Sunday, January 19, 2025
Sunday, January 19, 2025

ತೋಟಗಾರಿಕೆ ಇಲಾಖೆಯಿಂದ ಜೇನುತುಪ್ಪಕ್ಕೆ ಬ್ರ್ಯಾಂಡ್ ಹೆಸರು ಅಭಿವೃದ್ಧಿ

ತೋಟಗಾರಿಕೆ ಇಲಾಖೆಯಿಂದ ಜೇನುತುಪ್ಪಕ್ಕೆ ಬ್ರ್ಯಾಂಡ್ ಹೆಸರು ಅಭಿವೃದ್ಧಿ

Date:

ಉಡುಪಿ, ಡಿ.4: ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ ಹೆಚ್ಚಿಸಲು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಜೇನುತುಪ್ಪಕ್ಕೆ ತೋಟಗಾರಿಕೆ ಇಲಾಖೆಯು ಬ್ರ‍್ಯಾಂಡ್ ಹೆಸರು ಅಭಿವೃದ್ಧಿಪಡಿಸಿ, TRADE MARK REGISTRY ಯಿಂದ ಅಧಿಕೃತವಾಗಿ ಅನುಮೋದನೆ ಪಡೆಯಲಾಗಿದ್ದು, ಅದರಂತೆ ಕನ್ನಡದಲ್ಲಿ ಝೇಂಕಾರ ಮತ್ತು ಆಂಗ್ಲ ಭಾಷೆಯಲ್ಲಿ Jhenkara ಎಂಬ ನಾಮಾಂಕಿತದೊಂದಿಗೆ ಜೇನುತುಪ್ಪ ಉತ್ಪಾದಕರು ಮತ್ತು ಸಂಗ್ರಾಹಕರು ಷರತ್ತು ಮತ್ತು ನಿಬಂಧನೆಗಳೊಂದಿಗೆ ಸದರಿ ಬ್ರ‍್ಯಾಂಡ್ ಹೆಸರು ಮತ್ತು ಲೋಗೋವನ್ನು ಬಳಸಿಕೊಂಡು ಜೇನುತುಪ್ಪ ಮಾರಾಟ ಮಾಡಲು ಅವಕಾಶವಿದ್ದು, ತೋಟಗಾರಿಕೆ ಇಲಾಖೆಯು ಸದರಿ ಬ್ರ‍್ಯಾಂಡ್ ಮಾಲೀಕತ್ವವನ್ನು ಹೊಂದಿರುತ್ತದೆ. ತೋಟಗಾರಿಕೆ ಇಲಾಖೆಯ ಮಾಲೀಕತ್ವದ ಜೇನುತುಪ್ಪದ ಬ್ರ‍್ಯಾಂಡ್‌ನಲ್ಲಿ ಜೇನುತುಪ್ಪ ಮಾರಾಟ ಮಾಡಲು ಇಚ್ಛಿಸುವ ಜೇನುತುಪ್ಪದ ಉತ್ಪಾದಕರು ಹಾಗೂ ಸಂಗ್ರಾಹಕರು ರೂ.2500 ಗಳ ನೊಂದಣಿ ಶುಲ್ಕವನ್ನು ಖಜಾನೆ-2 ರಲ್ಲಿ ಲೆಕ್ಕ ಶೀರ್ಷಿಕೆಯಲ್ಲಿ (0401-00-800-2-01) ಪಾವತಿಸಿ, ತೋಟಗಾರಿಕೆ ಉಪನಿರ್ದೇಶಕರಿಗೆ ಪಾವತಿಸಿದ ಚಲನ್ ನೀಡಿ ಬ್ರ‍್ಯಾಂಡ್‌ನಲ್ಲಿ ಮಾರಾಟ ಮಾಡುವ
ಬಗ್ಗೆ ಅನುಮತಿ ಪಡೆಯಬಹುದಾಗಿದೆ.

ಜೇನು ಉತ್ಪಾದಕರು ಹಾಗೂ ಸಂಗ್ರಾಹಕರು AGMARK ಹಾಗೂ FSSAI ಸಂಸ್ಥೆಗಳ ವತಿಯಿಂದ ನೋಂದಣಿ ಹಾಗೂ ಅನುಮೋದನೆ ಪಡೆದು ಈ ಬ್ರ‍್ಯಾಂಡ್‌ನಲ್ಲಿ ಮಾರಾಟ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕರ ಕಛೇರಿ ಹಾಗೂ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕಛೇರಿ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!