Monday, February 24, 2025
Monday, February 24, 2025

ರಾಷ್ಟ್ರದ ಹಿತಾಸಕ್ತಿ ಕಾಪಾಡುವುದೇ ವಿದೇಶಾಂಗ ನೀತಿಯ ಪ್ರಥಮ ಪ್ರಾಶಸ್ತ್ಯ: ಪ್ರೊ.ಶೆಟ್ಟಿ

ರಾಷ್ಟ್ರದ ಹಿತಾಸಕ್ತಿ ಕಾಪಾಡುವುದೇ ವಿದೇಶಾಂಗ ನೀತಿಯ ಪ್ರಥಮ ಪ್ರಾಶಸ್ತ್ಯ: ಪ್ರೊ.ಶೆಟ್ಟಿ

Date:

ಉಡುಪಿ, ಡಿ.20: ರಾಷ್ಟ್ರ- ರಾಷ್ಟ್ರಗಳ ನಡುವಿನ ರಾಜಕೀಯ ಆಥಿ೯ಕ ಸಾಂಸ್ಕೃತಿಕ ಮಿಲಿಟರಿ ಮುಂತಾದ ಕ್ಷೇತ್ರಗಳಲ್ಲಿನ ಸಂಬಂಧಗಳನ್ನು ನಿರ್ಧರಿಸುವ ತಂತ್ರಗಾರಿಕೆಯೇ ವಿದೇಶಾಂಗ ನೀತಿ. ವಿದೇಶಾಂಗ ನೀತಿ ರೂಪಿಸುವುದು ಒಂದು ಕಲೆ ಮತ್ತು ತಂತ್ರಗಾರಿಕೆ. ರಾಷ್ಟ್ರದ ಹಿತಾಸಕ್ತಿ ಕಾಪಾಡಿಕೊಳ್ಳುವುದು ಪ್ರತಿಯೊಂದು ರಾಷ್ಟದ ಮೊದಲ ಆದ್ಯತೆ ಎಂದು ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು. ಉಡುಪಿ ಮತ್ತು ಉದ್ಯಾವರ ರೇೂಟರಿ ಕ್ಲಬ್‌ ಜಂಟಿಯಾಗಿ ಉಡುಪಿ ಕಡಿಯಾಳಿಯ ರೇೂಟರಿ ಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಬದಲಾಗುತ್ತಿರುವ ವಿಶ್ವದ ವಿದ್ಯಾಮಾನಗಳು ಭಾರತದ ಮೇಲಾಗುವ ಪರಿಣಾಮಗಳು ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಉಡುಪಿ ರೇೂಟರಿ ಅಧ್ಯಕ್ಷ ಗುರುರಾಜ್ ಭಟ್, ಉದ್ಯಾವರ ರೇೂಟರಿ ಅಧ್ಯಕ್ಷ ಜೀವನ್ ಡಿ ಸೇೂಜಾ ಮುಂತಾದವರು ಉಪಸ್ಥಿತರಿದ್ದರು. ಉಡುಪಿ ರೇೂಟರಿ ಕಾರ್ಯದರ್ಶಿ ವೈಷ್ಣವಿ ಆಚಾರ್ಯ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ- ಶ್ರೀಕೃಷ್ಣ ಮಠದ ವತಿಯಿಂದ ಹೊರೆಕಾಣಿಕೆ

ಉಡುಪಿ, ಫೆ.23: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾಪು ಅಮ್ಮನ ಪ್ರತಿಷ್ಠಾ...

ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನಕ್ಕೆ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಕೊಡುಗೆ

ಕುಕ್ಕಿಕಟ್ಟೆ, ಫೆ.23: ಮಣಿಪಾಲದ ಟಾಪ್ಮಿಅಲ್ಯುಮ್ನಿ ಅಸೋಸಿಯೇಷನ್ ನಿಂದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ...

ಕೊಹ್ಲಿ ಶತಕ; ಪಾಕಿಸ್ತಾನ ವಿರುದ್ಧ ಭಾರತ ದಿಗ್ವಿಜಯ

ಯು.ಬಿ.ಎನ್.ಡಿ., ಫೆ.23: ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈ...

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....
error: Content is protected !!