Sunday, January 19, 2025
Sunday, January 19, 2025

ಕೊಂಕಣ ರೈಲ್ವೆ ಕನ್ನಡ ಅಭಿಮಾನ ಬಳಗ: ಡಾ. ಗಣನಾಥ ಎಕ್ಕಾರಿಗೆ ಸನ್ಮಾನ

ಕೊಂಕಣ ರೈಲ್ವೆ ಕನ್ನಡ ಅಭಿಮಾನ ಬಳಗ: ಡಾ. ಗಣನಾಥ ಎಕ್ಕಾರಿಗೆ ಸನ್ಮಾನ

Date:

ಉಡುಪಿ, ನ.30: ಗೋವಾದ ಕೊಂಕಣ ರೈಲ್ವೆ ಕನ್ನಡ ಅಭಿಮಾನಿ ಬಳಗದಿಂದ ಗೋವಾದ ಮಡಗಾಂವಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಶಿಕ್ಷಣ, ಜಾನಪದ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಜಾನಪದ ವಿದ್ವಾಂಸ, ಚಿಂತಕ ಭಾರತೀಯ ರೆಡ್‌ಕ್ರಾಸ್ ಉಡುಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಅವರನ್ನು ಸನ್ಮಾನಿಸಲಾಯಿತು. ಗೋವಾ ಕೊಂಕಣ ರೈಲ್ವೆ ಅಭಿಮಾನ ಬಳಗ ಕೊಂಕಣ ರೈಲ್ವೆ ಕಮರ್ಷಿಯಲ್ ಸೂಪರ್‌ವೈಸರ್ ನಾಗಪತಿ ಹೆಗ್ಡೆ ಮತ್ತು ಬಳಗದ ಅಧ್ಯಕ್ಷ ಸುಭಾಶ್ವಂದ್ರ ಬಿ. ಶೆಟ್ಟಿ ಸನ್ಮಾನಿಸಿದರು. ಬಳಗದ ಗೌರವ ಸಲಹೆಗಾರ ದಿನೇಶ್ ಭಟ್ ಗೋಪಿ, ಕಾರ್ಯದರ್ಶಿ ರವಿಕುಮಾರ್, ಖಚಾಂಚಿ ಶ್ರೀಧರ್ ಬಳ್ಳಾರಿ ಉಪಸ್ಥಿತರಿದ್ದರು. ಬಳಿಕ ಡಾ. ಎಕ್ಕಾರರು ಕನ್ನಡ ನಾಡು ನುಡಿಯ ಅನನ್ಯತೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!