Monday, February 24, 2025
Monday, February 24, 2025

ತುಳು ಕಾದಂಬರಿಗಳ ಆಹ್ವಾನ

ತುಳು ಕಾದಂಬರಿಗಳ ಆಹ್ವಾನ

Date:

ಉಡುಪಿ, ಡಿ.2: ಉಡುಪಿ ತುಳುಕೂಟದ ಆಶ್ರಯದಲ್ಲಿ ನಡೆಯುವ ಎಸ್.ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಆಯ್ಕೆಗಾಗಿ ತುಳು ಕಾದಂಬರಿಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ತುಳು ಭಾಷೆಯಲ್ಲಿ ಉತ್ತಮ ಕಾದಂಬರಿಗಳು ಪ್ರಕಟಗೊಳ್ಳಬೇಕು ಎಂಬ ಆಶ್ರಯದಿಂದ ತುಳು ಚಳವಳಿಯ ಪ್ರವರ್ತಕ ದಿ. ಎಸ್.ಯು. ಪಣಿಯಾಡಿ ಅವರ ನೆನಪಿನಲ್ಲಿ ನೀಡುವ ಈ ಪ್ರಶಸ್ತಿಗೆ ಈ ಕೆಳಗಿನ ನಿಬಂಧನೆಗೊಳಪಟ್ಟ ಹಸ್ತಪ್ರತಿಗಳನ್ನು ಸ್ವೀಕರಿಸಲಾಗುವುದು. ಹಸ್ತಪ್ರತಿಗಳು ತುಳು ಕಾದಂಬರಿಗಳಾಗಿರಬೇಕು. ಅದು ಈವರೆಗೆ ಯಾವುದೇ ಬಹುಮಾನಕ್ಕೆ ಆಯ್ಕೆಯಾಗಿರಬಾರದು. ಇದುವರೆಗೆ ಎಲ್ಲೂ ಮುದ್ರಿತವಾಗಿರಬಾರದು. ಆಯ್ಕೆಯಾದರೆ ಮುದ್ರಿಸುವಾಗ ಕ್ರೌನ್ 1/8 ಆಕಾರ ದಲ್ಲಿ 120 ಪುಟಗಳನ್ನು ಮೀರದಷ್ಟು ದೀರ್ಘವಾಗಿರಬೇಕು. ಹಸ್ತಪ್ರತಿಗಳು ಸುಂದರವಾದ ಕೈಬರಹ, ಬೆರಳಚ್ಚು ಅಥವಾ ಕಂಪ್ಯೂಟರ್ ಮುದ್ರಿತ (ಡಿಟಿಪಿ) ರೂಪದಲ್ಲಿರಬಹುದು. ಕಾದಂಬರಿಯು ತುಳುನಾಡಿನ ಭೌಗೋಳಿಕ ಚಿತ್ರಣ, ತುಳು ಸಂಸ್ಕೃತಿಯನ್ನು ಬಿಂಬಿಸುವ ಅಂಶಗಳಿಂದ ಕೂಡಿದ್ದು, ಪೌರಾಣಿಕ, ಐತಿಹಾಸಿಕ, ಜಾನಪದ, ಸಾಮಾಜಿಕ ವಸ್ತುವನ್ನು ಆಧರಿಸಿರಬಹುದು.

ಪ್ರಶಸ್ತಿ 8 ಸಾವಿರ ರೂ. ಮೊತ್ತ ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿದೆ. ಹಸ್ತಪ್ರತಿಯನ್ನು ಡಿಸೆಂಬರ್ 15 ರೊಳಗೆ ಪಣಿಯಾಡಿ ತುಳು ಕಾದಂಬರಿ ಸ್ಪರ್ಧೆಯ ಸಂಚಾಲಕಿ – ಶಿಲ್ಪಾ ಜೋಶಿ , ಶೆಲ್ಟರ್. ಹೆಚ್.ಐ.ಜಿ 19. ಪ್ರಸನ್ನ ಗಣಪತಿ ದೇವಸ್ಥಾನದ ಎದುರು, ಮಣ್ಣುಪಳ್ಳ. ಮಣಿಪಾಲ, ಉಡುಪಿ. 576 104 (ಮೊಬೈಲ್ – 7892194150) ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು (9844532629) ಇವರನ್ನು ಸಂಪರ್ಕಿಸಬಹುದು ಎಂದು ಉಡುಪಿ ತುಳುಕೂಟದ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿಯವರು ತಿಳಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗೆಳೆಯರ ಬಳಗ ಕಾರ್ಕಡ- ವಾರ್ಷಿಕೋತ್ಸವ; ಸಾಧಕರಿಗೆ ಸನ್ಮಾನ

ಸಾಲಿಗ್ರಾಮ, ಫೆ.23: ಸಂಘಟನೆಗಳ ನಿರಂತರ ಸಾಮಾಜಿಕ ಕಾರ್ಯ ಅಸಾಮಾನ್ಯವಾದದ್ದು. ಈ ನಿಟ್ಟಿನಲ್ಲಿ...

ಭಜನಾ ಮಂಗಲೋತ್ಸವ

ಸಾಸ್ತಾನ, ಫೆ.23: ಶ್ರೀ ರಾಘವೇಂದ್ರ ಭಜನಾ ಮಂದಿರ ಪಾಂಡೇಶ್ವರ ಸಾಸ್ತಾನ ಇಲ್ಲಿ...

ಹೀಗೊಂದು ಜಾಹೀರಾತು

ನೀವು ತಿಂಗಳಿಗೆ ಲಕ್ಷಗಟ್ಟಲೆ ಸಂಪಾದಿಸಬೇಕಾದರೆ ಇದನ್ನು ಮಾಡಿರಿ, ಮಿಲಿನಿಯರ್ ಆಗಲು ಹೀಗೆ...
error: Content is protected !!