Wednesday, January 22, 2025
Wednesday, January 22, 2025

ಭಗವದ್ಗೀತೆಯಿಂದ ಭಾರತವಾಗಲಿದೆ ವಿಶ್ವಗುರು : ಪುತ್ತಿಗೆ ಶ್ರೀ

ಭಗವದ್ಗೀತೆಯಿಂದ ಭಾರತವಾಗಲಿದೆ ವಿಶ್ವಗುರು : ಪುತ್ತಿಗೆ ಶ್ರೀ

Date:

ಉಡುಪಿ, ಡಿ.22: ನಮ್ಮ ಧರ್ಮದ ಕುರಿತು ಅಭಿಮಾನ ಬೆಳೆಸಿಕೊಂಡರೆ ಇತರರ ದಾಳಿ, ಆಕ್ರಮಣ ಕಡಿಮೆಯಾಗುತ್ತದೆ. ದೇಹಕ್ಕೆ ರೋಗ ಬಂದಾಗ ವೈರಾಣು ಸಾಯಿಸುವ ಬದಲು ದೇಹಕ್ಕೆ ಪ್ರತಿರೋಧಕ ಶಕ್ತಿ ನೀಡಬೇಕು. ಅದರಂತೆ ವಿಶ್ವದ ಎಲ್ಲ ಸಮಸ್ಯೆಗಳ ನಿವಾರಣೆಗೆ ಭಗವದ್ಗೀತೆಯೇ ಪ್ರತಿರೋಧಕ ಶಕ್ತಿಯಾಗಿದೆ.

ಭಗವದ್ಗೀತೆಯಿಂದ ಮಾತ್ರ ಭಾರತ ವಿಶ್ವಗುರು ಆಗಲು ಸಾಧ್ಯ. ಜಗತ್ತನ್ನೇ ಸುಸ್ಥಿಯಲ್ಲಿ ಇಡುವ ಗೈಡ್​ ಭಗವದ್ಗೀತೆಯಾಗಿದೆ ಎಂದು ಪುತ್ತಿಗೆ ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದಿರುವ ಬೃಹತ್​ ಗೀತೋತ್ಸವದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಎಂಎಲ್​ಸಿ ಗೋ.ಮಧುಸೂದನ್​ ವಿರಚಿತ ‘ಶ್ರೀ ಭಗವಾನುವಾಚ’ ಗ್ರಂಥ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.

ಐತಿಹಾಸಿಕ ದಿನ: ವಿಶ್ವದ ಶಾಂತಿಗೆ ಭಗವದ್ಗೀತೆಯೇ ಆಸರೆ. ಮಾನವ ಕುಲಕ್ಕೆ ಗೀತೆಯ ಸಾರ ಅರ್ಥವಾದರೆ ಎಲ್ಲ ಸಮಸ್ಯೆಗಳಿಂದಲೂ ಹೊರ ಬರಲು ಸಾಧ್ಯ. ಗೀತೆಯ ಅನುಷ್ಠಾನದಿಂದ ವೈಯಕ್ತಿಕ, ಸಾಮಾಜಿಕ, ರಾಜಕೀಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಹೀಗೆ ಎಲ್ಲ ಸಮಸ್ಯೆಗೂ ಪರಿಹಾರ ಗೀತೆಯಲ್ಲಿದೆ. ಅಂತಹ ಭಗವದ್ಗೀತೆಯ ಅಂಶವನ್ನೇ ಒಂಗೊಂಡಿರುವ ‘ಶ್ರೀ ಭಗವಾನುವಾಚ’ ಗ್ರಂಥ ಬಿಡುಗಡೆ ಆಗುತ್ತಿರುವುದು ಶ್ರೀಕೃಷ್ಣನಿಗೂ ಸಂತಸ ತಂದಿದೆ. ಅಂತಾರಾಷ್ಟ್ರೀಯ ಧ್ಯಾನ ದಿನಾಚರಣೆಯಂದೇ ಮಧುಸೂದನ್​ ಅವರ ಪುಸ್ತಕ ಲೋಕಾರ್ಪಣೆ ಆಗಿರುವುದು ಐತಿಹಾಸಿಕ ದಿನವಾಗಿದೆ ಎಂದರು.

ಭಗವಂತನ ಒಲುಮೆ: ಗ್ರಂಥ ಪರಿಚಯ ಮಾಡಿದ ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿವೃತ್ತ ಉಪನಿರ್ದೇಶಕ ಡಾ. ಟಿ.ವಿ. ಸತ್ಯನಾರಾಯಣ ಮಾತನಾಡಿ, ಭಗವಂತನ ಒಲುಮೆ ಇದ್ದರೆ ಎಲ್ಲ ಕಾರ್ಯಗಳಲ್ಲೂ ಯಶಸ್ಸು ಸಾಧ್ಯ. ಶ್ರೀಕೃಷ್ಣನ ಉವಾಚ (ಮಾತು) ಆಗಿರುವ ಭಗವದ್ಗೀತೆಯ ಎಲ್ಲ 700 ಶ್ಲೋಕಗಳ ತಾತ್ಪರ್ಯ ಅರ್ಥಾನುಸಾರ ವಿವರಿಸಿ, ಗೋ.ಮಧುಸೂದನ್​ 406 ಪುಟಗಳ ‘ಶ್ರೀ ಭಗವಾನುವಾಚ’ ಪುಸ್ತಕದಲ್ಲಿ ಬರೆದಿದ್ದಾರೆ ಎಂದರು.

ಮುಖ್ಯ ಭಾಷಣ ಮಾಡಿದ ಕಲ್ಲಡ್ಕ ಪ್ರಭಾಕರ ಭಟ್, ಪುತ್ತಿಗೆ ಶ್ರೀಗಳು ಶ್ರೀಕೃಷ್ಣನ ಶಕ್ತಿ-ಭಕ್ತಿ, ಭಗವದ್ಗೀತೆಯ ಪ್ರಚಾರ ಮಾಡುತ್ತಿದ್ದಾರೆ. ಕೃಷ್ಣನೆಂದರೆ ಪ್ರೀತಿ, ಸೇವೆ, ಪೌರುಷ. ಕುರುಕ್ಷೇತ್ರದಲ್ಲಿ ವಿವಿಧ ಬಗೆಯ ಕೋಪ, ಆಕ್ರೋಶ, ಖಿನ್ನತೆಗೆ ಒಳಗಾಗಿದ್ದ ಅರ್ಜುನನಿಗೆ ವಿಶ್ವರೂಪ ದರ್ಶನದ ಮೂಲಕ ಧರ್ಮರಕ್ಷಣೆ ಮಾಡಲು ಆತನ ಜವಾಬ್ದಾರಿ ಏನೆಂಬುದನ್ನು ತೋರಿಸಿಕೊಟ್ಟ. ಜಗತ್ತಿನಲ್ಲಿ ಇಂದು ಹೆಚ್ಚು ಖಿನ್ನತೆ ಇರುವುದೇ ಅಮೆರಿಕದಲ್ಲಿ. ಆ ಕಾಯಿಲೆಯೀಗ ವಿಶ್ವಕ್ಕೆ ವ್ಯಾಪಿಸಿದೆ. ಇದಕ್ಕೆ ಪರಿಹಾರ ಶ್ರೀಕೃಷ್ಣನ ಭಗವದ್ಗೀತೆಯಲ್ಲಿದೆ. ಪುಣ್ಯ ಬೇಕಾದರೆ ಕರ್ತವ್ಯ ಮಾಡುವಂತೆ ಕೃಷ್ಣ ತಿಳಿಸಿದ್ದಾನೆ. ಆದರೆ, ಯಾರೂ ಅವರವರ ಕರ್ತವ್ಯ ಮಾಡುತ್ತಿಲ್ಲ. ಹೀಗಾಗಿಯೇ ಕರ್ತವ್ಯ ನೆನಪಿಸಲು ಶ್ರೀಕೃಷ್ಣನೇ ಮಧುಸೂಧನ ಅವರಿಗೆ ‘ಗೋ’ ಎಂದು ತಿಳಿಸಿದ್ದು, ಕರ್ತವ್ಯ ನೆನಪಿಸಲು ‘ಶ್ರಿ ಭಗವಾನುವಾಚ’ ಪುಸ್ತಕ ಬರೆದಿದ್ದಾರೆ. ಭಗವದ್ಗೀತೆಯಿಂದ ಮಾತ್ರ ಸಮಾಜದಲ್ಲಿ ಸಾಮರಸ್ಯ ಕಂಡುಬರಲು ಸಾಧ್ಯ ಎಂದರು.

ಸಾಧಕರಿಗೆ ಸನ್ಮಾನ: ಮಂಗಳೂರಿನ ಉದ್ಯಮಿಗಳಾದ ಆರೂರು ಕಿಶೋರ್​ ರಾವ್​, ವಿಶ್ವನಾಥ ಭಟ್​ ಪಾದೂರು ಇವರಿಗೆ ಸುಗುಣೇಂದ್ರ ಶ್ರೀ ಹಾಗೂ ಕಿರಿಯ ಶಿಷ್ಯ ಸುಶ್ರೀಂದ್ರ ಶ್ರೀಗಳು ‘ಶ್ರೀಕೃಷ್ಣಾನುಗ್ರಹ’ ಪ್ರಶಸ್ತಿ ನೀಡಿ ಸನ್ಮಾನಿಸಿದರು. ‘ವಿಜಯವಾಣಿ’ ಮಂಗಳೂರು ಆವೃತ್ತಿಯ ಸ್ಥಾನಿಕ ಸಂಪಾದಕ ಸುರೇಂದ್ರ ವಾಗ್ಲೆ, ಮೈಸೂರಿನ ಚಿತ್ರ ಕಲಾವಿದ ಗಂಜೀಫ್ಹಾ ರಘುಪತಿ ಭಟ್​, ಪುಸ್ತಕ ಪ್ರಕಾಶಕ ರಾಕೇಶ ರಾಜೇ ಅರಸ್,​ ಗ್ರಂಥ ಮುದ್ರಕ ಜೆ.ಬಿ. ಪಟ್ಟಾಭಿ, ಪತ್ರಿಕಾ ಅಂಕಣಕಾರ ಮೈಸೂರಿನ ಡಾ. ವಿ.ರಂಗನಾಥ್​ ಉಪಸ್ಥಿತರಿದ್ದರು.

ಮಠದ ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ದಿವಾನ ನಾಗರಾಜ್ ಆಚಾರ್ಯ, ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ್ ಆಚಾರ್ಯ, ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್ ಇತರರು ಸಹಕರಿಸಿದರು. ಶುೃತಿ ಆದ್ಯಾ ಪ್ರಾರ್ಥಿಸಿದರು. ಗೋ.ಮಧುಸೂದನ್​ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅನಿಲ್​ ರಾವ್​ ನಿರೂಪಿಸಿದರು. ವಿಶ್ವಾಸ್​ ನಾಡಿಗ ವಂದಿಸಿದರು.

 

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪೆರ್ಡೂರು: ಕೊರಗ ಸಮುದಾಯದ ಕಾಲನಿಗೆ ಶಾಸಕರ ಭೇಟಿ

ಪೆರ್ಡೂರು, ಜ.22: ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕುಂಡಿ ಕೊರಗರ ಕಾಲೋನಿಗೆ...

ಜ್ಞಾನಸುಧಾ: ಕಂಪೆನಿ ಸೆಕ್ರೇಟರಿ ಸಾಧಕರಿಗೆ ಸನ್ಮಾನ

ಕಾರ್ಕಳ, ಜ.22: ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಇನ್ ಇಂಡಿಯಾ ಅವರು...

ಅಮೆರಿಕದಲ್ಲಿ H-1B ವೀಸಾ ಹೊಂದಿರುವವರ ಮಕ್ಕಳಿಗೆ ಹುಟ್ಟಿನಿಂದಲೇ ಪೌರತ್ವವಿಲ್ಲ: ಟ್ರಂಪ್ ಹೊಸ ಆದೇಶ

ನ್ಯೂಯಾರ್ಕ್, ಜ.22: ಅಮೆರಿಕದಲ್ಲಿ ನವಜಾತ ಶಿಶುವಿನ ಕನಿಷ್ಠ ಒಬ್ಬ ಪೋಷಕ ಅಮೆರಿಕನ್...

ಉಪ್ಪೂರು: ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ತ್ಯಾಜ್ಯದ ರಾಶಿ; ಉಡುಪಿ ಜಿಲ್ಲೆಯ ಸ್ವಚ್ಛತೆಗೆ ಇದೊಂದು ದೊಡ್ಡ ಕಪ್ಪುಚುಕ್ಕೆ

ಉಪ್ಪೂರು, ಜ.21: ಒಂದೆಡೆ ದೇಶಾದ್ಯಂತ ಸ್ವಚ್ಛತೆಯ ಕಾಳಜಿಯ ಬಗ್ಗೆ ಸರಣಿ ಕಾರ್ಯಕ್ರಮಗಳು...
error: Content is protected !!