Friday, November 29, 2024
Friday, November 29, 2024

ರೈತ ಸಮುದಾಯಕ್ಕೆ ಪ್ರೋತ್ಸಾಹ ಅತ್ಯಗತ್ಯ: ಮಂಜುನಾಥ್ ಗಿಳಿಯಾರ್

ರೈತ ಸಮುದಾಯಕ್ಕೆ ಪ್ರೋತ್ಸಾಹ ಅತ್ಯಗತ್ಯ: ಮಂಜುನಾಥ್ ಗಿಳಿಯಾರ್

Date:

ಕೋಟ, ನ.28: ರೈತ ಕಾಯಕವಿದ್ದರೆ ಸಮಾಜದಲ್ಲಿ ಬದುಕು ಜೀವಂತ. ಅಂತಹ ರೈತರ ಬಗ್ಗೆ ನಿರ್ಲಕ್ಷ್ಯ ಧೋರಣೆ ಸಲ್ಲ ಎಂದು ರೈತಧ್ವನಿ ಸಂಘದ ಹೋರಾಟಗಾರ ನ್ಯಾಯವಾದಿ ಟಿ.ಮಂಜುನಾಥ್ ಗಿಳಿಯಾರು ಅಭಿಪ್ರಾಯಪಟ್ಟರು. ಬುಧವಾರ ಕೋಟದ ಮಣೂರು ಪಡುಕರೆಯ ರವೀಂದ್ರ ಶೆಟ್ಟಿ ಮನೆಯಂಗಳದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇವರ ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೈತಧ್ವನಿ ಸಂಘ ಕೋಟ, ವಿಪ್ರ ಮಹಿಳಾ ಸಾಲಿಗ್ರಾಮ ವಲಯ, ಜೆಸಿಐ ಸೀನಿಯರ್ ಲಿಜನ್ ಕೋಟ ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 41ನೇ ಸರಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯ ಅಭ್ಯಾಗತರಾಗಿ ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಮಾತನಾಡಿ, ಪರಿಸರದ ಹಾಗೂ ಕೃಷಿ ಭೂಮಿಯ ಮೇಲೆ ಪ್ಲಾಸ್ಟಿಕ್ ಅತಿಯಾಗಿ ವಿಜೃಂಭಿಸುತ್ತಿದ್ದು, ಇದು ಪ್ರತಿಯೊಂದು ಜೀವಿಗೂ ಮಾರಕವಾಗಿದೆ. ಹೊಳೆ ತೊರೆಗಳಲ್ಲೂ ಪ್ಲಾಸ್ಟಿಕ್ ಮಯವಾಗಿದೆ, ಇದರಿಂದ ಮನುಷ್ಯ ಜೀವಕ್ಕೆ ಸಂಚಕಾರಬಂದೊದಗುತ್ತಿದೆ. ಈಗಲೇ ಜಾಗೃತರಾಗುವುದು ಒಳಿತು ಎಂದರು. ಸಾಧಕ ಕೃಷಿಕ ರವೀಂದ್ರ ಶೆಟ್ಟಿ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು. ವಿಶೇಷವಾಗಿ ಗೋಪೂಜೆ ನೆರವೇರಿಸಿ, ಗಿಡ ನೆಟ್ಟು ಪರಿಸರ ಜಾಗೃತಿ ಮೂಡಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಎಂ.ಭಾಸ್ಕರ್ ಶೆಟ್ಟಿ ಸನ್ಮಾನಿತರ ಬಗ್ಗೆ ಪರಿಚಯಿಸಿದರು. ಕೋಟದ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸುಪ್ರಭಾ ಅವರು, ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಮುಖ್ಯ ಅಭ್ಯಾಗತರಾಗಿ ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ತಿಮ್ಮ ಪೂಜಾರಿ, ಗೆಳೆಯರ ಬಳಗ ಕಾರ್ಕಡ ಸದಸ್ಯ ಶೇಖರ್ ಕಾರ್ಕಡ, ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚವರ್ಣ ಸದಸ್ಯ ಸಂತೋಷ್ ಕುಮಾರ್ ಕೋಟ ನಿರೂಪಿಸಿ, ಸದಸ್ಯ ರವೀಂದ್ರ ಕೋಟ ವಂದಿಸಿ ಸಂಯೋಜಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನ.29: ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಆಹಾರ ಮೇಳ

ಉಡುಪಿ, ನ.29: ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ವಾಣಿಜ್ಯ ಸಂಘದ ವತಿಯಿಂದ...

ಅರಾಟೆ ಹಳೆ ಸೇತುವೆಯಲ್ಲಿ ವಾಹನ ಸಂಚಾರ ನಿಷೇಧ; ಹೊಸ ಸೇತುವೆಯಲ್ಲಿ ಸಂಚರಿಸಲು ಅವಕಾಶ

ಉಡುಪಿ, ನ.28: ಜಿಲ್ಲೆಯ ಕುಂದಾಪುರ ತಾಲೂಕಿನ ಸೌಪರ್ಣಿಕಾ ನದಿಗೆ ಅಡ್ಡಲಾಗಿ ಕುಂದಾಪುರ-ಬೈಂದೂರು...

‘ಬಾಲ್ಯ ವಿವಾಹ ಮುಕ್ತ ಭಾರತ’ ವಿಶೇಷ ಉಪನ್ಯಾಸ ಕಾರ್ಯಕ್ರಮ

ಬಾರಕೂರು, ನ.28: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರ್ಕಾರಿ ಪ್ರಥಮ...

ಬಾರಕೂರು ಕಾಲೇಜು: ಸಂವಿಧಾನ ದಿನಾಚರಣೆ

ಬಾರಕೂರು, ನ.28: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ...
error: Content is protected !!