ಉಡುಪಿ, ಡಿ.7: ಕುಂದಾಪುರ ತಾಲೂಕು ಕೋಟೇಶ್ವರ, ಒಳಪೇಟೆಯ ರಸ್ತೆಯಲ್ಲಿ ಲೋಕಲ್ ಬಸ್ಸುಗಳು ಸಂಚರಿಸದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿರುವುದರಿಂದ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದಾಗಿ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿರುವ ಹಿನ್ನೆಲೆ, ಸದರಿ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಲೋಕಲ್ ಬಸ್ಸುಗಳು ಕಡ್ಡಾಯವಾಗಿ ಕೋಟೇಶ್ವರ ಒಳಪೇಟೆಯ ರಸ್ತೆಯಲ್ಲಿ ಸಂಚರಿಸುವಂತೆ ಎಲ್ಲಾ ಬಸ್ಸು ಮಾಲೀಕರುಗಳು ಕ್ರಮ ವಹಿಸಬೇಕು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಲೋಕಲ್ ಬಸ್ಸುಗಳು ನಿಯಮಾನುಸಾರ ಸಂಚರಿಸಲು ಸೂಚನೆ
ಲೋಕಲ್ ಬಸ್ಸುಗಳು ನಿಯಮಾನುಸಾರ ಸಂಚರಿಸಲು ಸೂಚನೆ
Date: