ಕಾಪು, ಡಿ.23: ಯುವಜನ ಸೇವಾ ಸಂಘ ಏಣಗುಡ್ಡೆ ಕಟಪಾಡಿ, ನವೋದಯ ಫ್ರೆಂಡ್ಸ್ (ರಿ.) ದುರ್ಗಾನಗರ ದಿವ್ಯಾಂಗ ರಕ್ಷಣಾ ಸಮಿತಿ, ಉಡುಪಿ ಜಿಲ್ಲೆ, ಸೇವಾಭಾರತಿ (ರಿ.) ಕನ್ಯಾಡಿ ಇವರ ಆಶ್ರಯದಲ್ಲಿ ಕಾಪು ತಾಲೂಕಿನಲ್ಲಿರುವ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ‘ಒತ್ತಡ ಗಾಯ ನಿರ್ವಹಣೆ ಮತ್ತು ಉಚಿತ ಔಷಧಿ ಕಿಟ್ ವಿತರಣೆ’ ಕಾರ್ಯಕ್ರಮ ನಡೆಯಿತು. ಒತ್ತಡ ಗಾಯ ನಿರ್ವಹಣೆ ಮತ್ತು ಉಚಿತ ಔಷಧಿ ಕಿಟ್ ವಿತರಣೆ ವಾಹನಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಇತರ ಗಣ್ಯರ ಸಮ್ಮುಖದಲ್ಲಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಯುವಜನ ಸೇವಾ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್, ಉಡುಪಿ ಜಿಲ್ಲಾ ದಿವ್ಯಾಂಗ ರಕ್ಷಣಾ ಸಮಿತಿ ಸಂಚಾಲಕರಾದ ವಿಜಯ್ ಕೊಡವೂರು, ಮ್ಯಾನೇಜರ್ ಅಖೀಲೇಶ್ ಎ., ನವೋದಯ ಸಂಘ ದುರ್ಗಾನಗರ ಏಣಗುಡ್ಡೆ ಕಟಪಾಡಿ ಅಧ್ಯಕ್ಷರಾದ ದೀಪಕ್, ಫಿಜಿಯೋಥೆರಫಿಸ್ಟ್ ಗಣೇಶ್ ಕಾರ್ತಿಕ್ ಉಪಸ್ಥಿತರಿದ್ದರು.