ಉಡುಪಿ, ಡಿ.5: ಉಡುಪಿ ನಗರಸಭೆಯ ಸಾಮಾನ್ಯ ಸಭೆಯ ನಿರ್ಣಯದಂತೆ, ಡಿಸೆಂಬರ್ 1 ರಿಂದ ಅನ್ವಯವಾಗುವಂತೆ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಬಳಕೆ ಶುಲ್ಕವನ್ನು ಈ ಕೆಳಕಂಡಂತೆ ಪರಿಷ್ಕರಿಸಲಾಗಿದೆ. ಗೃಹ ಬಳಕೆಗೆ 8 ಸಾವಿರ ಲೀ. ವರೆಗೆ 9 ರೂ., 8 ಸಾವಿರ ಲೀ. ಮೇಲ್ಪಟ್ಟು ಬಳಕೆಯಾದಲ್ಲಿ 12 ರೂ., 15 ಸಾವಿರ ಲೀ. ಮೇಲ್ಪಟ್ಟು ಬಳಕೆಯಾದಲ್ಲಿ 15 ರೂ. ಹಾಗೂ 25,000 ಲೀ. ಗಿಂತ ಅಧಿಕ ಬಳಕೆಯಾದಲ್ಲಿ 25 ರೂ. ವಿಧಿಸಲಾಗುವುದು. ಗೃಹೇತರ ಬಳಕೆಗೆ 8 ಸಾವಿರ ಲೀ. ವರೆಗೆ 25 ರೂ., 8 ಸಾವಿರ ಲೀ. ಮೇಲ್ಪಟ್ಟು ಬಳಕೆಯಾದಲ್ಲಿ 30 ರೂ., 15 ಸಾವಿರ ಲೀ. ಮೇಲ್ಪಟ್ಟು ಬಳಕೆ ಮಾಡಿದ್ದಲ್ಲಿ 40 ರೂ. ಹಾಗೂ 25,000 ಲೀ. ಗಿಂತ ಅಧಿಕ ಬಳಕೆಯಾದಲ್ಲಿ 50 ರೂ. ವಿಧಿಸಲಾಗುವುದು. ವಾಣಿಜ್ಯ/ ಕೈಗಾರಿಕೆಗೆ 8 ಸಾವಿರ ಲೀ. ವರೆಗೆ 45 ರೂ., 8 ಸಾವಿರ ಲೀ. ಮೇಲ್ಪಟ್ಟು ಬಳಕೆ ಮಾಡಿದ್ದಲ್ಲಿ 55 ರೂ. ಹಾಗೂ 15,000 ಲೀ. ಮೇಲ್ಪಟ್ಟು ಬಳಕೆ ಮಾಡಿದ್ದಲ್ಲಿ 65 ರೂ. ಹಾಗೂ 25,000 ಲೀ. ಗಿಂತ ಅಧಿಕ ಬಳಕೆಯಾದಲ್ಲಿ 70 ರೂ. ವಿಧಿಸಲಾಗುವುದು. ಪ್ರತೀ ಸಂಪರ್ಕಕ್ಕೆ ಗೃಹ ಬಳಕೆಗೆ 72 ರೂ., ಗೃಹೇತರ ಸಂಪರ್ಕಕ್ಕೆ 200 ರೂ. ಹಾಗೂ ವಾಣಿಜ್ಯ/ ಕೈಗಾರಿಕೆಗಳ ಸಂಪರ್ಕಕ್ಕೆ 360 ರೂ. ವಿಧಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರಿನ ಬಳಕೆಯ ಪರಿಷ್ಕೃತ ದರ ಜಾರಿ
ನೀರಿನ ಬಳಕೆಯ ಪರಿಷ್ಕೃತ ದರ ಜಾರಿ
Date: