ಪಿತ್ರೋಡಿ, ಡಿ.2: ಹದಿನಾಲ್ಕು ಪಟ್ಣ ಮೋಗವೀರ ಮಹಾಜನ ಸಂಘ (ರಿ.) ಪಿತ್ರೋಡಿ ಉದ್ಯಾವರ ಇದರ ಆಶ್ರಯದಲ್ಲಿ ದಿ. ಯು. ಸದಿಯ ಸಾಹುಕಾರರ ಸ್ಮರಣಾರ್ಥ 14 ಗ್ರಾಮ ಸಭೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗುರಿಕಾರರಿಗೆ ಗೌರವಧನ ವಿತರಣೆ ಮತ್ತು ಮಹಾಸಭೆ ನಡೆಯಿತು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಭಾಗವಹಿಸಿ ಶುಭ ಹಾರೈಸಿದರು.
14 ಪಟ್ಣ ಮೋಗವೀರ ಮಹಾಜನ ಸಂಘದ ಅಧ್ಯಕ್ಷರಾದ ಕೇಶವ ಎಂ. ಕೋಟ್ಯಾನ್, ಸಾಹುಕಾರ್ ಕ್ಯಾನಿಂಗ್ ಕಂ. ಮಾಲಕರಾದ ಯು. ಗಣೇಶ್, ಉಡುಪಿ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಅಶೋಕ್, ಗುರಿಕಾರರಾದ ಸದಾರಾಮ್ ಮೆಂಡನ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.