Saturday, December 28, 2024
Saturday, December 28, 2024

ವರ್ಷಾಂತ್ಯದ ರಜೆಗಳ ಹಿನ್ನೆಲೆ: ಉಡುಪಿಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ

ವರ್ಷಾಂತ್ಯದ ರಜೆಗಳ ಹಿನ್ನೆಲೆ: ಉಡುಪಿಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ

Date:

ಉಡುಪಿ, ಡಿ.28: ವರ್ಷಾಂತ್ಯದ ರಜೆಗಳ ಹಿನ್ನೆಲೆಯಲ್ಲಿ ನಗರದ ಸಂಚಾರ ದಟ್ಟಣೆ ವಿಪರೀತವಾಗಿದ್ದು, ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಈ ಕೆಳಕಂಡ ಮಾರ್ಗಗಳಲ್ಲಿ ಮಾರ್ಪಾಡು ಮಾಡಲಾಗಿರುತ್ತದೆ. ಮಣಿಪಾಲ ಕಡೆಯಿಂದ ಬರುವ ಸರಕು ಲಘು ವಾಹನ, ಮಂಗಳೂರು, ಕಾಪು ಕಡೆ ಹೋಗುವವರು ಶಾರದಾ ಕಲ್ಯಾಣ ಮಂಟಪದ ಕಡೆಯಿಂದ ಚಲಿಸುವುದು.

ಚಿತ್ರ: ಗಣಪತಿ ನಾಯಕ್ ಅಂಬಾಗಿಲು

ಕಲ್ಸಂಕ ವೃತ್ತ: 1).ಗುಂಡಿಬೈಲ ಕಡೆಯಿಂದ ಬರುವ ವಾಹನಗಳು ಕಡಿಯಾಳಿ ಎದುರು ತಿರುಗಿಸಿಕೊಂಡು ಕೃಷ್ಣಮಠ ಮತ್ತು ಉಡುಪಿ ಕಡೆ ಬರುವುದು. 2) ಮಣಿಪಾಲ ಕಡೆಯಿಂದ ಬಂದು ಗುಂಡಿಬೈಲ ಕಡೆ ಹೋಗುವವರು ಸಿಟಿ ಬಸ್ಸ ನಿಲ್ದಾಣದ ಹತ್ತಿರ ತಿರುಗಿಸಿಕೊಂಡು ಬರುವುದು.

ಕರಾವಳಿ ಜಂಕ್ಷನ್: 1) ಮಲ್ಪೆಯಿಂದ ಬರುವವರು ಕರಾವಳಿಗೆ ಬಂದು ಎಡಕ್ಕೆ ತಿರುಗಿ ಸರ್ವಿಸ್ ರಸ್ತೆಯಲ್ಲಿ ಚಲಿಸಿ ನಿಟ್ಟೂರು (ಆಭರಣ ಮೋಟರ್ಸ ಎದುರಿಗೆ ಯು ಟರ್ನ್ ಮಾಡಿಕೊಂಡು ನಗರದ ಕಡೆ ಬರುವುದು. 2). ಮಂಗಳೂರು ಕಡೆಯಿಂದ ಬರುವವರು ಮಲ್ಪೆ ಹೋಗುವವರನ್ನು‌ ಹೊರತುಪಡಿಸಿ ಉಳಿದವರೆಲ್ಲರೂ ನಿಟ್ಟೂರ (ಆಭರಣ ಮೋಟರ್ಸ) ಎದುರು ತಿರುಗಿಸಿ ಉಡುಪಿಗೆ ಬರುವುದು.

ಮಲ್ಪೆ: ಮಲ್ಪೆ ಬೀಚ್ ಕಡೆಯಿಂದ ಬರುವವರು ಬಲರಾಮ ಸರ್ಕಲ್ ನಿಂದ ಹೊರಟು ಹೂಡೆ, ನೇಜಾರು ಮಾರ್ಗ ಬಳಸಿ ಸಂತೆಕಟ್ಟೆ ಬರುವುದು.

ಸಾರ್ವಜನಿಕರು ದಿನಾಂಕ 28.12.2024 ರಿಂದ ದಿನಾಂಕ 01.01.2025 ರ ಸಂಜೆ 4.00 ಗಂಟೆಯಿಂದ ರಾತ್ರಿ 9.00 ಗಂಟೆಯ ವರೆಗೆ ಈ ನಿಯಮ ಜಾರಿಯಲ್ಲಿರುತ್ತದೆ. ಸೂಚಿಸಿದ ಮಾರ್ಗಗಳಲ್ಲಿ ಚಲಿಸಿ ಪೊಲೀಸರೊಂದಿಗೆ ಸಹಕರಿಸಲು ಕೋರಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಭಗವದ್ಗೀತಾ ಯಜ್ಞ ಸಂಪನ್ನ

ಉಡುಪಿ, ಡಿ.28: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ವತಿಯಿಂದ...

ಕೊಕ್ಕರ್ಣೆ: ಆರೋಗ್ಯ ತಪಾಸಣಾ ಶಿಬಿರ

ಕೊಕ್ಕರ್ಣೆ, ಡಿ.28: ಸ್ಪೂರ್ತಿ ಯುವ ವೇದಿಕೆ, ಕೋಟಂಬೈಲು ಮತ್ತು ಸಮುದಾಯ ವೈದ್ಯಕೀಯ...

ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ಹೊಸಬೆಳಕು ಆಶ್ರಮಕ್ಕೆ ಆಹಾರ ಸಾಮಾಗ್ರಿ ಹಸ್ತಾಂತರ

ಕಾರ್ಕಳ, ಡಿ.28: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...

ಜನಮನ್ನಣೆ ಗಳಿಸಿದ ಕರ್ಣಾಟಕ ಬ್ಯಾಂಕ್: ವಿಷ್ಣುಮೂರ್ತಿ ಉಪಾಧ್ಯ

ಕೋಟ, ಡಿ.28: ಕರ್ಣಾಟಕ ಬ್ಯಾಂಕ್ ಗ್ರಾಹಕಸ್ನೇಹಿ ಬ್ಯಾಂಕ್ ಆಗಿ ರೂಪುಗೊಂಡು ರಾಷ್ಟ್ರೀಯ...
error: Content is protected !!