Tuesday, November 26, 2024
Tuesday, November 26, 2024

ಕಲಾವಿದರನ್ನು ಗುರುತಿಸುವ ಕಾಯಕ ಶ್ಲಾಘನೀಯ: ಉದಯಕುಮಾರ್ ಶೆಟ್ಟಿ

ಕಲಾವಿದರನ್ನು ಗುರುತಿಸುವ ಕಾಯಕ ಶ್ಲಾಘನೀಯ: ಉದಯಕುಮಾರ್ ಶೆಟ್ಟಿ

Date:

ಕೋಟ, ನ.26: ಸಂಘಟನೆಗಳಿಂದ ಕಲಾರಾಧನೆ ಹಾಗೂ ಕಲಾವಿದರ ಗುರುತಿಸುವ ಕಾಯಕ ಅತ್ಯಂತ ಶ್ಲಾಘನೀಯ ಎಂದು ಉದ್ಯಮಿ ಕಿದಿಯೂರು ಉದಯಕುಮಾರ್ ಶೆಟ್ಟಿ ಹೇಳಿದರು. ಅಘೋರೇಶ್ವರ ದೇಗುಲದ ವಠಾರದಲ್ಲಿ ಅಘೋರೇಶ್ವರ ಕಲಾರಂಗ ಕಾರ್ತಟ್ಟು ಚಿತ್ರಪಾಡಿ ಇವರ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಘ ಸಂಸ್ಥೆಗಳು ಸಮಾಜಮುಖಿ ಕೆಲಸ ನಿರ್ವಹಿಸುವುದರ ಜತೆಗೆ ಭಾಷಾಭಿಮಾನ ಹೆಚ್ಚಿಸುವ ಕಾರ್ಯಕ್ರಮಗಳು ನಿತ್ಯನಿರಂತರವಾಗಿ ನಡೆಯಲಿ ಎಂದರು. ಇದೇ ವೇಳೆ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿಯನ್ನು ಹಿರಿಯ ಯಕ್ಷಕಲಾವಿದ ಹಳ್ಳಾಡಿ ಕೃಷ್ಣ ನಾಯ್ಕ್ ಇವರಿಗೆ ಯಕ್ಷ ಚಿಂತಕ ಪ್ರೊ. ಎಸ್.ವಿ ಉದಯ್ ಕುಮಾರ್ ಶೆಟ್ಟಿ ಪ್ರದಾನ ಮಾಡಿದರು. ಅಧ್ಯಕ್ಷತೆಯನ್ನು ಅಘೋರೇಶ್ವರ ಕಲಾರಂಗದ ಅಧ್ಯಕ್ಷ ಉಮೇಶ್ ನಾಯರಿ ವಹಿಸಿದ್ದರು. ಕ್ರೀಡಾ ಸಾಧಕಿ ತೃಪ್ತಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತಾರಾನಾಥ ಹೊಳ್ಳ ಇವರನ್ನು ಅಭಿನಂದಿಸಲಾಯಿತು.

ಮುಖ್ಯ ಅಭ್ಯಾಗತರಾಗಿ ಅಘೋರೇಶ್ವರ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಕಾರಂತ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜಗದೀಶ್ ಶೆಟ್ಟಿ, ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ಕುಂದಾಪುರ ನ್ಯಾಯವಾದಿ ಬನ್ನಾಡಿ ಸೋಮನಾಥ ಹೆಗ್ಡೆ, ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ್ಷ ಅನಿಲ್ ಸುವರ್ಣ, ರೋಟರಿ ವಲಯ ಸೇನಾನಿ ನಿತ್ಯಾನಂದ ನಾಯರಿ, ಜಯಕರ್ನಾಟಕ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ, ಗಾಣಿಗ ಯುವ ಸಂಘಟನೆ ಕೋಟ ಅಧ್ಯಕ್ಷ ಗಿರೀಶ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಪ್ರಭಾಕರ ನಾಯರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನೆಯ ಪ್ರಮುಖರಾದ ವಿಶ್ವನಾಥ್ ಗಾಣಿಗ ಸ್ವಾಗತಿಸಿ, ಸನ್ಮಾನಪತ್ರವನ್ನು ಸದಸ್ಯ ರವಿ ಬನ್ನಾಡಿ ವಾಚಿಸಿದರು. ಕಾರ್ಯಕ್ರಮವನ್ನು ನಾಗೇಂದ್ರ ಆಚಾರ್ ನಿರೂಪಿಸಿದರು. ಕಲಾರಂಗದ ಕೋಶಾಧಿಕಾರಿ ರೇವತಿ ಎಸ್ ನಾಯರಿ ವಂದಿಸಿದರು. ರಾಧಕೃಷ್ಣ ಬ್ರಹ್ಮಾವರ, ನವೀನ್ ನಾಯರಿ ಸಹಕರಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಥಬೀದಿ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

ಮಂಗಳೂರು, ನ.26: ಡಾ. ಪಿ. ದಯಾನಂದ ಪೈ-ಪಿ.ಸತೀಶ್ ಪೈ. ಸರ್ಕಾರಿ ಪ್ರಥಮ...

ಆಳ್ವಾಸ್ ಕಾಲೇಜಿನಲ್ಲಿ ಸಿನಿಮಾ ರಸಗ್ರಹಣ ಕಾರ್ಯಾಗಾರ

ವಿದ್ಯಾಗಿರಿ, ನ.26: ಗಾಳಿ, ನೀರು, ಅಗ್ನಿಯಷ್ಟೇ ‘ದೃಶ್ಯ-ಶ್ರವ್ಯ ಮಾಧ್ಯಮ’ವೂ ಬದುಕಿನ ಅವಿಭಾಜ್ಯ...

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ಅಬ್ಬನಡ್ಕ ಭಜಕೆರೆ ಗಮ್ಮತ್ತ್ದ ಕೆಸರ್ದಗೊಬ್ಬು

ಬೆಳ್ಮಣ್, ನ.26: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...

ಹಾಲಾಡಿ: ಕಾದಂಬರಿ ಲೋಕಾರ್ಪಣೆ

ಕುಂದಾಪುರ, ನ.26: ಹಾಲಾಡಿಯ ಬೆಳಾರ್‌ಮಕ್ಕಿ ಮಂಜುನಾಥ ಕಾಮತ್‌ರವರು ಬರೆದ 'ಕಣ್ತೆರೆದ ಕನಸು'...
error: Content is protected !!