Sunday, January 19, 2025
Sunday, January 19, 2025

ರಸ್ತೆ ನಿರ್ಮಾಣ ಜನಪ್ರತಿನಿಧಿಯ ಜವಾಬ್ದಾರಿ: ವಿಜಯ್ ಕೊಡವೂರು

ರಸ್ತೆ ನಿರ್ಮಾಣ ಜನಪ್ರತಿನಿಧಿಯ ಜವಾಬ್ದಾರಿ: ವಿಜಯ್ ಕೊಡವೂರು

Date:

ಕೊಡವೂರು, ಡಿ.19: ಕೊಡವೂರು ವಾರ್ಡಿನ ಚೆನ್ನಂಗಡಿ ಪರಿಸರದಲ್ಲಿ ಸರಕಾರದ ವತಿಯಿಂದ ನಿರ್ಮಾಣವಾದ ಹೊಸ ರಸ್ತೆಯನ್ನು ಉಡುಪಿ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕೊಡವೂರು ವಾರ್ಡಿನಲ್ಲಿ ಕಳೆದ 4 ವರ್ಷದಿಂದ
ಅನೇಕ ರಸ್ತೆಗಳು ನಿರ್ಮಾಣ ಆಗಿವೆ. ಮೂಲಸೌಕರ್ಯದ ಅಗತ್ಯತೆಯನ್ನು ತಿಳಿದುಕೊಂಡು, ರಸ್ತೆ ನಿರ್ಮಾಣಕ್ಕೆ ಬೇಕಾಗದ ಸ್ಥಳವನ್ನು ನಾಗರಿಕರಿಗೆ ಮನವರಿಕೆ ಮಾಡಿ ಹೊಸ ರಸ್ತೆಯನ್ನು ನಿರ್ಮಾಣ ಮಾಡುವ ಕಾರ್ಯ ನಡೆಯುತ್ತಿದೆ. ಕೊಡವೂರು ವಾರ್ಡಿನ ಚೆನ್ನಂಗಡಿ ಪರಿಸರದಲ್ಲಿ ಹಲವಾರು ವರ್ಷಗಳಿಂದ ಮಣ್ಣಿನ ರಸ್ತೆ, ಓಣಿಯಲ್ಲಿ ನಡೆದುಕೊಂಡು ಹೋಗುವ ಪರಿಸ್ಥಿತಿ. ಮಳೆಗಾಲದ ಸಮಯದಲ್ಲಿ ತಗ್ಗು ಪ್ರದೇಶವಾಗಿರುವುದರಿಂದ ರಸ್ತೆಯಲ್ಲಿ ನೀರು ನಿಂತು ಕೆಸರಿನಿಂದ ನಡೆದುಕೊಂಡು ಹೊಡುವ ಪರಿಸ್ಥಿತಿ. ಇದನ್ನು ತಿಳಿದು ಸ್ಥಳೀಯರೊಂದಿಗೆ ಮಾತನಾಡಿ ಮನವರಿಕೆ ಮಾಡಿ ರಸ್ತೆ ನಿರ್ಮಾಣಕ್ಕೆ ತಮ್ಮ ತಮ್ಮ ಜಾಗವನ್ನು ನೀಡಿ ಸರ್ಕಾರದ ಮತ್ತು ನಗರಸಭೆಯ ವತಿಯಿಂದ ಹೊಸ ರಸ್ತೆ ನಿರ್ಮಾಣ ಮಾಡಿ ಉದ್ಘಾಟನೆಯನ್ನು ನೆರವೇರಿಸಲಾಗಿದೆ ಎಂದರು. ಸ್ಥಳೀಯರಾದ ಧನಂಜಯ್, ಯಾದವ್, ನವೀನ್, ದೂಜ ಲೂಯಿಸ್, ಮಗ್ಗಿಬಾಯಮ್ಮ, ವಿಮಲ ಮುಂತಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!