ಕಟಪಾಡಿ, ಡಿ.26: ಆನಂದತೀರ್ಥ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಹೈಸ್ಕೂಲ್, ಪಿಯುಸಿ, ಮತ್ತು ಪದವಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತ ಒಂದು ದಿನದ ಕಾರ್ಯಾಗಾರ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಉಡುಪಿಯ ವೈಕುಂಠ ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ಸೈಕಾಲಾಜಿಸ್ಟ್ ನಾಗರಾಜ್ ಮೂರ್ತಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ಇತ್ತೀಚೆಗೆ ವಿದ್ಯಾರ್ಥಿಗಳೇ ಈ ಮಾದಕ ವಸ್ತುಗಳ ಚಟದ ದಾಸರಾಗುತ್ತಿರುವುದು ಅತ್ಯಂತ ಆತಂಕಕಾರಿ, ಅಮೂಲ್ಯವಾದ ವಿದ್ಯಾರ್ಥಿ ಜೀವನವನ್ನು ಮಾದಕ ವಸ್ತುಗಳ ಸೇವನೆಗೆ ಬಲಿಕೊಡಬೇಡಿ, ಇದರ ಚಟ ಒಮ್ಮೆ ಅಂಟಿದರೆ ಅದನ್ನು ಬಿಡುವುದು ಅತ್ಯಂತ ಕಷ್ಟ. ಓದುವುದು, ಬರೆಯುವುದು, ಕ್ರೀಡೆ, ಮನೋರಂಜನಾ ಚಟುವಟಿಕೆಯಲ್ಲಿ ನಿರಂತರವಾಗಿ ಪಾಲ್ಗೊಳ್ಳುವುದರಿಂದ ಈ ಚಟದಿಂದ ದೂರವಿರಬಹುದು. ಇದರ ಸೇವನೆ, ಮಾರಾಟ, ಮಾರಾಟಕ್ಕೆ ಪ್ರಚೋದನೆ ಹೀಗೆ ಎಲ್ಲಾ ಪ್ರಕ್ರಿಯೆಗಳಿಗೂ ಅತ್ಯಂತ ಕಠಿಣವಾದ ಶಿಕ್ಷೆ ಕೊಡುವ ಕಾನೂನು
ದೇಶದಲ್ಲಿ ಜಾರಿಯಲ್ಲಿದೆ. ಇದನ್ನು ಅರಿತು ವಿದ್ಯಾರ್ಥಿ ಜೀವನವನ್ನು ಅತ್ಯಂತ ಸಂತೋಷದಾಯಕವಾಗಿ ನಡೆಸುವಂತೆ ಸಲಹೆ, ಸೂಚನೆ ನೀಡಿದರು. ಕಾರ್ಯಾಗಾರದಲ್ಲಿ ಕಾಲೇಜಿನ ಪ್ರಾಂಶುಪಾಲ ವಿಜಯ್ ಪಿ. ರಾವ್, ವಿದ್ಯಾಲಯ ಪ್ರಾಂಶುಪಾಲೆ ಡಾ. ಗೀತಾ ಶಶಿಧರ್, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ಮಾದಕ ವಸ್ತುಗಳ ದುಷ್ಪರಿಣಾಮ ಕಾರ್ಯಾಗಾರ
ಮಾದಕ ವಸ್ತುಗಳ ದುಷ್ಪರಿಣಾಮ ಕಾರ್ಯಾಗಾರ
Date: