ಕೋಟ, ಡಿ.2: ಡಿ.5ರಂದು ಕುಂಭಾಶಿಯ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ವಾರ್ಷಿಕ ಜಾತ್ರೋತ್ಸವ ಜರಗಲಿದ್ದು ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ೨೩೨ನೇ ಸ್ವಚ್ಛತಾ ಅಭಿಯಾನ ದೇಗುಲದ ವಠಾರ ಸ್ವಚ್ಛಗೊಳಿಸುವ ಮೂಲಕ ನೆರವೇರಿತು. ದೇಗುಲದ ಮೊಕ್ತೇಸರ ಶ್ರೀರಮಣ ಉಪಾಧ್ಯಾಯ ಚಾಲನೆ ನೀಡಿದರು. ದೇಗಲದ ಮೊಕ್ತೇಸರ ವೃಂದ, ಸಿಬ್ಬಂದಿ ವರ್ಗ, ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಅಜಿತ್ ಆಚಾರ್, ಸಂಚಾಲಕ ಅಮೃತ್ ಜೋಗಿ, ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಮತ್ತಿತರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಆನೆಗುಡ್ಡೆ: ಪಂಚವರ್ಣದಿಂದ 232ನೇ ಸ್ವಚ್ಛತಾ ಅಭಿಯಾನ
ಆನೆಗುಡ್ಡೆ: ಪಂಚವರ್ಣದಿಂದ 232ನೇ ಸ್ವಚ್ಛತಾ ಅಭಿಯಾನ
Date: