಕೀರ್ತನ್ ಪೂಜಾರಿ, ಕಾರ್ಯದರ್ಶಿ ಶ್ರದ್ಧಾ ಪೂಜಾರಿ, ಸದಸ್ಯರಾದ ಸ್ಪೂರ್ತಿ ಕುಲಾಲ್, ಸಾಕ್ಷಿ ಕುಲಾಲ್, ಸ್ಪರ್ಶ್, ಸ್ಪೂರ್ತಿ ಮೊದಲಾದವರಿದ್ದರು.