Thursday, December 19, 2024
Thursday, December 19, 2024

ನಲ್ ಜಲ್ ಮಿತ್ರ ಬಹು ಕೌಶಲ್ಯ ತರಬೇತಿ ಉದ್ಘಾಟನೆ

ನಲ್ ಜಲ್ ಮಿತ್ರ ಬಹು ಕೌಶಲ್ಯ ತರಬೇತಿ ಉದ್ಘಾಟನೆ

Date:

ಉಡುಪಿ, ಡಿ.16: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯತ್ ಉಡುಪಿ ಇವರ ಸಹಯೋಗದಲ್ಲಿ ನಲ್ ಜಲ್ ಮಿತ್ರ ಬಹು ಕೌಶಲ್ಯ ತರಬೇತಿಯನ್ನು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಗತಿನಗರ ಅಲೆವೂರು ಇಲ್ಲಿ ಹಮ್ಮಿಕೊಳ್ಳಲಾಯಿತು. ಈ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ನ ಯೋಜನಾ ನಿರ್ದೇಶಕರಾದ ಶ್ರೀನಿವಾಸ್ ರಾವ್ ಇವರು ಉದ್ಘಾಟಿಸಿದರು. ನಂತರ ಮಾತನಾಡಿ ಜಿಲ್ಲೆಯಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಳ್ಳಿ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಈ ಜಲ ಜೀವನ್ ಮಿಷನ್ ಅಡಿಯಲ್ಲಿ ನಲ್ ಜಲ್ ಮಿತ್ರ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಪ್ರತಿ ಗ್ರಾಮ ಪಂಚಾಯತ್ ನಿಂದ ಎರಡು ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ಈ ಸದ್ಯಸರಿಗೆ ಹದಿನೇಳು ದಿನದ ಬಹು ಕೌಶಲ್ಯ ತರಬೇತಿಯನ್ನು ನೀಡಿ ಗ್ರಾಮ ಪಂಚಾಯತ್ ಗೆ ನಿಯೋಜನೆ ಮಾಡಲಾಗುವುದು.

ಜಿಲ್ಲೆಯಲ್ಲಿ ಸಂಜೀವಿನಿ ಸ್ವ ಸಹಾಯ ಸಂಘದ ಮಹಿಳೆಯರಿಗೆ ವಿವಿಧ ತರಬೇತಿ ನೀಡಿ ಸ್ವ ಉದ್ಯೋಗಕ್ಕೆ ಅವಕಾಶ ಕಲ್ಪಿಸುವುದರ ಮೂಲಕ ಗ್ರಾಮೀಣ ಮಹಿಳೆಯರನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲೀಕರಣಗೊಳಿಸಲಾಗುತ್ತಿದೆ. ಇಂದು ಇತರ ತರಬೇತಿಗೆ ವಿಭಿನ್ನವಾದ ಬಹು ಕೌಶಲ್ಯ ತರಬೇತಿನ್ನು ನೀಡಿ ಜಲ್ ಜೀವನ್ ಮಿಷನ್ ನಡಿ ಈ ತರಬೇತಿ ಪಡೆದ ಮಹಿಳೆಯರನ್ನು ನಲ್ ಜಲ್ ಮಿತ್ರರನ್ನಾಗಿ ಗ್ರಾಮ ಪಂಚಾಯತ್ ನಲ್ಲಿ ನಿಯೋಜಿಸುವುದರ ಮೂಲಕ ಸಂಜೀವಿನಿ ಮಹಿಳೆಯರನ್ನು ಇನ್ನಷ್ಟು ಆರ್ಥಿಕವಾಗಿ ಸಬಲೀಕರಣಗೊಳಿಸುವ ಗುರಿ ಹೊಂದಾಗಿದೆ ಎಂದು ತಿಳಿಸಿದರು. ನಂತರ ಉಡುಪಿ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಯಾದ ವಿಜಯ ಇವರು ಮಾತನಾಡಿ ಇಂದು ಸಂಜೀವಿನಿ ಸ್ವ ಸಹಾಯ ಸಂಘದ ಮಹಿಳೆಯರು ವಿವಿಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಹಾಗೂ ವಿನುತನ ಕಾರ್ಯಕ್ರಮಗಳನ್ನು ಸಂಜೀವಿನಿ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿದೆ. ಇಂದು ನಲ್ ಜಲ್ ಮಿತ್ರ ಕಾರ್ಯಕ್ರಮದಡಿ ಸಂಜೀವಿನಿ ಗುಂಪಿನ ಮಹಿಳೆಯರಿಗೆ ಬಹು ಕೌಶಲ್ಯ ತರಬೇತಿ ನೀಡಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜಲ್ ಜೀವನ್ ಮಿಷನ್ ನನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗುವುದೆಂದು ತಿಳಿಸಿದರು.

ತರಬೇತಿ ಕಾರ್ಯಕ್ರಮದಲ್ಲಿ ಉಡುಪಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಫರ್ಝಾನ,ಜಲ್ ಜೀವನ್ ಮಿಷನ್ ಇದರ ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ಜೋಸೆಫ್ ರೆಬ್ಬೆಲೋ, ನಲ್ ಜಲ್ ಮಿತ್ರ ತರಬೇತಿಯ ತರಬೇತುದಾರರಾದ ಗಣಪತಿ ಭಟ್, ಜಿಲ್ಲಾ ಕೌಶಲ್ಯ ಮತ್ತು ಉದ್ಯಮಶೀಲತಾ ಇಲಾಖೆ ಇದರ ಸಹಾಯಕ ನಿರ್ದೇಶಕರಾದ ಅರುಣ್ ಪಿ , ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕರಾದ ಅವಿನಾಶ್ ಮತ್ತು ಸಂಜೀವಿನಿ ಯೋಜನೆಯ ಹಾಗೂ ಕೌಶಲ್ಯ ಇಲಾಖೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಡಾ. ನವೀನ್ ಸಾಲಿನ್ಸ್ ಅವರಿಗೆ ಲ್ಯಾಂಕಾಸ್ಟರ್ ವಿವಿಯ ಗೌರವ

ಮಣಿಪಾಲ, ಡಿ.18: ಯುಕೆಯ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದಿಂದ ಡಿಸೆಂಬರ್ ನಲ್ಲಿ ನಡೆದ ಪದವಿ...

ಗೃಹರಕ್ಷಕ ದಳದವರ ಉತ್ತಮ ಕಾರ್ಯಕ್ಕೆ ಜಿಲ್ಲಾಧಿಕಾರಿ ಶ್ಲಾಘನೆ

ಉಡುಪಿ, ಡಿ.18: ತುರ್ತು ಸಂದರ್ಭ, ಪ್ರಾಕೃತಿಕ ವಿಕೋಪ ಸೇರಿದಂತೆ ಪೊಲೀಸ್ ಇಲಾಖೆಯ...

ಜನವರಿ 10 ರಿಂದ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ವಾಹನ ಬಳಕೆಗೆ ಅನುವು ಮಾಡಿಕೊಡಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ, ಡಿ.18: ರಾಷ್ಟೀಯ ಹೆದ್ದಾರಿಯ ಇಂದ್ರಾಳಿ ಬಳಿಯ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು...

ಶ್ರೀ ನಂದಿಕೇಶ್ವರ ಗೆಳೆಯರ ಬಳಗ: 13ನೇ ವರ್ಷದ ಯಕ್ಷಸಂಭ್ರಮ

ಕೋಟ, ಡಿ.18: ಸಂಘಟನೆಗಳು ಸದೃಢವಾಗಿ ಸಂಘಟಿತ ಶಕ್ತಿಯಾಗಿ ಕಾರ್ಯನಿರ್ವಹಿಸಿದರೆ ಗ್ರಾಮಗಳು ಸುಭಿಕ್ಷೆಯಾಗುವುದರಲ್ಲಿ...
error: Content is protected !!