Sunday, January 19, 2025
Sunday, January 19, 2025

ಹೆದ್ದಾರಿ ನಿರ್ವಹಣೆ ನಿರ್ಲಕ್ಷ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಬೃಹತ್ ಪ್ರತಿಭಟನೆ

ಹೆದ್ದಾರಿ ನಿರ್ವಹಣೆ ನಿರ್ಲಕ್ಷ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಬೃಹತ್ ಪ್ರತಿಭಟನೆ

Date:

ಕೋಟ, ನ.29: ಕುಂದಾಪುರದಿಂದ ಹೆಜಮಾಡಿವರೆಗಿನ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ ಅಸಮರ್ಪಕವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಗುರುವಾರ ಚಿತ್ರಪಾಡಿ ಬಳಿ ಬೃಹತ್ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ್ ನಾಯರಿ, ಕಳೆದ ಸಾಕಷ್ಟು ವರ್ಷಗಳಿಂದ ಸ್ಥಳೀಯರಿಗೆ ಟೋಲ್ ವಿನಾಯಿತಿ ಸೇರಿದಂತೆ ಹೆದ್ದಾರಿ ಅಸರ್ಪಕ ಕಾಮಗಾರಿಯ ವಿರುದ್ಧ ಪ್ರತಿಭಟಿಸುತ್ತಾ ಬಂದಿದ್ದೇವೆ ಆದರೆ ಈ ಹಿಂದೆ ಇದ್ದ ನವಯುಗ ಕಂಪನಿ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಕೂಡಾ ಮಾಡಿದೆ. ಆದರೆ ಇತ್ತೀಚಿಗೆ ಹೆದ್ದಾರಿ ನಿರ್ವಹಣೆ ಗುತ್ತಿಗೆ ಪಡೆದ ಕೆ.ಕೆ ಆರ್ ಕಂಪನಿ ರಸ್ತೆ ನಿರ್ವಣೆಯಲ್ಲಿ ಎಡೆವಿದೆ ಅಲ್ಲದೆ ಉಡಾಫೆ ಉತ್ತರ ನೀಡುತ್ತಿದ್ದು ರಸ್ತೆ ಹೊಂಡಗುಂಡಿಗಳಿಗೆ ಮುಕ್ತಿಗಾಣಿಸದೆ ಸಾಕಷ್ಟು ಸಾವುನೋವು ಸಂಭವಿಸುತ್ತಿದೆ. ಸರ್ವಿಸ್ ರಸ್ತಗಳಿಲ್ಲ, ಸಮರ್ಪಕ ದಾರಿದೀಪಗಳು, ಚರಂಡಿಗಳಿಲ್ಲ ಇಷ್ಟಲ್ಲದೆ ಸಾಕಷ್ಟು ಸಮಸ್ಯೆಗಳಿದ್ದರೂ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ, ಈ ಹಿನ್ನಲ್ಲೆಯಲ್ಲಿ ಇದೇ ಕೊನೆಯಂಬಂತೆ ಪ್ರತಿಭಟಿಸುತ್ತಿದ್ದೇವೆ. ಮುಂದೆ ಇದೇ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಟೋಲ್‌ಗೆ ಸಂಚಾಕಾರ ತಂದ್ದೋಡ್ಡಲಿದ್ದೇವೆ ಎಂದರು. ರಸ್ತೆ ಅವ್ಯವಸ್ಥೆಯ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಈ ಭಾಗದಲ್ಲಿ ಟೋಲ್ ನಿಲ್ಲಿಸಲು ಮುಂದಾಗುತ್ತೇವೆ ಎಂದು ಹೋರಾಟ ಸಮಿತಿ ದಿನೇಶ್ ಗಾಣಿಗ ಎಚ್ಚರಿಸಿದರು. ಸಮಿತಿಯ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಕೂಡ ಎಚ್ಚರಿಕೆ ನೀಡಿದರು. ಅಣಕು ಶವ ಪ್ರದರ್ಶನ ನಡೆಸಿ ಆಕ್ರೋಷ ವ್ಯಕ್ತಪಡಿಸಲಾಯಿತು.

ಮರಣ ಡೋಲು ಬಾರಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು. ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಶ್ಯಾಮಸುಂದರ್ ನಾಯರಿ ತಮ್ಮ ಬೇಡಿಕೆಯ ಪತ್ರವನ್ನು ಬ್ರಹ್ಮಾವರದ ತಹಶೀಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆಯವರಿಗೆ ಹಸ್ತಾಂತರಿಸಿದರು. ಈ ವೇಳೆ ತಹಶೀಲ್ದಾರ್ ಮಾಹಿತಿ ನೀಡಿ ಒಂದು ತಿಂಗಳೊಳಗೆ ಹೆಚ್ಚಿನ ಸಮಸ್ಯೆಗಳಿಗೆ ಮುಕ್ತಿಗಾಣಿಸಲು ಕಂಪನಿಯ ಅಧಿಕಾರಿಗಳಿಗೆ ಸೂಚಿಸಿದಲ್ಲದೆ, ಪತ್ರದ ಮೂಲಕ ಲಿಖಿತವಾಗಿ ನೀಡುತ್ತೇನೆ ಎಂದರು. ಕೆ.ಕೆ ಆರ್ ಕಂಪನಿಯ ಉಸ್ತುವಾರಿ ತಿಮ್ಮಯ್ಯ, ಬ್ರಹ್ಮಾವರ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್, ಠಾಣಾಧಿಕಾರಿ ತೇಜಸ್ವಿ, ಕೋಟ ಠಾಣಾಧಿಕಾರಿ ರಾಘವೇಂದ್ರ ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಮುಖರಾದ ಐರೋಡಿ ವಿಠ್ಠಲ ಪೂಜಾರಿ, ಪ್ರಶಾಂತ್ ಶೆಟ್ಟಿ, ಜಯಕರ್ನಾಟಕದ ಸತೀಶ್ ಪೂಜಾರಿ, ರಾಜೇಶ್ ಕಾವೇರಿ, ಭೋಜ ಪೂಜಾರಿ, ಋಶಿರಾಜ್ ಸಾಸ್ತಾನ, ಚಂದ್ರಶೇಖರ್ ಮೆಂಡನ್, ನಾಗರಾಜ್ ಗಾಣಿಗ, ರಾಜೇಂದ್ರ ಸುವರ್ಣ, ಮಹಾಬಲ ಪೂಜಾರಿ, ರಾಜೇಶ್ ಸಾಸ್ತಾನ, ಅಚ್ಯುತ ಪೂಜಾರಿ, ಸುಲತಾ ಹೆಗ್ಡೆ, ಗಣೇಶ್ ಪೂಜಾರಿ, ಲೀಲಾವತಿ ಗಂಗಾಧರ್, ಫಾದರ್ ರೆವರೆಂಡ್ ಡಿಸಿಲ್ವ, ವಿವಿಧ ಸಂಘಸಂಸ್ಥೆಗಳ ಪ್ರಮುಖರು ಮತ್ತಿತರರು ಇದ್ದರು. ಮಾಜಿ ಅಧ್ಯಕ್ಷರಾದ ಪ್ರತಾಪ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅಲ್ವಿನ್ ಅಂದ್ರಾದೆ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!