ಕೋಟ, ಡಿ.21: ಕೋಡಿ ಕನ್ಯಾಣದ ೮೦ ವರ್ಷಕ್ಕೂ ಅಧಿಕ ಇತಿಹಾಸವಿರುವ ಶ್ರೀ ರಾಮ ದೇಗುಲದ ವಾರ್ಷಿಕ ಆಡಳಿತ ಸಭೆಯಲ್ಲಿ ನೂತನ ಆಡಳಿತ ಮಂಡಳಿಯ ಸಮಿತಿ ಆಯ್ಕೆ ಪ್ರಕ್ರೀಯೆ ಸಮಿತಿಯ ಗೌರವಾಧ್ಯಕ್ಷ ನಾಡೋಜ ಡಾ. ಜಿ ಶಂಕರ್ ಮಾರ್ಗದರ್ಶನದಲ್ಲಿ ನಡೆಯಿತು. ಸಭೆಯಲ್ಲಿ ಶ್ರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ರಾಘವೇಂದ್ರ ಕರ್ಕೇರ ಕೋಡಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ರಾಜು ಕರ್ಕೇರ ಮತ್ತು ಸತೀಶ್ ಜಿ ಕುಂದರ್, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ಸಾಲಿಯಾನ್, ಜೊತೆ ಕಾರ್ಯದರ್ಶಿ ವಿಜಯ ಮಾಸ್ಟರ್, ಮಹೇಶ್ ತಿಂಗಳಾಯ, ಕೋಶಾಧಿಕಾರಿ ಜಯಕುಮಾರ್ ಎ.ಎಸ್., ಗೌರವ ಸಲಹೆಗಾರರಾಗಿ ಶಿವ.ಎಸ್ ಕರ್ಕೇರ, ದಯಾನಂದ ಅಮೀನ್, ಅಶೋಕ್ ಕುಂದರ್ ಜೆ.ಎಸ್.ಆರ್., ಮಹಾಬಲ ಕುಂದರ್, ಸುರೇಶ್ ಖಾರ್ವಿ, ವಾಮನ್ ಸಾಲಿಯಾನ್, ಹರ್ಷ ಕುಂದರ್, ಅಶೋಕ್ ತಿಂಗಳಾಯ, ಅಣ್ಣಪ್ಪ ಕುಂದರ್, ಜಗನ್ನಾಥ್ ಅಮೀನ್, ವಿಜಯ ತಿಂಗಳಾಯ, ಗಣೇಶ್ ಕುಂದರ್, ಭಾಸ್ಕರ್ ಕಾಂಚನ್, ದಯಾನಂದ ಕರ್ಕೇರ, ಪ್ರಕಾಶ್ ಬಂಗೇರ, ರಾಘವೇಂದ್ರ ಸುವರ್ಣ, ಪ್ರಭಾಕರ ಮೆಂಡನ್, ಉದಯ್ ಕಾಂಚನ್, ಸುರೇಂದ್ರ ಪೂಜಾರಿ, ಚಂದ್ರ ತಿಂಗಳಾಯ, ದಿವಾಕರ ಶೆಣೈ, ಸುರೇಶ್ ಕಾಂಚನ್ ಇವರುಗಳನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದ ನೂತನ ಸಮಿತಿಗೆ ದೇಗುಲದ ತಂತ್ರಿಗಳಾದ ವೇದಮೂರ್ತಿ ಸುಬ್ರಹ್ಮಣ್ಯ ಭಟ್ ರವರು ಅಭಿನಂದನೆ ತಿಳಿಸಿದರು. ಸಭೆಯಲ್ಲಿ ಪ್ರಧಾನ ಅರ್ಚಕ ಭಾಸ್ಕರ್ ಬಾಯಿರಿ ಮತ್ತು ರಾಮದಾಸ್ ಸಾಲಿಯಾನ್ ಹಾಗೂ ಶ್ರೀ ರಾಮ ದೇಗುಲದ ಸರ್ವ ಸದಸ್ಯರು ಉಪಸ್ಥಿತರಿದ್ದರು. ನಂತರ ನಿಕಟಪೂರ್ವ ಅಧ್ಯಕ್ಷ ಸುರೇಶ್ ಖಾರ್ವಿ ನೂತನ ಸಮಿತಿಗೆ ಲೆಕ್ಕತ್ರಗಳನ್ನು ಹಸ್ತಾಂತರಿಸಿ ಧನ್ಯವಾದ ಸಮರ್ಪಿಸಿದರು.
ಶ್ರೀ ರಾಮ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ರಾಘವೇಂದ್ರ ಕರ್ಕೇರ ಕೋಡಿ ಆಯ್ಕೆ
ಶ್ರೀ ರಾಮ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ರಾಘವೇಂದ್ರ ಕರ್ಕೇರ ಕೋಡಿ ಆಯ್ಕೆ
Date: