Thursday, February 6, 2025
Thursday, February 6, 2025

ಬೀಡಿನಗುಡ್ಡೆ: ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೀಡಿನಗುಡ್ಡೆ: ಉಚಿತ ಆರೋಗ್ಯ ತಪಾಸಣಾ ಶಿಬಿರ

Date:

ಉಡುಪಿ, ಡಿ.26: ಬಾಂಧವ್ಯ ಫೌಂಡೇಶನ್, ಎಸ್.ಡಿ.ಎಂ ನ್ಯಾಚುರಪತಿ ಕಾಲೇಜು ಧರ್ಮಸ್ಥಳ ವೈದ್ಯರ ಸಹಯೋಗದಲ್ಲಿ ಬೀಡಿನಗುಡ್ಡೆ ಕಾರ್ಮಿಕರ ಕಾಲನಿಯಲ್ಲಿ ಆರೋಗ್ಯಧಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಅಂಗನವಾಡಿ ವಠಾರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ನವ್ಯ ಚೇತನ ಶಿಕ್ಷಣ, ಸಂಶೋಧನಾ ಮತ್ತು ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಡಾ.ಶಿವಾನಂದ ನಾಯಕ್ ಉದ್ಘಾಟಿಸಿ ಮಾತನಾಡುತ್ತಾ, ಬಹಳಷ್ಟು ಜನ ಕಾರ್ಮಿಕರು ಕೆಲಸದ ಒತ್ತಡದಲ್ಲಿ ತಮ್ಮ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ. ಇಂತಹ ಶಿಬಿರಗಳಿಂದ ಅವರ ಆರೋಗ್ಯ ತಪಾಸಣೆ ಮಾಡಲು ಅನುಕೂಲವಾಗುತ್ತದೆ. ಆರೋಗ್ಯ ವೇ ಮಹಾಭಾಗ್ಯ ಎಂಬಂತೆ ನಾವೆಲ್ಲರೂ ಕೂಡ ನಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು ಎಂದರು.

ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ ಶುಭ ಹಾರೈಸಿದರು. ಬಾಂಧವ್ಯ ಫೌಂಡೇಶನ್ ನ ದಿನೇಶ್ ಬಾಂಧವ್ಯ ಪ್ರಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಎಸ್ ಡಿ ಎಂ ನ್ಯಾಚುರಪತಿ ಕಾಲೇಜು ಉಜಿರೆ ಧರ್ಮಸ್ಥಳದ ಡಾ. ಲಾವಣ್ಯ, ಡಾ. ಸಹನಾ, ಡಾ. ಅಮ್ಮಂಜೆ ಅರುಂಧತಿ ನಾಯಕ್, ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ರಾಜ ಶಂಕರ್, ಶ್ರೀನಾಥ್ ಕೋಟ, ರಾಘವೇಂದ್ರ ಕರ್ವಾಲು, ಪ್ರವೀಣ್ ಪೂಜಾರಿ, ಉಷಾ ಬಸವರಾಜ್ ಕುಲಾಲ್, ಸ್ವೀಕೃತಿ, ಸಂಜನಾ ಪೂಜಾರಿ, ಜಯ ಪೂಜಾರಿ ಮುಂತಾದವರಿದ್ದರು. ನವ್ಯಚೇತನ ಶಿಕ್ಷಣ, ಸಂಶೋಧನಾ ಮತ್ತು ಕಲ್ಯಾಣ ಟ್ರಸ್ಟ್, ಶಿವಾನಿ ಡಯಾಗ್ನೋಸ್ಟಿಕ್ ಸೆಂಟರ್, ಜಯಂಟ್ಸ್ ಗ್ರೂಪ್ ಸಹಕರಿಸಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಕ್ಕಳು – ಶೋಷಣೆ

ಮಕ್ಕಳು, ತಾವು ವಾಸಿಸುವ ಪರಿಸ್ಥಿತಿ ಹಾಗೂ ಸುತ್ತಮುತ್ತಲಿನ ಪರಿಸರದಿಂದ, ಒಡನಾಟದಿಂದ ಬಲು...

ಶ್ರೀ ಕೃಷ್ಣ ಮಠ: ವಿವಿಧ ಕ್ಷೇತ್ರಗಳ ಮುಖ್ಯಸ್ಥರಿಗೆ ಸನ್ಮಾನ

ಉಡುಪಿ, ಫೆ.5: ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ...

ಶಿವಪಾಡಿ ವೈಭವ ಆಮಂತ್ರಣ ಪತ್ರಿಕೆ ಬಿಡುಗಡೆ

ಮಣಿಪಾಲ, ಫೆ.5: ಫೆಬ್ರವರಿ 22 ರಿಂದ ಫೆಬ್ರವರಿ 26ರವರೆಗೆ ವೈಭವೋಪೂರಿತವಾಗಿ ನಡೆಯಲಿರುವ...

ಮನಸ್ಸು ಹತೋಟಿಯಲ್ಲಿರಲು, ಏಕಾಗ್ರತೆ ಸಾಧಿಸಲು ಯೋಗ, ಪ್ರಾಣಾಯಾಮ ಸಹಕಾರಿ: ಪ್ರಸನ್ನ ಶಣೈ

ಉಡುಪಿ, ಫೆ.5: ಮನಸ್ಸು ಹತೋಟಿಯಲ್ಲಿರಲು, ಏಕಾಗ್ರತೆ ಸಾಧಿಸಲು ಯೋಗ, ಪ್ರಾಣಾಯಾಮಗಳು ಸಹಕಾರಿ....
error: Content is protected !!