ಉಡುಪಿ, ಡಿ.26: ಉಡುಪಿಯ ಕೇಂದ್ರೀಯ ವಿದ್ಯಾಲಯದ ವಾರ್ಷಿಕ ದಿನಾಚರಣೆಯು ಡಿಸೆಂಬರ್ 23 ರಂದು ನಡೆಯಿತು. ಪ್ರಾಂಶುಪಾಲರಾದ ಕರೀಂಖಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ, ವಾರ್ಷಿಕ ವರದಿ ಮಂಡಿಸಿದರು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಅನಿತಾ ಮಡ್ಲೂರು, ಕೆನರಾ ಬ್ಯಾಂಕ್ ನ ಎಜಿಎಂ ಸಂಜೀವ್ ಕುಮಾರ್, ಮಣಿಪಾಲ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್, ವಿಎಂಸಿ ಸದಸ್ಯೆ ಅಂಬಿಕಾ ರಣಾಬ್ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ, ಸಂಗೀತ, ಜಾನಪದ ಸಂಪ್ರದಾಯಗಳನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮವು ಪ್ರಮುಖ ಆಕರ್ಷಣೆಯಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ನಂತರ, ವರ್ಷವಿಡೀ ನಡೆದ ವಿವಿಧ ಸಿಸಿಎ (ಸಹ ಪಠ್ಯಕ್ರಮ ಚಟುವಟಿಕೆಗಳು) ಸ್ಪರ್ಧೆಗಳ ವಿಜೇತರನ್ನು ಘೋಷಿಸಲಾಯಿತು ಮತ್ತು 100% ಹಾಜರಾತಿ ಹೊಂದಿರುವ ವಿದ್ಯಾರ್ಥಿಗಳು ಮತ್ತು ಶಾಲಾ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ಬೆಂಬಲಿಸಿದ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು. ಇಂಗ್ಲಿಷ್ ಶಿಕ್ಷಕ ವಸಂತ ಪದ್ಮಶಾಲಿ ಸ್ವಾಗತಿಸಿ, ಶಿಕ್ಷಕ ರಾಗೇಶ್ ವಂದಿಸಿದರು.
ಕೇಂದ್ರೀಯ ವಿದ್ಯಾಲಯ: ಶಾಲಾ ವಾರ್ಷಿಕ ದಿನ
ಕೇಂದ್ರೀಯ ವಿದ್ಯಾಲಯ: ಶಾಲಾ ವಾರ್ಷಿಕ ದಿನ
Date: