ನವದೆಹಲಿ, ಡಿ.15: ಚಿಕ್ಕಮಗಳೂರು-ತಿರುಪತಿ ನಡುವೆ ಹೊಸ ರೈಲು ಮಂಜುರಾತಿಗೆ ರೈಲ್ವೆ ಸಚಿವರಾದ ವಿ.ಸೋಮಣ್ಣರವರ ಜೊತೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಚರ್ಚಿಸಿದರು. ಚಿಕ್ಕಮಗಳೂರಿನಿಂದ ಹೊರಟು ಬೆಂಗಳೂರು ಮಾರ್ಗವಾಗಿ ಹಿಂದುಗಳ ಪವಿತ್ರ ಯಾತ್ರಾಸ್ಥಳವಾದ ತಿರುಪತಿಗೆ ನೂತನ ರೈಲನ್ನು ಮಂಜೂರು ಮಾಡಬೇಕೆಂದು ರೈಲ್ವೆ ರಾಜ್ಯ ಸಚಿವ ಸೋಮಣ್ಣ ಅವರೊಂದಿಗೆ ಚರ್ಚೆ ನಡೆಸಿ ಮನವಿ ನೀಡಲಾಯಿತು. ಈಗಿರುವ ಸ್ಥಿತಿಯಲ್ಲಿ ಚಿಕ್ಕಮಗಳೂರು ಜನತೆಗೆ ಮತ್ತಷ್ಟು ರೈಲ್ವೆ ಸೇವೆಯ ಅಗತ್ಯವಿದ್ದು ನೂತನ ರೈಲ್ವೆ ಯೋಜನೆ ಪ್ರಯಾಣಿಕರಿಗೆ ಸಹಕಾರಿಯಾಗಲಿದೆ. ಎಂದು ವಿವರಿಸಲಾಯಿತು. ಸ್ಥಳದಲ್ಲಿ ಅಧಿಕಾರಿಗಳಿಗೆ ಸಮಗ್ರ ಮಾಹಿತಿ ತಯಾರಿಕೆಗೆ ನೂತನ ರೈಲ್ವೆ ಮಂಜೂರಾತಿಗೆ ಕಡತ ಮಂಡಿಸುವಂತೆ ಸಚಿವ ಸೋಮಣ್ಣ ನಿರ್ದೇಶನ ನೀಡಿದ್ದಾರೆ. ಮತ್ತು ಕ್ರೈಸ್ತ ಸಮುದಾಯದ ಮನವಿ ಮೇರೆಗೆ ವೆಲಂಕಣಿಗೆ ಕ್ರಿಸ್ಮಸ್ ವಿಶೇಷ ರೈಲ್ವೆಯ ಅವಕಾಶ ಕಲ್ಪಿಸುವುದಾಗಿ ಸೋಮಣ್ಣ ಅವರು ಕೋಟ ಅವರಿಗೆ ತಿಳಿಸಿದರು.
ಚಿಕ್ಕಮಗಳೂರು-ತಿರುಪತಿ ನಡುವೆ ಹೊಸ ರೈಲು ಮಂಜುರಾತಿಗೆ ಸಂಸದ ಕೋಟ ಮನವಿ

ಚಿಕ್ಕಮಗಳೂರು-ತಿರುಪತಿ ನಡುವೆ ಹೊಸ ರೈಲು ಮಂಜುರಾತಿಗೆ ಸಂಸದ ಕೋಟ ಮನವಿ
Date: