ಕೋಟ, ಡಿ.5: ಶ್ರೀ ಶಾಂತಿಮತೀ ಪ್ರತಿಷ್ಠಾನದ ಸಾಧಕರೆಡೆ ನಮ್ಮ ನಡೆ ತಿಂಗಳ ಕಾರ್ಯಕ್ರಮ ಕೋಟದ ಗೋವಿಂದ ಉರಾಳರ ಮನೆಯಲ್ಲಿ ನಡೆಯಿತು. ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಗೋವಿಂದ ಉರಾಳರನ್ನು ಗೌರವಿಸಲಾಯಿತು. ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಕೋಟ ಸುಜಯೀಂದ್ರ ಹಂದೆ, ಸ್ಥಳೀಯರಾದ ಆನಂದರಾಮ ಉರಾಳ ಉಪಸ್ಥಿತರಿದ್ದರು. ಸಂಸ್ಥೆಯ ಚಂದ್ರಶೇಖರ ಅಡಿಗ ಬಾರ್ಕೂರು ಸ್ವಾಗತಿಸಿ, ಪಾಂಡೇಶ್ವರದ ಡಾ. ವಿಜಯ್ ಮಂಜರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಾಂತಿಮತೀ ಪ್ರತಿಷ್ಠಾನದ ಅಧ್ಯಕ್ಷ ಸಚ್ಚಿದಾನಂದ ಅಡಿಗ ವಂದಿಸಿದರು. ರಾಮಚಂದ್ರ ಉಡುಪ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು. ಗೋವಿಂದ ಉರಾಳರ ಕುಟುಂಬಸ್ಥರು, ಶಿಷ್ಯ ವೃಂದ, ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು.
ಗೋವಿಂದ ಉರಾಳರಿಗೆ ಶಾಂತಿಮತೀ ಪ್ರತಿಷ್ಠಾನ ಗೌರವ
ಗೋವಿಂದ ಉರಾಳರಿಗೆ ಶಾಂತಿಮತೀ ಪ್ರತಿಷ್ಠಾನ ಗೌರವ
Date: