ಉಡುಪಿ, ಡಿ.22: ಭಗವದ್ಗೀತೆಯಲ್ಲಿ ಧ್ಯಾನ ಯೋಗದ ಮಹತ್ವವನ್ನು ಗೀತಾಚಾರ್ಯ ಭಗವಾನ್ ಶ್ರೀಕೃಷ್ಣ ವಿಷದವಾಗಿ ವಿವರಿಸಿದ್ದಾನೆ. ಇದನ್ನು ಮನಗಂಡ ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿವರ್ಷ ಡಿಸೆಂಬರ್ 21 ವಿಶ್ವ ಧ್ಯಾನ ದಿನವೆಂದು ಘೋಷಿಸಿದ್ದು ಪ್ರಪ್ರಥಮ ವಿಶ್ವ ಧ್ಯಾನ ದಿನಾಚರಣೆ ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಪುತ್ತಿಗೆ ಮಠ, ಪತಂಜಲಿ ಯೋಗ ಸಮಿತಿ ಹಾಗೂ ವಿವಿಧ ಯೋಗ ಸಂಸ್ಥೆಗಳ ಉಪಸ್ಥಿತಿಯಲ್ಲಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಬೆಳಿಗ್ಗೆ ಬ್ರಾಹ್ಮೀ ಮೂಹುೂರ್ತದಲ್ಲಿ ಪರ್ಯಾಯ ಶ್ರೀ ಶ್ರೀ ಸುಗಣೇಂದ್ರ ತೀರ್ಥಪಾದರು ದೀಪ ಬೆಳಗಿಸಿ ಉದ್ಘಾಟಿಸಿ, ಸರ್ವರಿಗೂ ಗೀತಾಚಾರ್ಯ ಶ್ರೀಕೃಷ್ಣ ಮಂಗಳವನ್ನು ತರಲಿ ಎಂದು, ಮುಂದೊಂದು ದಿನ ವಿಶ್ವದಾದ್ಯಂತ ಭಗವದ್ಗೀತಾ ಜಯಂತಿ ದಿನಾಚರಣೆ ನಡೆಯಲಿ. ಗೀತಾಚಾರ್ಯನ ನುಡಿಗಳು ನಡೆಯಲ್ಲಿ ಮೂಡಿ ಬರಲಿ ಎಂದು ಆಶೀರ್ವಚನದಲ್ಲಿ ತಿಳಿಸಿದರು.
ಪತಂಜಲಿಯ ಮಂಡಲ ಪ್ರಭಾರಿ ರಾಘವೇಂದ್ರ ರಾವ್ ಜೀಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬೀಜ ಮಂತ್ರ ಸಹಿತವಾಗಿ ಅಷ್ಟ ಚಕ್ರದ ಧ್ಯಾನ ನಡೆಸಿಕೊಟ್ಟರು. ಪತಂಜಲಿ ಜಿಲ್ಲಾ ಪ್ರಭಾರಿ ಕೆ. ರಾಘವೇಂದ್ರ ಭಟ್ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಆರ್ ಜಿ.ಬಿರದಾರಣ್ಣ, ಶ್ರೀ ಕೃಷ್ಣ ಯೋಗ ಕೇಂದ್ರ ಬ್ರಹ್ಮಗಿರಿಯ ಅಮಿತ್ ಕುಮಾರ್ ಶೆಟ್ಟಿ, ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಬನ್ನಂಜೆಯ ರಾಜೇಶ್ ಶೆಟ್ಟಿ, ನಿರಂತರ ಯೋಗ ಕೇಂದ್ರ ಚಿಟ್ಪಾಡಿಯ ಮಮತಾ ಶೆಟ್ಟಿಗಾರ್ ರವರನ್ನು ಹೂ ನೀಡಿ ಸ್ವಾಗತಿಸಿದರು. ಶ್ರೀ ಪುತ್ತಿಗೆ ಮಠದ ದಿವಾನರಾದ ನಾಗರಾಜ್ ಆಚಾರ್ಯ, ರಮೇಶ್ ಭಟ್, ಪತಂಜಲಿಯ ಅಜೀವ ಸದಸ್ಯ ವಿಶ್ವನಾಥ್ ಭಟ್, ಪ್ರಭಾರಿಗಳಾದ ಅನಂತರಾಯ ಶೆಣೈ, ಜಗದೀಶ ಕುಮಾರ್, ಶ್ರೀಪತಿ ಭಟ್, ಲೀಲಾ ಆರ್ ಅಮೀನ್ ಗಿರೀಶ್, ರವೀಂದ್ರ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಂಜಿತ್ ಕೆ. ಎಸ್ ಕಾರ್ಯಕ್ರಮ ನಿರ್ವಹಿಸಿ, ಲಕ್ಷ್ಮಣ ಕಾಮತ್ ವಂದಿಸಿದರು.