Monday, February 24, 2025
Monday, February 24, 2025

ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ: ಸಾಧಕರಿಗೆ ಸನ್ಮಾನ

ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ: ಸಾಧಕರಿಗೆ ಸನ್ಮಾನ

Date:

ಉಡುಪಿ, ಡಿ.17: ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ 18 ನೇ ವಾರ್ಷಿಕೋತ್ಸವವು ಕರಂಬಳ್ಳಿ ಶ್ರೀ ವೆಂಕಟ್ರಮಣ ದೇವಸ್ಥಾನದ ಶ್ರೀನಿವಾಸ ಸಭಾಭವನದಲ್ಲಿ ನಡೆಯಿತು. ಬೆಳಿಗ್ಗೆ 10 ಗಂಟೆಗೆ ಶ್ರೀ ದೇವರಿಗೆ ವಿಷ್ಣುಸಹಸ್ರನಾಮಾವಳಿ ಸಹಿತ ತುಳಸಿ ಅರ್ಚನೆ, ಮಹಾಸಭೆ, ಮಧ್ಯಾಹ್ನ ಬ್ರಾಹ್ಮಣ ಸುಹಾಸಿನಿ ಆರಾಧನೆ, ಮಹಿಳೆಯರಿಗೆ ಹೂ ಕಟ್ಟುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, ಗಂಟೆ 3.30 ರಿಂದ ಸಮಿತಿಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಹಾಸಭೆಯಲ್ಲಿ ಕೀಳಂಜೆ ಶ್ರೀಕೃಷ್ಣರಾಜ್ ಭಟ್ ಅವರನ್ನು 4 ನೇ ಅವಧಿಗೆ ಸಮಿತಿಯ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಂಜೆ 6.30 ರಿಂದ ನಡೆದ ಸಭಾ ಕಾರ್ಯಕ್ರಮದಲ್ಲಿ ಉಡುಪಿಯ ನಿಕಟಪೂರ್ವ ಶಾಸಕರಾದ ಕೆ ರಘುಪತಿ ಭಟ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಲಂಚಾರು ರಘುಪತಿ ತಂತ್ರಿ (ಅಂಕಣಕಾರರು ಹಾಗೂ ಸಮಾಜ ಚಿಂತಕರು), ಉದಯ ಕುಮಾರ್ ಮಧ್ಯಸ್ತ (ಯಕ್ಷಗಾನ ಕಲಾ ಸೇವಕರು) ಜಯಾ ತಂತ್ರಿ ಕೆ (ರಾಷ್ಟ್ರಮಟ್ಟದ ಕ್ರೀಡಾ ಪಟು) ಮುಖ್ಯಪ್ರಾಣ ಉಪಾಧ್ಯಾಯ (ಪಾಕತಜ್ಞ) ಇವರುಗಳನ್ನು ಸನ್ಮಾನಿಸಿ ತಮ್ಮ ಭಾಷಣದಲ್ಲಿ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ಸಾಮಾಜಿಕ, ಧಾರ್ಮಿಕ , ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾನಿಧಿ ಅರ್ಪಣೆ, ವಿವಾಹದ ಸುವರ್ಣ ಮಹೋತ್ಸವ ಆಚರಿಸಿಕೊಂಡ ವಿಪ್ರ ದಂಪತಿಗಳಿಗೆ ಗೌರವಾರ್ಪಣೆ ಹಾಗೂ ವಿಪ್ರ ಗೋಪಾಲಕರಿಗೆ ಸಮ್ಮಾನ ಮಾಡಲಾಯಿತು.

ಮುಖ್ಯ ಅಥಿತಿಗಳಾಗಿ ಆಗಮಿಸಿದ ಉಡುಪಿ ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಷಣ್ಮುಖ ಹೆಬ್ಬಾರ್ ಶುಭಾಶಂಸನೆಗೈದರು. ಉಡುಪಿ ಜಿಲ್ಲಾ ಮಹಾಸಭಾದ ಅಧ್ಯಕ್ಷ ಸಂದೀಪ್ ಮಂಜ, ಅರ್ಚಕ ದಿವಾಕರ್ ಐತಾಳ್, ಸಮಿತಿಯ ಉಪಾಧ್ಯಕ್ಷ ರಂಗನಾಥ ಸಾಮಗ, ಕೋಶಾಧಿಕಾರಿ ಅಜಿತ್ ಬಿಜಾಪುರ್ ಉಪಸ್ಥಿತರಿದ್ದರು.

ಕ್ರೀಡಾ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಆಚಾರ್ಯ ಗುಂಡಿಬೈಲ್, ಚಂದ್ರಕಾಂತ್ ಕೆ ಎನ್., ಶ್ರೀಪತಿ ಭಟ್, ರಂಗನಾಥ ಸರಳಾಯ, ವೇದವ್ಯಾಸ ಆಚಾರ್, ಸುಧಾ ಭಟ್, ಕವಿತಾ ಆಚಾರ್, ವಸುಧಾ ಭಟ್, ರಾಧಿಕಾ ಭಟ್ ಸಹಕರಿಸಿದರು. ಕಾರ್ಯದರ್ಶಿ ನಾಗರಾಜ್ ಭಟ್ ವಂದಿಸಿದರು. ಪೆರಂಪಳ್ಳಿ ವಾಸುದೇವ ಭಟ್ ಮತ್ತು ಶ್ರೀನಿವಾಸ ಬಲ್ಲಾಳ್ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಯಶ್ರೀ ಬಾರಿತ್ತಾಯ ಮತ್ತು ಪ್ರಿಯಂವದಾ ನಿರ್ವಹಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶಾಂಭವಿ ಶಾಲೆ ಶತಮಾನೋತ್ಸವ ಮನವಿ ಪತ್ರ ಬಿಡುಗಡೆ

ಕೋಟ, ಫೆ.24: ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗಿಳಿಯಾರು...

ಗೆಳೆಯರ ಬಳಗ ಕಾರ್ಕಡ- ವಾರ್ಷಿಕೋತ್ಸವ; ಸಾಧಕರಿಗೆ ಸನ್ಮಾನ

ಸಾಲಿಗ್ರಾಮ, ಫೆ.24: ಸಂಘಟನೆಗಳ ನಿರಂತರ ಸಾಮಾಜಿಕ ಕಾರ್ಯ ಅಸಾಮಾನ್ಯವಾದದ್ದು. ಈ ನಿಟ್ಟಿನಲ್ಲಿ...

ಭಜನಾ ಮಂಗಲೋತ್ಸವ

ಸಾಸ್ತಾನ, ಫೆ.24: ಶ್ರೀ ರಾಘವೇಂದ್ರ ಭಜನಾ ಮಂದಿರ ಪಾಂಡೇಶ್ವರ ಸಾಸ್ತಾನ ಇಲ್ಲಿ...
error: Content is protected !!