Thursday, December 5, 2024
Thursday, December 5, 2024

ಹೋಂ ಡಾಕ್ಟರ್ ಫೌಂಡೇಶನ್: ಧನಸಹಾಯ

ಹೋಂ ಡಾಕ್ಟರ್ ಫೌಂಡೇಶನ್: ಧನಸಹಾಯ

Date:

ಉಡುಪಿ, ಡಿ.2: ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ ‘ಅಂಬಿಗ ನಾ ನಿನ್ನ ನಂಬಿದೆ’ ಎಂಬ ವಿನೂತನ ಅಭಿಯಾನ ಅಂಗವಾಗಿ ಗುರುಪುರ ವೃದ್ಧ ದಂಪತಿಗಳ ಫಿನೈಲ್ ಮಾರಾಟ ಮಾಡಿ ಅವರಿಗೆ ಧನಸಹಾಯ ನೀಡುವ ಕಾರ್ಯಕ್ರಮ ಅಜ್ಜರಕಾಡು ಎಲ್ಐಸಿ ಕಚೇರಿಯ ಹತ್ತಿರ ನಡೆಯಿತು. ಗುರುಪುರದ ವೃದ್ಧ ದಂಪತಿಗಳಾದ ಶಿವಾನಂದ ಮತ್ತು ಪಾರ್ವತಿ ಕಳೆದ 40 ವರ್ಷಗಳಿಂದ ಫಿನೈಲ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು ಅವರ ಕಷ್ಟಕ್ಕೆ ನೆರವಾಗುವ ಉದ್ದೇಶದಿಂದ ಈ ಅಭಿಯಾನ ನಡೆಯಿತು. ಹೋಂ ಡಾಕ್ಟರ್ ಫೌಂಡೇಶನ್ ಮುಖ್ಯಸ್ಥರಾದ ಡಾ. ಶಶಿಕಿರಣ್ ಶೆಟ್ಟಿ, ಡಾ. ಸುಮಾ ಶೆಟ್ಟಿ, ಸುಂದರ ಪೂಜಾರಿ, ಉದಯ ನಾಯ್ಕ್, ಸುಜಯ, ರಾಘವೇಂದ್ರ ಪ್ರಭು, ಕವಾ೯ಲು, ಜನಾದ೯ನ್ ಕೊಡವೂರು, ಸುಂದರ ಶೆಟ್ಟಿ, ಶಶಿಕಲಾ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಪ್ರಥಮ ಎಂ.ಎಸ್.ಡಬ್ಲ್ಯೂ ವಿಭಾಗದ ವಿದ್ಯಾರ್ಥಿಗಳಾದ ಗಿರೀಶ್, ಪ್ರೇಮ್ ಸಾಯಿ, ಅಕ್ಷಯ, ಗೌತಮಿ, ದಾಕ್ಷಾಯಿಣಿ, ಅಂಕಿತಾ, ಅಕ್ಷಯ ಬಿ.ಆರ್., ದನುಷ, ಪ್ರಿಯಾ ಮುಂತಾದವರಿದ್ದರು. ಒಂದು ಲಕ್ಷ ರೂ ಸಂಗ್ರಹಿಸಿ ದಂಪತಿಗಳ ಜೀವನ ನಿರ್ವಹಣಿಗೆ ನೀಡಲಾಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತೋಟಗಾರಿಕೆ ಇಲಾಖೆಯಿಂದ ಜೇನುತುಪ್ಪಕ್ಕೆ ಬ್ರ್ಯಾಂಡ್ ಹೆಸರು ಅಭಿವೃದ್ಧಿ

ಉಡುಪಿ, ಡಿ.4: ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಗ್ರಾಹಕರಿಗೆ ಗುಣಮಟ್ಟದ...

ವಿಶ್ವ ಏಡ್ಸ್ ದಿನಾಚರಣೆ ಮಾಹಿತಿ ಕಾರ್ಯಕ್ರಮ

ಉಡುಪಿ, ಡಿ.4: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ...

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ಗೋಶಾಲೆಗೆ ಬೈಹುಲ್ಲು ಕೊಡುಗೆ

ಬೆಳ್ಮಣ್, ಡಿ.3: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...

ಬ್ರಹ್ಮಾವರ: ಗಾಳಿ ಮಳೆಗೆ ಮನೆಗಳಿಗೆ ಹಾನಿ

ಉಡುಪಿ, ಡಿ.3: ಚಂಡಮಾರುತದ ಪ್ರಭಾವದಿಂದ ಸೋಮವಾರ ಸುರಿದ ಭಾರೀ ಮಳೆಗೆ ಬ್ರಹ್ಮಾವರ...
error: Content is protected !!