Monday, February 24, 2025
Monday, February 24, 2025

ಬಾಂಧವ್ಯ ಫೌಂಡೇಶನ್: ಮನೆ ಹಸ್ತಾಂತರ

ಬಾಂಧವ್ಯ ಫೌಂಡೇಶನ್: ಮನೆ ಹಸ್ತಾಂತರ

Date:

ಕೋಟ, ಡಿ.18: ಬಾಂಧವ್ಯ ಫೌಂಡೇಶನ್ ಕರ್ನಾಟಕ ಇವರ ನೆರಳು ಯೋಜನೆಯಿಂದ ೧೨ನೇ ಮನೆಯನ್ನು ಕೋಟತಟ್ಟು ಪಡುಕರೆ ನಿವಾಸಿ ಜಯ ಪೂಜಾರಿಯವರಿಗೆ ಹಸ್ತಾಂತರ ಮಾಡಲಾಯಿತು. ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಯಿತು. ಕರಾವಳಿ ದೈವನರ್ತಕ ಸಂತೋಷ್ ಕುಮಾರ್ ಆರ್ಡಿಯವರಿಗೆ ಕರಾವಳಿ ಸಿರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕುಂದಾಪುರದ ಬದುಕು ತಂಡಕ್ಕೆ ವಿಶೇಷ ಗೌರವ ನೀಡಿ ಸನ್ಮಾನಿಸಲಾಯಿತು. ಬಾರಕೂರಿನ ವ್ಯಕ್ತಿಯೋರ್ವರಿಗೆ ಕ್ಯಾನ್ಸರ್ ಚಿಕಿತ್ಸೆಗೆ 10 ಸಾವಿರ ಸಹಾಯಧನ ವಿತರಿಸಲಾಯಿತು.

ಬಾಂಧವ್ಯ ಫೌಂಡೇಶನ್‌ನ ಸ್ಥಾಪಕಧ್ಯಕ್ಷ ದಿನೇಶ್ ಬಾಂಧವ್ಯ ಸ್ವಾಗತಿಸಿ ಯೋಜನೆ ನಡೆದು ಬಂದ ದಾರಿಯ ಬಗ್ಗೆ ಮಾತನಾಡಿ ಯೋಜನೆಗೆ ಸಹಕಾರ ನೀಡಿದವರನ್ನು ಗೌರವಿಸಿ ಮನೆಯ ಮಾಲಕಿಗೆ ಕೀ ಹಸ್ತಾಂತರಿಸಿದರು. ಪಾಂಡೇಶ್ವರದ ರಕ್ತೇಶ್ವರಿ ದೇವಸ್ಥಾನದ ಧರ್ಮದರ್ಶಿ ಕೆ.ವಿ ರಮೇಶ್ ರಾವ್, ರಂಗಭೂಮಿ ನಿರ್ದೇಶಕ ಮತ್ತು ನಟ ಬಾಸುಮ ಕೊಡಗು, ವಿವೇಕ ಪ.ಪೂ ಕಾಲೇಜ್‌ನ ಪ್ರಾಂಶುಪಾಲ ಜಗದೀಶ್ ನಾವಡ, ಉಡುಪಿ ಟೌನ್ ಆರಕ್ಷಕ ಠಾಣೆ ಎಎಸ್‌ಐ ಜಯಕರ್ ಐರೋಡಿ, ಅಂಚೆ ಕಚೇರಿ ಅಧಿಕಾರಿ ರೇಷ್ಮಾ ವಾಸುದೇವ ನಾಯಕ್, ಕಸ್ತೂರ್ಬಾ ಆಸ್ಪತ್ರೆ ಗ್ರಾಹಕ ಆರೈಕೆ ವಿಭಾಗದ ಸಿಬ್ಬಂದಿ ಭಾಗ್ಯಲಕ್ಷ್ಮಿ ಕಿಣಿ ಮುಂತಾದವರು ಉಪಸ್ಥಿತರಿದ್ದರು. ಟ್ರಸ್ಟಿ ಡಾ.ಜ್ಯೋತಿ ಸಾಮಂತ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ- ಶ್ರೀಕೃಷ್ಣ ಮಠದ ವತಿಯಿಂದ ಹೊರೆಕಾಣಿಕೆ

ಉಡುಪಿ, ಫೆ.23: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾಪು ಅಮ್ಮನ ಪ್ರತಿಷ್ಠಾ...

ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನಕ್ಕೆ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಕೊಡುಗೆ

ಕುಕ್ಕಿಕಟ್ಟೆ, ಫೆ.23: ಮಣಿಪಾಲದ ಟಾಪ್ಮಿಅಲ್ಯುಮ್ನಿ ಅಸೋಸಿಯೇಷನ್ ನಿಂದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ...

ಕೊಹ್ಲಿ ಶತಕ; ಪಾಕಿಸ್ತಾನ ವಿರುದ್ಧ ಭಾರತ ದಿಗ್ವಿಜಯ

ಯು.ಬಿ.ಎನ್.ಡಿ., ಫೆ.23: ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈ...

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....
error: Content is protected !!