ಉಡುಪಿ, ಡಿ.5: ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ ಇದರ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ವಿವಿಧ ಸಾಧಕರನ್ನು ಗೌರವಿಸಲಾಯಿತು. ಬಹುಮುಖ ಪ್ರತಿಭೆಯ ಸಾಧಕಿ ಕುಸುಮಾ ಕೃಷ್ಣಮೂರ್ತಿ ಕಾಮತ್ ಇವರ ಸಾಧನೆಯನ್ನು ಗಮನಿಸಿ ಕರ್ನಾಟಕ ಮುಕುಟಮಣಿ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು, ಇವರು ಕಲೆ ಸಾಹಿತ್ಯ ನಾಟಕ ಜನಪದ ಮತ್ತು ಮಿಮಿಕ್ರಿ ರಂಗದಲ್ಲಿ ವಿಶೇಷವಾದ ಸಾಧನೆಯನ್ನು ಮಾಡಿದ್ದಾರೆ. ಪ್ರಸ್ತುತ ಕನ್ನಡ ಜನಪದ ಪರಿಷತ್ ಉಡುಪಿ ತಾಲೂಕಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ಸಂಘ-ಸಂಸ್ಥೆಯಲ್ಲಿ ಸಕ್ರಿಯರಾಗಿದ್ದಾರೆ. ಸಂಸ್ಥೆಯ ಅಧ್ಯಕ್ಷರಾದ ಗಣೇಶ ಶೆಣೈ, ಕೆ.ಹೆಚ್ ಮಂಜುನಾಥ್, ಉಮೇಶ್ ಮುಂತಾದವರಿದ್ದರು.
ಕುಸುಮಾ ಕೃಷ್ಣಮೂರ್ತಿ ಕಾಮತ್ ಅವರಿಗೆ ಮುಕುಟಮಣಿ ರಾಜ್ಯ ಪ್ರಶಸ್ತಿ

ಕುಸುಮಾ ಕೃಷ್ಣಮೂರ್ತಿ ಕಾಮತ್ ಅವರಿಗೆ ಮುಕುಟಮಣಿ ರಾಜ್ಯ ಪ್ರಶಸ್ತಿ
Date: