Wednesday, December 25, 2024
Wednesday, December 25, 2024

ಕೋಟ: ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

ಕೋಟ: ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

Date:

ಕೋಟ, ಡಿ.24: ಕೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ವಾರ್ಷಿಕೋತ್ಸವ ಕಾರ್ಯಕ್ರಮ ಮಂಗಳವಾರ ಶಾಲಾ ವಠಾರದಲ್ಲಿ ಜರಗಿತು. ಸಾಂಸ್ಕೃತಿಕ ಚಿಂತಕಿ ಭಾರತಿ ವಿ ಮಯ್ಯ ಉದ್ಘಾಟಿಸಿದರು. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ವಿದ್ಯಾರ್ಥಿಗಳು ರಚಿಸಿದ ಹಸ್ತ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ವಹಿಸಿದ್ದರು. ಗೀತಾನಂದ ಫೌಂಡೇಶನ್ ಬಹುಮಾನಗಳನ್ನು ಕೊಡಮಾಡಿತು.

ಸಾಧಕ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ಪಟ್ಟಿಯನ್ನು ಶಾಲಾ ಶಿಕ್ಷಕಿ ಶಾರದಾ ವಾಚಿಸಿದರು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ಶಿಕ್ಷಕಿಯರಾದ ಮಾನಸ, ಸುಮಾ ಸಾಧಕರ ಪಟ್ಟಿ ವಾಚಿಸಿದರು ಮುಖ್ಯ ಅಭ್ಯಾಗತರಾಗಿ ಮಾಜಿ ಜಿ.ಪಂ ಸದಸ್ಯ ಶಂಕರ್ ಕುಂದರ್, ಸಿ.ಆರ್.ಪಿ ಸವಿತಾ ಆಚಾರ್, ಸಾಹಿತಿ ಶೈಕ್ಷಣಿಕ ಪ್ರೋತ್ಸಾಹಕ ಪ್ರೊ.ಉಪೇಂದ್ರ ಸೋಮಯಾಜಿ, ಉದ್ಯಮಿ ಸುಬ್ರಾಯ ಆಚಾರ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಚ್ ಪ್ರಮೋದ್ ಹಂದೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಹಾಲಕ್ಷ್ಮಿ ಸೋಮಯಾಜಿ, ಉದ್ಭವಿ ಮತ್ತು ಪ್ರಣೀತ್ ಕುಮಾರ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಪುಷ್ಭಾವತಿ ಹೊಳ್ಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ರೂಬಿ ಪಿಂಟೋ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕರ್ನಾಟಕ ಕ್ರೀಡಾಕೂಟ-2025 ಲಾಂಛನ ಬಿಡುಗಡೆ

ಬೆಂಗಳೂರು, ಡಿ.24: ಕರ್ನಾಟಕ ಕ್ರೀಡಾಕೂಟ-2025ರ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು. ಬಳಿಕ...

ಮಾನವ ಹಕ್ಕುಗಳು ಪ್ರಜಾಪ್ರಭುತ್ವದ ಪ್ರತೀಕ: ಪ್ರಶಾಂತ ನೀಲಾವರ

ಉಡುಪಿ, ಡಿ.24: ವಿಶ್ವದ ಚರಿತ್ರೆಯಲ್ಲಿ ಮಾನವ ಹಕ್ಕುಗಳ ಹೋರಾಟಕ್ಕೆ ಬಹುದೊಡ್ಡ ಇತಿಹಾಸವಿದೆ....

ರಾಜ್ಯ ಮಹಿಳಾ ನಿಲಯದ ನಿವಾಸಿನಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ

ಉಡುಪಿ, ಡಿ.24: ಉಡುಪಿಯ ರೋಬೋಸಾಫ್ಟ್ ಟೆಕ್ನಾಲಜೀಸ್ ಇವರ ಸಿ.ಎಸ್.ಆರ್ ನಿಧಿಯಿಂದ ಭಾರತೀಯ...

ಹಿರಿಯಡಕ: ಆದೇಶ ಪತ್ರಗಳ ವಿತರಣೆ

ಹಿರಿಯಡಕ, ಡಿ.24: ರಾಜೀವ ಗಾಂಧಿ ವಸತಿ ನಿಗಮದಿಂದ ಕೊರಗ ಸಮುದಾಯದ 10...
error: Content is protected !!