ಮಲ್ಪೆ, ಡಿ.16: ಭಾರತದ ಪ್ರಮುಖ ಶಿಪ್‌ಯಾರ್ಡ್ – ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಸೋಮವಾರ ನಾರ್ವೆಯ ಮೆಸಸ್ ವಿಲ್ಸನ್ ಎಎಸ್‌ಎಗೆ ನಿರ್ಮಿಲಾಗುತ್ತಿರುವ 3800 ಟಿಡಿಡಬ್ಲ್ಯು ಜನರಲ್ ಕಾರ್ಗೋ ಹಡಗುಗಳ ಸರಣಿಯ ಮೊದಲ ಹಡಗನ್ನು ಬಿಡುಗಡೆ ಮಾಡಿದೆ. ಈ ಬಿಡುಗಡೆಯು ಭಾರತ ಸರ್ಕಾರದ ಆತ್ಮನಿರ್ಭರ ಭಾರತ ಮತ್ತು ಮೇಕ್ ಇನ್ ಇಂಡಿಯಾ ಹಾಗೂ ಮೇಕ್ ಫಾರ್ ದಿ ವರ್ಲ್ಡ್ ಯೋಜನೆಗಳಿಗೆ ಸಿಎಸ್‌ಎಲ್ ಸಮೂಹದ ಬದ್ಧತೆಯನ್ನು ಕಾರ್ಯಕ್ರಮಗಳನ್ನು ಒತ್ತಿ ಹೇಳುತ್ತದೆ.

ರಾಯಲ್ ನಾರ್ವೇಯನ್ ರಾಯಭಾರ ಕಚೇರಿಯ ಮಿನಿಸ್ಟರ್ ಕೌನ್ಸಿಲರ್ ಮತ್ತು ಡೆಪ್ಯುಟಿ ಹೆಡ್ ಆಫ್ ಮಿಷನ್ ಮಾರ್ಟಿನ್ ಆಮ್ಡಾಲ್ ಬೋಥೀಮ್ ಅವರು ವಿಲ್ಸನ್ ಎಎಸ್‌ಎಯ ಮುಖ್ಯ ಹಣಕಾಸು ಅಧಿಕಾರಿ ಐನಾರ್ ಟೋರ್ನೆಸ್ ಅವರೊಂದಿಗೆ ಹಡಗನ್ನು ಉದ್ಘಾಟಿಸುವ ಗೌರವವನ್ನು ಪಡೆದರು. ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮಧು ಎಸ್. ನಾಯರ್ ಅವರು ಉಪಸ್ಥಿರಿದ್ದರು. ಕೊಚ್ಚಿನ್ ಶಿಪ್‌ಯಾರ್ಡ್ ತಾಂತ್ರಿಕ ನಿರ್ದೇಶಕ ಬಿಜೋಯ್ ಭಾಸ್ಕರ್, ಉಡುಪಿ-ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿಕುಮಾರ್ ಎ. ಮತ್ತು ಶಿಪ್‌ಯಾರ್ಡ್ನ ಇತರ ಹಿರಿಯ ಸಿಬ್ಬಂದಿ ಹಾಜರಿದ್ದರು. ವಿಲ್ಸನ್ ಎಎಸ್‌ಎ, ನಾರ್ವೆಯ ಬರ್ಗೆನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕಂಪನಿಯಾಗಿದ್ದು, ಯುರೋಪ್‌ನಲ್ಲಿ ಪ್ರಮುಖ ಕಿರು ಸಮುದ್ರ ನೌಕೆ ನಿರ್ವಾಹಕ ಕಂಪನಿಯಾಗಿದೆ ಮತ್ತು ಯುರೋಪ್‌ನಾದ್ಯಂತ ಸುಮಾರು 15 ದಶಲಕ್ಷ ಟನ್ ಒಣ ಸರಕುಗಳನ್ನು ಸಾಗಿಸುತ್ತದೆ. ಕಂಪನಿಯು 1500 ರಿಂದ 8500 ಡಿಡಬ್ಲ್ಯುಟಿ ವರೆಗಿನ ಸುಮಾರು 130 ಹಡಗುಗಳನ್ನು ನಿರ್ವಹಿಸುತ್ತದೆ. ಈ ಆರು ಹಡಗುಗಳ ನಿರ್ಮಾಣ ಕಾರ್ಯಾದೇಶದ ಮುಂದುವರಿದ ಭಾಗವಾಗಿ ವಿಲ್ಸನ್ ಎಎಸ್‌ಎ ಕಂಪನಿಯು ೨೦೨೪ರ ಜೂನ್ ಮತ್ತು ಸೆಪ್ಟೆಂಬರ್‌ನಲ್ಲಿ ಎರಡು ಬ್ಯಾಚ್‌ಗಳಲ್ಲಿ ಎಂಟು 6300 ಟಿಡಿಡಬ್ಲ್ಯು ಹಡಗುಗಗಳು ಸೇರಿದಂತೆ ಒಟ್ಟು ಒಟ್ಟು 14 ಹಡಗುಗಳನ್ನು ಪಡೆಯಲಿದೆ. ಈ ಯೋಜನೆಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ. ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್, ಈ ಯಾರ್ಡ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ, ಯುಸಿಎಸ್‌ಎಲ್ ಎರಡು 62ಟಿ ಬೊಲ್ಲಾರ್ಡ್ ಪುಲ್ ಟಗ್‌ಗಳನ್ನು ಅದಾನಿ ಹಾರ್ಬರ್ ಸರ್ವಿಸಸ್ ಲಿಮಿಟೆಡ್ ಕಂಪನಿಯ ಓಷನ್ ಸ್ಪಾರ್ಕಲ್ ಲಿಮಿಟೆಡ್ ಮತ್ತು ಎರಡು 70 ೦ಟಿ ಬೊಲ್ಲಾರ್ಡ್ ಪುಲ್ ಟಗ್ ಅನ್ನು ಪೋಲೆಸ್ಟಾರ್ ಮ್ಯಾರಿಟೈಮ್ ಲಿಮಿಟೆಡ್‌ಗೆ ಯಶಸ್ವಿಯಾಗಿ ತಲುಪಿಸಿದೆ.


ಸಾಗರದಿಂದ ಪುನರಾವರ್ತಿತ ಆದೇಶಗಳಂತೆ ಒಟ್ಟು ನಾಲ್ಕು ೭೦ಟಿ ಬೊಲ್ಲಾರ್ಡ್ ಪುಲ್ ಟಗ್ಸ್ಗಳನ್ನು ಸ್ಪಾರ್ಕಲ್ ಲಿಮಿಟೆಡ್ (ಮೂರು) ಮತ್ತು ಪೋಲೆಸ್ಟಾರ್ ಮ್ಯಾರಿಟೈಮ್ ಲಿಮಿಟೆಡ್‌ಗೆ (ಒಂದು) ಪೂರೈಸಲು ಕಾರ್ಯಾದೇಶವನ್ನು ಪಡೆದಿದೆ. ಈ ಹಡಗಿನ ಉದ್ದ 89.43 ಮೀಟರ್, ಅಗಲ 13.2 ಮೀ ಮತ್ತು ಎತ್ತರ 4.2 ಮೀಟರ್‌ಗಳು. ನೆದರ್ಲೆಂಡ್ಸ್ನ ಕೋನೊಶಿಪ್ ಇಂಟರ್‌ನ್ಯಾಷನಲ್ ವಿನ್ಯಾಸಗೊಳಿಸಿದ ಹಡಗುಗಳನ್ನು ಯುರೋಪ್ ಕರಾವಳಿ ನೀರಿನಲ್ಲಿ ಸಾಮಾನ್ಯ ಸರಕುಗಳ ಸಾಗಣೆಗಾಗಿ ಪರಿಸರ ಸ್ನೇಹಿ ಡೀಸೆಲ್ ಎಲೆಕ್ಟ್ರಿಕ್ ನೌಕೆಯಾಗಿ ನಿರ್ಮಿಸಲಾಗಿದೆ.
ಉಡುಪಿ-ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (ಯುಸಿಎಸ್‌ಎಲ್), ಮೆಸಸ್ ಕೊನೊಶಿಪ್ ಇಂಟರ್‌ನ್ಯಾಷನಲ್ ಸಹಯೋಗದೊಂದಿಗೆ ಮೆಸಸ್ ವಿಲ್ಸನ್ ಎಎಸ್‌ಎಗಾಗಿ ಅತ್ಯುತ್ತಮ ಹಡಗನ್ನು ನಿರ್ಮಿಸಿಕೊಡುವ ಮೂಲಕ ಅಂತರರಾಷ್ಟ್ರೀಯ ಹಡಗು ನಿರ್ಮಾಣ ಮಾರುಕಟ್ಟೆಯಲ್ಲಿ ಬಲವಾದ ನೆಲೆಯನ್ನು ಸ್ಥಾಪಿಸಿದೆ. ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಮತ್ತು ಅದರ ಅಂಗಸಂಸ್ಥೆಯಾದ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಎರಡೂ ಪಾಶ್ಚಿಮಾತ್ಯ ಯುರೋಪಿಯನ್ ಮಾರುಕಟ್ಟೆಗೆ ಉತ್ತಮ ಗುಣಮಟ್ಟದ ಹಡಗುಗಳನ್ನು ನಿರ್ಮಿಸಲು ತಮ್ಮ ಅಚಲ ಬದ್ಧತೆಯನ್ನು ಪ್ರದರ್ಶಿಸುತ್ತಲೇ ಇವೆ. ಉಡುಪಿ-ಸಿಎಸ್‌ಎಲ್ ನ ಅಸ್ತಿತ್ವದಲ್ಲಿರುವ ಗ್ರಾಹಕರಿಂದ ಪುನರಾವರ್ತಿತ ಕಾರ್ಯಾದೇಶಗಳು ಯಾರ್ಡ್ನ ಸಾಮರ್ಥ್ಯಗಳು ಮತ್ತು ಉತ್ಕೃಷ್ಟತೆಯ ಮೇಲೆ ಗ್ರಾಹಕರು ಇರಿಸುವ ನಂಬಿಕೆ ಮತ್ತು ವಿಶ್ವಾಸವನ್ನು ಒತ್ತಿಹೇಳುತ್ತವೆ ಎಂದು ಸಿಎಸ್‌ಎಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮಧು ನಾಯರ್ ಹೇಳಿದರು.
ಉಡುಪಿ-ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್, ಈ ಹಿಂದೆ ಟೆಬ್ಮಾ ಶಿಪ್‌ಯಾರ್ಡ್ ಲಿಮಿಟೆಡ್ ಎಂದಾಗಿತ್ತು ಹಾಗೂ ಇದನ್ನು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ 2020 ರಲ್ಲಿ ಎನ್‌ಸಿಎಲ್‌ಟಿ ಪ್ರಕ್ರಿಯೆಯ ಮೂಲಕ ಸ್ವಾಧೀನಪಡಿಸಿಕೊಂಡಿತು ಮತ್ತು ಯಾರ್ಡ್ ಅನ್ನು 3 ವರ್ಷಗಳ ಕಡಿಮೆ ಅವಧಿಯಲ್ಲಿ ಲಾಭ ಗಳಿಸುವ ಯಾರ್ಡ್ ಆಗಿ ಪರಿವರ್ತಿಸಿತು. ಉಡುಪಿ-ಸಿಎಸ್ ಎಲ್ ಇಂದು ರೂ. 1500 ಕೋಟಿ ರೂಪಾಯಿಗೂ ಹೆಚ್ಚು ಕಾರ್ಯಾದೇಶವನ್ನು ಪಡೆದಿದೆ.