ಉಡುಪಿ, ನ.24: ತುಳುಕೂಟ ಉಡುಪಿ (ರಿ,) ವತಿಯಿಂದ ದಿ. ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ 29ನೇ ವರ್ಷದ ‘ತುಳು ಭಾವಗೀತೆ ಸ್ಪರ್ಧೆ’ಯ ಉದ್ಘಾಟನೆಯನ್ನು ಉಡುಪಿಯ ಹಿರಿಯ ವಕೀಲರಾದ ಎಂ. ಶಾಂತಾರಾಮ್ ಶೆಟ್ಟಿ ನೆರವೇರಿಸಿದರು. ವೇದಿಕೆಯಲ್ಲಿ ತುಳುಕೂಟದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ವೀಣಾ ಶೆಟ್ಟಿ, ಡಾ. ಭರತ್ ಕುಮಾರ್ ಪೊಲಿಪು, ಭುವನಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ಕೋಶಾಧಿಕಾರಿ ಎಂ.ಜಿ.ಚೈತನ್ಯ ಹಾಗೂ ತುಳು ಭಾವಗೀತೆ ಸ್ಪರ್ಧೆಯ ಜಯರಾಂ ಮಣಿಪಾಲ್ ಉಪಸ್ಥಿತರಿದ್ದರು. ಕರ್ನಾಟಕ ಜಾನಪದ ಕೋಗಿಲೆ ಗೌರವ ಡಾಕ್ಟರೇಟ್ ಪುರಸ್ಕೃತ ಗಣೇಶ್ ಗಂಗೊಳ್ಳಿ ಇವರನ್ನು ಸನ್ಮಾನಿಸಲಾಯಿತು. ಯಶೋಧಾ ಕೇಶವ್ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಗಂಗಾಧರ್ ಕಿದಿಯೂರು ವಂದಿಸಿದರು.
ತುಳು ಭಾವಗೀತೆ ಸ್ಪರ್ಧೆ

ತುಳು ಭಾವಗೀತೆ ಸ್ಪರ್ಧೆ
Date: