ಶಿರ್ವ, ಡಿ.22: ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆ ಶಿರ್ವ ಇದರ 18 ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭ ನಡೆಯಿತು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ವಿದ್ಯಾವರ್ಧಕ ಸಂಘ (ರಿ.) ಶಿರ್ವ ಕಾರ್ಯದರ್ಶಿಗಳಾದ ಸುಬ್ಬಯ್ಯ ಹೆಗ್ಡೆ, ಕರಸ್ಪಾಂಡೆಂಟ್ ಮಟ್ಟಾರು ರತ್ನಾಕರ ಹೆಗ್ಡೆ, ಆಡಳಿತಾಧಿಕಾರಿಗಳಾದ ವೈ. ಭಾಸ್ಕರ್ ಶೆಟ್ಟಿ, ಕೋಶಾಧಿಕಾರಿಗಳಾದ ಜಗದೀಶ್ ಆರಸ, ಆಡಳಿತ ಮಂಡಳಿ ಸದಸ್ಯರಾದ ನಿತ್ಯಾನಂದ ಹೆಗ್ಡೆ ನಡಿಬೆಟ್ಟು, ಪ್ರಾಂಶುಪಾಲರಾದ ಸಹನಾ ಹೆಗ್ಡೆ, ಸಹ ಪ್ರಾಂಶುಪಾಲರಾದ ನಿಶಾ ಶೆಟ್ಟಿ ಉಪಸ್ಥಿತರಿದ್ದರು.