Friday, November 15, 2024
Friday, November 15, 2024

ಭಜನಾ ಕ್ರಾಂತಿಗೆ ಮುನ್ನುಡಿ ಬರೆದ ಕಡಿಯಾಳಿ ಕ್ಷೇತ್ರ: ಕಾಣಿಯೂರು ಮಠಾಧೀಶರು

ಭಜನಾ ಕ್ರಾಂತಿಗೆ ಮುನ್ನುಡಿ ಬರೆದ ಕಡಿಯಾಳಿ ಕ್ಷೇತ್ರ: ಕಾಣಿಯೂರು ಮಠಾಧೀಶರು

Date:

ಉಡುಪಿ: ಸಮಗ್ರ ಜೀರ್ಣೋದ್ದಾರಗೊಳ್ಳುತ್ತಿರುವ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮನೆ ಮನೆ ಭಜನೆ ಗ್ರಾಮ ಭಜನೆಯನ್ನು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರು ಉದ್ಘಾಟಿಸಿದರು.

ದೇವಸ್ಥಾನವೊಂದು ಸಮಗ್ರವಾಗಿ ಜೀರ್ಣೋದ್ಧಾರಗೊಳ್ಳುವಾಗ ಜಾತಿಮತ ಭೇದವಿಲ್ಲದೆ ಆ ಗ್ರಾಮದ ಎಲ್ಲಾ ಭಕ್ತರ ಮನೆಗಳಲ್ಲಿ ಭಜನೆ ಮಾಡುವುದು ವಿಶಿಷ್ಟ ಕಲ್ಪನೆಯ ಕ್ರಾಂತಿಯಾಗಿದೆ. ನಾವು ಬೇರೆ ಬೇರೆ ರೀತಿಯ ಭಜನೆಗಳನ್ನು ಕಂಡಿದ್ದೇವೆ. ಇದು ಮಾತ್ರ ವಿಶಿಷ್ಟವಾದುದು. ಇದರಿಂದ ದೇವಸ್ಥಾನದ ಜತೆ ಮನೆಗಳಲ್ಲಿಯೂ ಸಾನಿಧ್ಯ ವೃದ್ಧಿಯಾಗುತ್ತದೆ ಎಂದು ಶ್ರೀಪಾದರು ಹೇಳಿದರು.

ದೇವಸ್ಥಾನದ ಸ್ಟಿಕ್ಕರ್ ಬಿಡುಗಡೆಗೊಳಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು, ಈ ವಿನೂತನ ಕಲ್ಪನೆಯನ್ನು ಬೇರೆ ದೇವಸ್ಥಾನಗಳಲ್ಲಿಯೂ ಅಳವಡಿಸಿಕೊಳ್ಳಬಹುದು. ದೇವಸ್ಥಾನದಲ್ಲಿ ಹಬ್ಬದ ವಾತಾವರಣವಿರುವಂತೆ ಭಕ್ತರ ಮನೆಗಳಲ್ಲಿಯೂ ಹಬ್ಬದ ವಾತಾವರಣ ಮೂಡಲು ಮನೆ ಮನೆ ಭಜನೆ ಸಹಕಾರಿಯಾಗುತ್ತದೆ ಎಂದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಸದಸ್ಯರಾದ ರಾಕೇಶ್ ಜೋಗಿ ಸ್ವಾಗತಿಸಿ, ಸಂದೀಪ್ ಸನಿಲ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು. ಶಾಸಕ ಕೆ.ರಘುಪತಿ ಭಟ್, ವ್ಯವಸ್ಥಾಪನ ಮಂಡಳಿ ಸದಸ್ಯ ಕೆ. ನಾಗರಾಜ ಶೆಟ್ಟಿ, ಗ್ರಾಮ ಭಜನೆ ಸಂಚಾಲಕ ಜೀವರತ್ನ ದೇವಾಡಿಗ, ಅರ್ಚಕ ರಾಧಾಕೃಷ್ಣ ಉಪಾಧ್ಯಾಯ, ಪವಿತ್ರಪಾಣಿ ಕುಂಜಿತ್ತಾಯ ಶ್ರೀನಿವಾಸ ಉಪಾಧ್ಯಾಯ ಉಪಸ್ಥಿತರಿದ್ದರು. ಭಜನಾ ತಂಡದ ನಾಯಕಿಯರಾದ ಗೀತಾ ನಾಯಕ್, ಸುಮಲತಾ ಉದಯ್, ಅಶ್ವಿನಿ ಪೈ, ಶಕುಂತಲಾ ಶೆಟ್ಟಿ, ಇವರನ್ನು ಗೌರವಿಸಲಾಯಿತು

ಸ್ವರ್ಣ ಕಲಶಕ್ಕೆ 60 ಗ್ರಾಂ ಚಿನ್ನ ಸಮರ್ಪಣೆ: ಅರ್ಚಕ ದುರ್ಗಾಪ್ರಸಾದ್ ಉಪಾಧ್ಯಾಯ ಮತ್ತು ಶಾಂತಿ ಸುಧೀಂದ್ರ ತುಮಕೂರು ಅವರು ಸುಬ್ರಹ್ಮಣ್ಯ ದೇವರ ಗುಡಿಗೆ ಸ್ವರ್ಣಕಲಶದ ಬಾಬ್ತು 60 ಗ್ರಾಂ ಚಿನ್ನವನ್ನು ತನ್ನ ತೀರ್ಥರೂಪ ಶ್ರೀಪತಿ ಉಪಾಧ್ಯ ಮತ್ತು ಜಯಂತಿ ಅವರ ಸ್ಮರಣಾರ್ಥ ಸಮರ್ಪಿಸಿದರು.

ನಿತ್ಯ 60 ಮನೆಗಳಲ್ಲಿ ಭಜನೆ: ಮೊದಲ ದಿನ ಸುಮಾರು 65 ಮನೆಗಳಲ್ಲಿ ಭಜನೆ ನಡೆಯಿತು. ಪ್ರತಿ ಭಜನೆ ತಂಡದಲ್ಲಿ ತಲಾ 30 ರಿಂದ 40 ಮಹಿಳೆಯರು, ಮಕ್ಕಳು, ಯುವಕರು, ಹಿರಿಯರು ವಿಶೇಷ ಆಸಕ್ತಿಯಿಂದ ಪಾಲ್ಗೊಂಡರು. ಇಂತಹ ಐದು ತಂಡ ನಿತ್ಯ 60 ಮನೆಗಳನ್ನು ಭಜನೆ ಮೂಲಕ ಸಂಪರ್ಕಿಸಲಿದೆ. ಒಂದು ತಿಂಗಳ ಕಾಲ ಇದು ನಡೆಯಲಿದೆ. ಪ್ರತಿಯೊಂದು ಮನೆಯಲ್ಲಿ ದೀಪ ಹಚ್ಚಿ, ರಂಗವಲ್ಲಿ ಬಿಡಿಸಿ ಊದುಬತ್ತಿ ಹಚ್ಚಿ ಹೃದಯಾಂತರಾಳದಿಂದ ಸ್ವಾಗತಿಸಲಾಯಿತು. ಕೆಲವು ಮನೆಯಲ್ಲಿ ಹಣ್ಣು-ಹಂಪಲುಗಳೊಂದಿಗೆ ಪಾನಕದ ವ್ಯವಸ್ಥೆ ಮಾಡಿದ್ದರು. ಭಜನೆ ತಂಡದವರು ಮನೆಮನೆಗೆ ಶ್ರೀದೇವರ ಕುಂಕುಮ ಪ್ರಸಾದ ಪಂಚಕಜ್ಜಾಯ ಕಟ್ಟು, ಭಜನಾ ಪುಸ್ತಕವನ್ನು ಮತ್ತು ಬ್ರಹ್ಮಕಲಶೋತ್ಸವದ ಸ್ಟಿಕ್ಕರ್ ನೀಡುತ್ತಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಮೂಲಕ ನರೇಂದ್ರ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ: ಯಶ್ಪಾಲ್ ಸುವರ್ಣ

ಉಡುಪಿ, ನ.14: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆಗೆ...

ಒಬ್ಬರು ರಕ್ತದಾನ ಮಾಡುವುದರಿಂದ ಮೂರು ಜೀವಗಳನ್ನು ಉಳಿಸಲು ಸಾಧ್ಯ: ಡಾ. ರಂಜಿತ ರಾವ್

ಮಂಗಳೂರು, ನ.14: ಒಬ್ಬರು ರಕ್ತದಾನ ಮಾಡುವುದರಿಂದ ಮೂರು ಜನರ ಪ್ರಾಣವನ್ನು ಉಳಿಸಬಹುದು...

ಅಧ್ಯಕ್ಷರ ಆಯ್ಕೆ: ಚುನಾವಣಾ ಅಧಿಕಾರಿ ನೇಮಕ

ಉಡುಪಿ, ನ.14: ಜಿಲ್ಲೆಯ ಬೈಂದೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕೊಲ್ಲೂರು ಗ್ರಾಮ...

ಡಿ. ದೇವರಾಜ ಅರಸು ವಿದೇಶಿ ವ್ಯಾಸಾಂಗ ವೇತನ: ಅರ್ಜಿ ಆಹ್ವಾನ

ಉಡುಪಿ, ನ.14: ಹಿಂದುಳಿದ ವರ್ಗಗಳ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ...
error: Content is protected !!