Thursday, November 28, 2024
Thursday, November 28, 2024

ಫ್ರೆಂಡ್ಸ್ ಗುಂಡ್ಮಿ: ಕನ್ನಡ ರಾಜ್ಯೋತ್ಸವ ಸಂಭ್ರಮ

ಫ್ರೆಂಡ್ಸ್ ಗುಂಡ್ಮಿ: ಕನ್ನಡ ರಾಜ್ಯೋತ್ಸವ ಸಂಭ್ರಮ

Date:

ಕೋಟ, ನ.27: ಕನ್ನಡಾಭಿಮಾನ ಕಾರ್ಯಕ್ರಮಗಳಲ್ಲಿ ಮೊಳಗುವುದರ ಜತೆಗೆ ಮನೆ ಮನಗಳಲ್ಲಿ ಮೊಳಗಲಿ ಎಂದು ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್ ಹೇಳಿದರು. ಗುಂಡ್ಮಿ ರಥಬೀದಿಯಲ್ಲಿ ಫ್ರೆಂಡ್ಸ್ ಗುಂಡ್ಮಿ ಆಶ್ರಯದಲ್ಲಿ ಆರನೇ ವರ್ಷದ ಕನ್ನಡ ರಾಜ್ಯೋತ್ಸವ, ಫ್ರೆಂಡ್ಸ್ ಗುಂಡ್ಮಿ ರಾಜ್ಯೋತ್ಸವ ಪುರಸ್ಕಾರ ಸಮಾರಂಭಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾಷಾಭಿಮಾನದ ಕಂಪು ಪ್ರತಿಯೊಬ್ಬರಲ್ಲೂ ಪಸರಿಸಬೇಕು, ತನ್ಮೂಲಕ ಕನ್ನಡದ ಉಳಿವು ನಿತ್ಯನಿರಂತರವಾಗಬೇಕು. ಸಂಘಟನೆಗಳು ಸಮಾಜ ಕಟ್ಟುವ ಕಾಯಕದ ಜತೆಗೆ ಭಾಷೆಯ ಉಳಿವಿನ ಬಗ್ಗೆ ಹೆಚ್ಚಿನ ಆದ್ಯತೆ ನೀಡುವಂತಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫ್ರೆಂಡ್ಸ್ ಗುಂಡ್ಮಿ ಅಧ್ಯಕ್ಷ ಸದಾಶಿವ ಶೆಟ್ಟಿಗಾರ ವಹಿಸಿದ್ದರು. ಸಮಾಜಸೇವಾ ವಿಭಾಗದಲ್ಲಿ ಉಡುಪಿ ಪೋಲಿಸ್ ಇಲಾಖೆಯಲ್ಲಿ ಎ.ಎಸ್‌ಐ ಆಗಿ ಕಾರ್ಯ ನಿರ್ವಹಿಸುತ್ತಿರುವ ಜಯಕರ ಐರೋಡಿ ಅವರಿಗೆ ಫ್ರೆಂಡ್ಸ್ ಗುಂಡ್ಮಿ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು. ಮೆಸ್ಕಾಂ ಲೈನ್‌ಮೆನ್ ರಾಜು ಮಾದರ್, ರಾಷ್ಟ್ರಮಟ್ಡದ ಕ್ರೀಡಾಪಟು ಚಿನ್ಮಯ್ ಇವರುಗಳನ್ನು ಅಭಿನಂದಿಸಲಾಯಿತು. ಹತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು. ಅಭ್ಯಾಗತರಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯ ರವೀಂದ್ರ ಕಾಮತ್, ಫ್ರೆಂಡ್ಸ್ ಗುಂಡ್ಮಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಶ್ರೀಧರ್, ಉದ್ಯಮಿ ಡೆರಿಕ್ ಡಿಸೋಜ ಉಪಸ್ಥಿತರಿದ್ದರು. ಮಹಿಳಾ ಘಟಕದ ಸದಸ್ಯರಾದ ದೀಪಾ ಪೂಜಾರಿ ಸ್ವಾಗತಿಸಿ, ಮಹಿಳಾ ಘಟಕದ ಸದಸ್ಯರಾದ ವಿದ್ಯಾ ವಂದಿಸಿದರು. ಪ್ರವೀಣ್ ಶೆಟ್ಟಿಗಾರ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಅಂಗನಾಡಿ ಪುಟಣಿಗಳಿಂದ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈಭವ, ತೆಕ್ಕಟ್ಟೆ ಕನ್ನುಕರೆ ಕಲಾವಿದರಿಂದ ನಾಟಕ ಪ್ರದರ್ಶನಗೊಂಡಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಯುವನಿಧಿ ಯೋಜನೆ: ಸ್ವಯಂ ಘೋಷಣೆ ಕಡ್ಡಾಯ

ಉಡುಪಿ, ನ.27: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಗೆ...

ತುಳು ಕಾದಂಬರಿ ಗತಿ ಬದಲಾಯಿಸಿದ ‘ನಾಣಜ್ಜೆರ್’

ಮೂಡುಬಿದಿರೆ, ನ.27: ತುಳು ಕಾದಂಬರಿ ಪ್ರಕಾರದ ದಿಕ್ಕನ್ನೇ ಬದಲಾಯಿಸಿದ ಕೃತಿ ‘ನಾಣಜ್ಜೆರ್...

ದೇಶದ ಸಂಸ್ಕೃತಿಯಲ್ಲಿ ಸಂವಿಧಾನದ ಬೇರು

ವಿದ್ಯಾಗಿರಿ (ಮೂಡುಬಿದಿರೆ), ನ.27: ನಮ್ಮ ಸಂವಿಧಾನದ ಮೂಲತತ್ವಗಳ ಬೇರು ದೇಶದ ಇತಿಹಾಸ,...

ಯಕ್ಷಾರಾಧನೆ ರಂಗದೋಕುಳಿ

ಕೋಟ, ನ.27: ಒಂದು ಕಾಲದಲ್ಲಿ ಯಕ್ಷಗಾನದ ಮಹತ್ವ ಅರಿತವರು ಬಹಳ ವಿರಳವಾಗಿದ್ದರು,...
error: Content is protected !!