ಕೋಟ, ಡಿ.26: ಅಟಲ್ ಬಿಹಾರಿ ವಾಜಪೇಯಿ ಅವರು ಸಮಾಜಕ್ಕೆ ಮತ್ತು ರಾಜಕಾರಣಕ್ಕೆ ಆದರ್ಶ ಬದುಕಿನ ಮಾರ್ಗವನ್ನು ತೋರಿಸಿಕೊಟ್ಟವರು. ಸಚ್ಚಾರಿತ್ರ್ಯ ರಾಜಕಾರಣಕ್ಕೆ ಸ್ಪಷ್ಟ ನಿದರ್ಶನವಾಗಿ ಬಾಳಿ ಬದುಕಿದ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನೋತ್ಸವ ಭಾರತದ ಕೋಟ್ಯಂತರ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಜಾಗೃತಿಯನ್ನು ಉಂಟುಮಾಡುತ್ತಿದೆ. ಅಟಲ್ ಜಿ ಅವರ ಕಾಲದಲ್ಲಿ ಅಭಿವೃದ್ಧಿಯ ಶಕೆ ಆರಂಭಗೊಂಡಿದ್ದು, ಮೋದಿಜಿ ಅವರ ಕಾಲದಲ್ಲೂ ಮುಂದುವರೆಯುತ್ತಿದೆ. ನನಗಿಂತ ನನ್ನ ಜಾತಿ, ಧರ್ಮಕ್ಕಿಂತ, ನನ್ನ ದೇಶ ಮೊದಲು ಎನ್ನುವ ಹೃದಯಗಳಿಗೆ ಶಕ್ತಿ ನೀಡಿದ್ದೆ ಅಟಲ್ ಜಿ. ಇಂದು ಈ ನುಡಿಗಳನ್ನಾಡಲು ಅತೀವ ಸಂತಸವಾಗುತ್ತಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಭಾರತೀಯ ಜನತಾ ಪಾರ್ಟಿ ಕೋಟ ಮತ್ತು ಕೋಟತಟ್ಟು ಶಕ್ತಿ ಕೇಂದ್ರ ವತಿಯಿಂದ ಕೋಟದ ಮಾಗಲ್ಯ ಮಂದಿರದಲ್ಲಿ ನಡೆದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಭೆಯಲ್ಲಿ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಚಿಂತಕ ಹಾಗೂ ಲೇಖಕ ಪ್ರಕಾಶ್ ಮಲ್ಪೆ, ಕೋಟ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸುರೇಶ್ ಕುಂದರ್, ಪ್ರದಾನ ಕಾರ್ಯದರ್ಶಿ ಅಜಿತ್ ಶೆಟ್ಟಿ ಕೊತ್ತಾಡಿ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಕುಂದರ್ ಬಾರಿಕೆರೆ, ವಡ್ದರ್ಸೆ ಪಂಚಾಯತ್ ಅಧ್ಯಕ್ಷರಾದ ಲೋಕೇಶ್ ಕಾಂಚನ್, ಹಿರಿಯರಾದ ಸುರೇಂದ್ರ ಹೆಗ್ಡೆ, ಕೋಟತಟ್ಟು ಶಕ್ತಿ ಕೇಂದ್ರ ಅಧ್ಯಕ್ಷರಾದ ಪ್ರಮೋದ್ ಹಂದೆ, ಕೋಟ ಶಕ್ತಿ ಕೇಂದ್ರ ಅಧ್ಯಕ್ಷರಾದ ಅಜಿತ್ ದೇವಾಡಿಗ, ಇನ್ನಿತರ ಜಿಲ್ಲಾ ಹಾಗೂ ಕ್ಷೇತ್ರ ಸಮಿತಿಯ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.