ಉಡುಪಿ, ಡಿ.20: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ಡಾ. ಬಿ.ಆರ್.ಅಂಬೇಡ್ಕರ್ ರವರ ಹೆಸರನ್ನು ಹೇಳುವುದು ಫ್ಯಾಷನ್ ಆಗಿದೆ. ಅಂಬೇಡ್ಕರ್ ಹೆಸರು ಹೇಳುವ ಬದಲು ದೇವರ ಹೆಸರು ಹೇಳಿದರೆ ಏಳು ಜನ್ಮದಲ್ಲಿ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಹೇಳಿಕೆ ಖಂಡಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಸಮಾನತೆ, ದ್ವೇಷ ಹರಡುವ ಬಿಜೆಪಿಗರ ಮನಸ್ಥಿತಿಯನ್ನು ಇದು ಸೂಚಿಸುತ್ತದೆ.
ಹಾಗೆಯೇ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತಾಗಿ ಗೃಹಸಚಿವ ಅಮಿತ್ ಶಾ ರವರ ನಿಲುವಿಗೆ ಅಂಬೇಡ್ಕರ್ ರವರಿಂದ ಸಮಾನತೆ ಮತ್ತು ಘನತೆಯ ಬದುಕನ್ನು ಪಡೆದಿರುವ ದೇಶದ ಕೋಟ್ಯಾಂತರ ಜನತೆ ಅವರಿಗೆ ಛೀಮಾರಿ ಹಾಕಲಿದ್ದಾರೆ ಎಂದರು. ಘನತೆ, ಸಮಾನತೆ, ಸಹಬಾಳ್ವೆಯ ಜೀವನ ನಡೆಸಲು. ಅವಕಾಶ ಕಲ್ಪಿಸಿದ ಮಾನವತಾವಾದಿ ಡಾ.ಬಿ.ಆರ್ ಅಂಬೇಡ್ಕರ್ ರವರನ್ನು ನಾವೆಲ್ಲ ಪ್ರತಿನಿತ್ಯ ಸ್ಮರಿಸುವ ಮೂಲಕ ಗೌರವಿಸಬೇಕಾಗಿದೆ ಎಂದು ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಬೇಡ್ಕರ್ ಕುರಿತಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡನೀಯ: ರಮೇಶ್ ಕಾಂಚನ್

ಅಂಬೇಡ್ಕರ್ ಕುರಿತಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡನೀಯ: ರಮೇಶ್ ಕಾಂಚನ್
Date: